ವಿದೇಶಿ ಮಾನಸಿಕತೆ ಕಿತ್ತೊಗೆಯಿರಿ

Contributed bykeregaddemurthy@gmail.com|Vijaya Karnataka
strengthening indian mindset leaders insight to combat foreign influence
ವಿಕ ಸುದ್ದಿಲೋಕ ಶಿರಸಿ

ಸನಾತನಿಗಳ, ಭಾರತೀಯರ ಮಾನಸಿಕತೆ ದುರ್ಬಲ ಮಾಡುವ ಪ್ರಯತ್ನ ಜಗತ್ತಿನಾದ್ಯಂತ ನಡೆಯುತ್ತಿದೆ. ಇದನ್ನು ನಿಯಂತ್ರಣ ಮಾಡುವ ಜರೂರತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರೀಧರ ಹೆಗಡೆ ಹಿರೇಹದ್ದ ಹೇಳಿದರು.
ನಗರದ ಪಂಡಿತ ದೀನದಯಾಳ ಭವನದಲ್ಲಿಶುಕ್ರವಾರ ಆಯೋಜಿಸಿದ್ದ ವಿಭಜನೆ ವಿಭೀಷಿಕಾ ಸ್ಮೃತಿ ದಿನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘‘ಸುರಾಜ್ಯ ನ್ಯಾಯದ ಮೇಲೆ ಕಟ್ಟಲ್ಪಡಬೇಕು. ಸನಾತನ ಧರ್ಮ ಬೆಳೆಸುವ ಕಾರ್ಯ ಆಗಬೇಕು. ಶ್ರಮದಿಂದ ವೈಭವದ ದೇಶ ಕಟ್ಟಬೇಕು. ಸಂಘಟಿತವಾಗಿ ಕೆಲಸ ಮಾಡಬೇಕು. ಸನಾತನಿಗಳ ಭಾವನೆಗೆ ಶಕ್ತಿ ನೀಡುವ ಪಕ್ಷ ಆಡಳಿತಕ್ಕೆ ಬರಬೇಕು’’ ಎಂದು ಅಭಿಪ್ರಾಯಪಟ್ಟರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘‘ದೇಶವು ವಿಶ್ವಗುರುವಾಗಲು ಈ ನೆಲದ ಸಂಸ್ಕೃತಿಗೆ ಬೆಂಬಲ ನೀಡಬೇಕು. ಭಾರತದಲ್ಲಿರುವ ವಿದೇಶಿ ಮಾನಸಿಕತೆ ಬೇರು ಸಹಿತ ಕಿತ್ತೊಗೆಯುವ ಕೆಲಸ ಮಾಡಬೇಕು’’ ಎಂದರು.

ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಎನ್ .ಎಸ್ .ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಸುಬ್ರಾಯ ವಾಳ್ಕೆ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ, ಬನವಾಸಿ ಮಂಡಳ ಅಧ್ಯಕ್ಷ ರಮೇಶ ನಾಯ್ಕ ಇದ್ದರು. ಬಿಜೆಪಿ ನಗರ ಮಂಡಳ ಅಧ್ಯಕ್ಷ ಆನಂದ ಸಾಲೇರ ಸ್ವಾಗತಿಸಿದರು. ನಾಗರಾಜ ನಾಯ್ಕ ನಿರೂಪಿಸಿದರು.

14ಎಸ್ಸಾರೆಸ್ 8

ಶಿರಸಿಯಲ್ಲಿವಿಭಜನೆ ವಿಭೀಷಿಕಾ ಸ್ಮೃತಿ ದಿನ ಕಾರ್ಯಕ್ರಮದಲ್ಲಿ ಶ್ರೀಧರ ಹೆಗಡೆ ಹಿರೇಹದ್ದ ಮಾತನಾಡಿದರು.