ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ80ನೇ ಸ್ವಾತಂತ್ರ್ಯೋತ್ಸವ ಮತ್ತು ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು.ಧ್ವಜಾರೋಹಣವನ್ನು ಪಯಸ್ವಿನಿ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ರಾಮಚಂದ್ರ ಕೆ.ಬಿ. ನೆರವೇರಿಸಿದರು. ಪಯಸ್ವಿನಿ ಎಜುಕೇಶನ್ ಸೊಸೈಟಿ ಜತೆಕಾರ್ಯದರ್ಶಿ ಜಯರಾಮ ರೈ ಜಾಲ್ಸೂರು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಶ್ಯಾಂಕುಮಾರ್ ಬೆನಕ, ಗಂಗಾಧರ ಗೌಡ ಕಾಳಮನೆ, ನಾರಾಯಣ ಗೌಡ ಬೊಮ್ಮೆಟ್ಟಿ, ಎಸ್ ಡಿಎಂಸಿ ಅಧ್ಯಕ್ಷ ಚಂದ್ರಶೇಖರ, ಮುಖ್ಯಶಿಕ್ಷಕಿ ಜಯಲತಾ ಕೆ.ಆರ್ . ಉಪಸ್ಥಿತರಿದ್ದರು.
2025-26ನೇ ಸಾಲಿನ ಎಸ್ ಎಸ್ ಎಲ್ ಸಿಯಲ್ಲಿಶೇ. 100 ಫಲಿತಾಂಶ ಲಭಿಸಿದ್ದು, ಎಲ್ಲವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲೆಯಲ್ಲಿಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು.
ಶಿಕ್ಷಕ ಕುಮಾರ್ ಲಮಾಣಿ ವಂದಿಸಿದರು. ಶಿಕ್ಷಕ ಶಿವಪ್ರಕಾಶ ಕೆ. ನಿರೂಪಿಸಿದರು. ಶಿಕ್ಷಕರಾದ ಶಿವಪ್ರಸಾದ ಕೆ., ಮೀನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಫೋಟೋ...
15ಎಸ್ ಯುಎಲ್ -ಜಾಲ್ಸೂರು ಪ್ರೌಢಶಾಲೆಯಲ್ಲಿದತ್ತಿನಿಧಿ ವಿತರಣೆ ನಡೆಯಿತು.