ಕಮಿಷನರೆಟ್ ವ್ಯಾಪ್ತಿಯ ನಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ 4 ಮಂದಿಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ.ಆ.14ರಂದು ಸಂಜೆ 4.10ರ ವೇಳೆಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪಚ್ಚನಾಡಿ ಕ್ರಾಸ್ ಬಳಿ ಮಾದಕ ವಸ್ತು ಸೇವನೆ ಆರೋಪದಡಿ ಚಿಕ್ಕಮಗಳೂರು ಜಿಲ್ಲಾಬನ್ನೂರ್ ಹಂಗರವಳ್ಳಿ ಮೂಲದ, ಕಾವೂರು ಮಾಲಾಡಿ ಕ್ರಾಸ್ ಬಳಿ ವಾಸವಾಗಿರುವ ರಂಜಿತ್ ಆರ್ . (27) ಎಂಬಾತನನ್ನು ಬಂಧಿಸಿದ್ದಾರೆ.
ಬಲ್ಲಾಳ್ ಬಾಗ್ ನ ಶ್ರೀ ದೇವಿ ಕಾಲೇಜು ರಸ್ತೆಯಲ್ಲಿಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿದ್ದ ಕೇರಳ ಕೋಯಿಕೋಡ್ ಪುತ್ತನ್ ಪುರಯ್ , ವೆಂಗಳಂ ನಿವಾಸಿ ಅಭಯ್ ರಾಜ್ (21) ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಕುದ್ರೋಳಿ ಗ್ರೀನ್ ಪಾರ್ಕ್ ಬಳಿ ಮಾದಕ ವಸ್ತು ಸೇವನೆ ಮಾಡಿ ತೂರಾಡುತ್ತ ಸಾಗುತ್ತಿದ್ದ ಉಡುಪಿ ಕುಂಜಿಬೆಟ್ಟುವಿನ ಶಿವನಿಧಿ ಆಚಾರ್ಯ(21) ಹಾಗೂ ಕಣ್ಣೂರು ಜಿಲ್ಲೆಪುದುವಚೇರಿಯ ಉಜ್ವಲ್ ಪಿ.ವಿ. (22) ಎಂಬವರನ್ನು ಬಂದರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಎಲ್ಲಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆರೋಪಿಗಳ ವಿರುದ್ಧ ಆಯಾ ಠಾಣೆಯಲ್ಲಿಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.