ಭಟ್ಕಳ : ಇಲ್ಲಿನ ತಾಲೂಕು ಆಡಳಿತ ಆಶ್ರಯದಲ್ಲಿತಾಲೂಕು ಕ್ರೀಡಾಂಗಣದಲ್ಲಿಆಯೋಜಿಸಲಾದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿಸಹಾಯಕ ಆಯುಕ್ತ ಮಹೇಶ ಧ್ವಜಾರೋಹಣ ನೆರವೇರಿಸಿದರು.ನಂತರ ಮಾತನಾಡಿದ ಅವರು, ‘‘ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಜನರು ಬಲಿದಾನ ಮಾಡಿದ್ದಾರೆ. ದೇಶ ಇಂದು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿಮಹತ್ತರವಾದುದನ್ನು ಸಾಧಿಸಿದೆ,’’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಂಕಾಳ ವೈದ್ಯ, ‘‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ನಾವೆಲ್ಲಸ್ಮರಿಸಿಕೊಳ್ಳಬೇಕು. ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರು ಇದರ ಪ್ರಯೋಜನ ಪಡೆದದುಕೊಳ್ಳಬೇಕು,’’ ಎಂದು ತಿಳಿಸಿದರು.
ಭಟ್ಕಳ ನಗರಸಭಾ ಆಯುಕ್ತ ಬಾಬಾ ಸಾಹೇಬ್ ಮಾಣೆ, ಡಿವೈಎಸ್ಪಿ ಗಿರೀಶ, ಜಾಲಿ ಪಪಂ ಅಧ್ಯಕ್ಷೆ ಆಫ್ಸಾ, ಉಪಾಧ್ಯಕ್ಷ ಇಮ್ರಾನ್ ಲಂಕಾ, ಮುಖ್ಯಾಧಿಕಾರಿ ಮಂಜಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜು ನಾಯ್ಕ, ರಮೇಶ ನಾಯ್ಕ, ಕರ್ನಾಟಕ ಸರಕಾರ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಮ್ .ಎನ್ .ನಾಯ್ಕ, ಕಾರ್ಯದರ್ಶಿ ವೆಂಕಟೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ್ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಎಸ್ ಐ ನವೀನ್ , ಡಿಜಿ ಐಜಿಪಿ ಪ್ರಶಂಸನಾ ಪದಕ ಪಡೆದ ಹೆಡ್ ಕಾನ್ ಸ್ಟೇಬಲ್ ದೀಪಕ ನಾಯ್ಕ ಹಾಗೂ ಅತಿ ಹೆಚ್ಚು ಅಂಕ ಪಡೆದ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪೋಟೋ: 15ಬಿಕೆಎಲ್ 1 :
ಭಟ್ಕಳದಲ್ಲಿಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿಎಸಿ ಮಹೇಶ ಧ್ವಜಾರೋಹಣ ನೆರವೇರಿಸಿದರು.