ಪೇಜ್ 4 ಲೀಡ್

Contributed bybabitha.salian@timesgroup.com|Vijaya Karnataka
beautify your outdoors with planters
ಔಟ್ ಡೋರ್ ಪ್ಲಾಂಟರ್ (ಸ್ಲಗ್ ) 794

ಹೊರಾಂಗಣ ಸುಂದರಗೊಳಿಸುವ ಆಕರ್ಷಕ ಕುಂಡ
ಇಂಟ್ರೊ

ಮನೆಯ ಮುಂಭಾಗದ ಅಂಗಳ ಅಥವಾ ಬಾಲ್ಕನಿಗೆ ಹೊಸ ರೂಪ ನೀಡಲು ಅಧಿಕ ಖರ್ಚು ಅಥವಾ ನವೀಕರಣದ ಅಗತ್ಯವಿಲ್ಲ. ಕೇವಲ ಆಕರ್ಷಕ ಕುಂಡಗಳು ಮತ್ತು ಗಿಡಗಳ ಸರಿಯಾದ ಆಯ್ಕೆಯಿಂದ ಇಡೀ ಜಾಗದ ನೋಟವನ್ನೇ ಬದಲಾಯಿಸಬಹುದು.

---------------------------------

ಉತ್ತಮ ಪೀಠೋಪಕರಣ ಇಡೀ ಕೋಣೆಯ ರೂಪವನ್ನು ಬದಲಾಯಿಸುವಂತೆ ಸರಿಯಾದ ಒಂದು ಹೊರಾಂಗಣ ಪ್ಲಾಂಟರ್ ಇಡೀ ಜಾಗಕ್ಕೆ ಕಳೆ ನೀಡುತ್ತದೆ. ಪ್ಲಾಂಟರ್ ಅಥವಾ ಕುಂಡ ಕೇವಲ ಮಣ್ಣು ತುಂಬುವ ಪಾತ್ರೆಯಲ್ಲ, ಅದು ಗಿಡಕ್ಕೆ ನೀಡಲಾಗುವ ಸುಂದರ ಚೌಕಟ್ಟು ಮತ್ತು ಇಡೀ ಪರಿಸರದಲ್ಲಿಎದ್ದು ಕಾಣುವ ಒಂದು ವಿರಾಮ ಚಿಹ್ನೆ. ಒಂದು ಮೂಲೆ ಸೃಜನಾತ್ಮಕವಾಗಿ ವಿನ್ಯಾಸಗೊಂಡಿದೆಯೇ ಅಥವಾ ಸುಮ್ಮನೆ ಏನೋ ತುಂಬಿಟ್ಟಂತಿದೆಯೇ ಎಂಬುದನ್ನು ನಿರ್ಧರಿಸುವುದೇ ಈ ಕುಂಡಗಳು. ಅದರ ಆಕಾರ, ಫಿನಿಶಿಂಗ್ ಮತ್ತು ಅದನ್ನು ಇಡುವ ಜಾಗ ಹೀಗೆ ಪ್ರತಿ ನಿರ್ಧಾರವೂ ಮುಖ್ಯವಾಗುತ್ತದೆ. ಆದ್ದರಿಂದ ಮನೆಯ ಹೊರಭಾಗಕ್ಕೆ ಹೊಸ ಕಳೆ ನೀಡಲು ಮತ್ತು ಗಾರ್ಡನ್ , ಬಾಲ್ಕನಿ, ಪ್ರವೇಶ ದ್ವಾರವನ್ನು ಆಧುನಿಕ ರೆಸಾರ್ಟ್ ನಂತೆ ಸುಂದರಗೊಳಿಸಲು ಗಿಡಗಳು ಮಾತ್ರವಲ್ಲ, ಅವುಗಳನ್ನು ನೆಡುವ ಕುಂಡಗಳ ವಿನ್ಯಾಸವೂ ಅಷ್ಟೇ ಮುಖ್ಯವಾಗುತ್ತದೆ. ಇಂಥ ವೈವಿಧ್ಯಮಯ ಕುಂಡಗಳ ವಿವರ ಇಲ್ಲಿದೆ.

ಮ್ಯಾಟ್ ಬ್ಯಾ$್ಲಕ್ ಟ್ರಫ್ : ಇದು ಗಾಢ ಕಪ್ಪು ಬಣ್ಣದ, ಆಯತಾಕಾರದ ಉದ್ದನೆಯ ಲೋಹ ಅಥವಾ ಫೈಬರ್ ಕುಂಡವಾಗಿದೆ. ಕಪ್ಪು ಕಬ್ಬಿಣದ ಬೇಲಿ ಅಥವಾ ಕ್ಲಾಸಿಕ್ ಗೋಡೆಗಳ ಪಕ್ಕದಲ್ಲಿಇಡಲು ಇದು ಸೂಕ್ತವಾಗಿದ್ದು, ಈ ಕುಂಡಗಳ ನಡುವೆ ತಿಳಿ ಬಣ್ಣದ ನದಿ ಕಲ್ಲುಗಳನ್ನು ಹರಡುವುದರಿಂದ ಕಪ್ಪು ಬಣ್ಣಕ್ಕೆ ಉತ್ತಮ ಕಾಂಟ್ರಾಸ್ಟ್ ಸಿಗುತ್ತದೆ. ಇದಕ್ಕೆ ನೇರವಾಗಿ ಬೆಳೆಯುವ ಸ್ನೇಕ್ ಪ್ಲಾಂಟ್ ಮತ್ತು ಕೆಳಗೆ ಹರಡಿಕೊಳ್ಳುವ ಗುಲಾಬಿ ಅಥವಾ ಅಂಬರ್ ಬಣ್ಣದ ಬೋಗನ್ ವಿಲ್ಲಾಗಿಡಗಳು ಅತ್ಯುತ್ತಮ ಲುಕ್ ನೀಡುತ್ತವೆ.

ಕಪ್ಪು ಅರ್ನ್ ಪ್ಲಾಂಟರ್ : ಮನೆಯ ಮುಖ್ಯ ದ್ವಾರದ ಅಂದ ಹೆಚ್ಚಿಸಲು ಸಾಂಪ್ರದಾಯಿಕ ಕರಕುಶಲ ಶೈಲಿಯ ದೊಡ್ಡ ಕಪ್ಪು ಅರ್ನ್ ಎಂದರೆ ಕಲಶದಾಕಾರದ ಕುಂಡಗಳನ್ನು ಬಳಸಬಹುದು. ಬಾಗಿಲಿನ ಎರಡೂ ಬದಿಗಳಲ್ಲಿಇಂತಹ ಎತ್ತರದ ಕುಂಡಗಳನ್ನು ಇಡುವುದರಿಂದ ಮನೆಗೆ ರಾಜಮನೆತನದ ಅಥವಾ ಹೋಟೆಲ್ ಪ್ರವೇಶದ್ವಾರದಂತಹ ಭವ್ಯತೆ ಸಿಗುತ್ತದೆ. ಇಂಥ ಕುಂಡಕ್ಕೆ ಬಾಕ್ಸ್ ವುಡ್ ಟೋಪಿಯರಿ ಅಥವಾ ಸಣ್ಣ ಅರಳಿದ ಹೂವಿನ ಗಿಡಗಳು ಸೂಕ್ತ ಆಯ್ಕೆ.

ಗ್ಲೋಯಿಂಗ್ ಪ್ಲುಮೇರಿಯಾ ಬೌಲ್ : ಇದು ಆಳವಿಲ್ಲದ ಹಾಗೂ ಅಗಲವಾದ ಕಲ್ಲಿನ ಬೌಲ್ ಮಾದರಿಯ ಕುಂಡವಾಗಿದೆ. ಇದರ ಗಿಡದ ಕೆಳಭಾಗದಲ್ಲಿಸಣ್ಣದಾದ ಅಪ್ ಲೈಟಿಂಗ್ ಅಥವಾ ಹಳದಿ ಬೆಳಕಿನ ದೀಪಗಳನ್ನು ಅಳವಡಿಸಲಾಗುತ್ತದೆ. ರಾತ್ರಿ ವೇಳೆ ಈ ದೀಪಗಳು ಗಿಡದ ಎಲೆ ಮತ್ತು ಹೂವುಗಳ ಮೇಲೆ ಬೆಳಕು ಚೆಲ್ಲಿಇಡೀ ಆವರಣಕ್ಕೆ ರೋಮ್ಯಾಂಟಿಕ್ ಮತ್ತು ಶಾಂತ ವಾತಾವರಣ ನೀಡುತ್ತವೆ. ಇಂಥ ಕುಂಡಕ್ಕೆ ಸುಗಂಧಭರಿತ ಪ್ಲುಮೇರಿಯಾ ಅಥವಾ ಸಣ್ಣ ಅಲಂಕಾರಿಕ ಮರಗಳು ಸೂಕ್ತ.

ಎತ್ತರದ ಚಾರ್ಕೋಲ್ ಕಾಲಂ: ಕಡು ಬೂದು ಅಥವಾ ಚಾರ್ಕೋಲ್ ಬಣ್ಣದ, ಕಂಬದಂತೆ ಎತ್ತರವಿರುವ ಚೌಕಾಕಾರದ ಆಧುನಿಕ ಕುಂಡಗಳು ಕಾಂಕ್ರೀಟ್ ಗೋಡೆ ಅಥವಾ ಕಾಂಪೌಂಡ್ ಮೂಲೆಗಳನ್ನು ಹೈಲೈಟ್ ಮಾಡಲು ಅತ್ಯಂತ ಉಪಯುಕ್ತವಾಗಿವೆ. ಇದಕ್ಕೆ ಸೂಕ್ತ ಗಿಡಗಳೆಂದರೆ ಎತ್ತರ ಮತ್ತು ಆಕರ್ಷಕವಾಗಿ ಬೆಳೆಯುವ ಜಪಾನೀಸ್ ಮ್ಯಾಪಲ್ ಅಥವಾ ಅಲಂಕಾರಿಕ ಹುಲ್ಲಿನ ಗಿಡಗಳು.

ಕೋರ್ ಟೆನ್ ಸ್ಟೀಲ್ ಲಾಂಗ್ ಬಾಕ್ಸ್ : ಇತ್ತೀಚಿನ ದಿನಗಳಲ್ಲಿಆರ್ಕಿಟೆಕ್ಟ್ಗಳು ಹೆಚ್ಚಾಗಿ ಬಳಸುವ ಕೋರ್ ಟೆನ್ ಸ್ಟೀಲ್ ಪ್ಲಾಂಟರ್ ಕಾಲಕ್ರಮೇಣ ತುಕ್ಕು ಹಿಡಿದಂತೆ ಗಾಢ ಕಿತ್ತಳೆ-ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಇಂಡಸ್ಟ್ರಿಯಲ್ ಶೈಲಿಯ ಕುಂಡಗಳು ನಯವಾದ ಕಲ್ಲುಅಥವಾ ಮರದ ಡೆಕ್ಕಿಂಗ್ ಗೆ ಮಾಡರ್ನ್ ಲುಕ್ ನೀಡುತ್ತವೆ. ಇದಕ್ಕೆ ಕೆಂಪು ಕಾರ್ಡಿಲೈನ್ , ಕುಬ್ಜ ತಾಳೆ ಮರ ಮತ್ತು ಅಗಲವಾದ ಹಸಿರು ಎಲೆಗಳ ಗಿಡಗಳು ಉತ್ತಮ ಆಯ್ಕೆ.

ಸ್ಪ್ಯಾಟೆಡ್ ಟೀಕ್ ಟ್ರಿಯೋ: ತೇಗದ ಮರದಿಂದ ಮಾಡಲಾಗಿರುವ, ಲಂಬ ಪಟ್ಟಿಗಳನ್ನು ಹೊಂದಿರುವ ಸಣ್ಣ, ಮಧ್ಯಮ, ದೊಡ್ಡ ಎಂಬ ಮೂರು ವಿಭಿನ್ನ ಗಾತ್ರಗಳ ದುಂಡಗಿನ ಕುಂಡಗಳ ಸೆಟ್ ಇದಾಗಿದೆ. ಇದರಲ್ಲಿರುವ ಮರದ ನೈಸರ್ಗಿಕ ಕಂದು ಬಣ್ಣವು ಕಲ್ಲಿನ ಅಥವಾ ಕಾಂಕ್ರೀಟ್ ನ ಗಟ್ಟಿ ನೆಲಹಾಸಿಗೆ ನೈಸರ್ಗಿಕ ಮೃದುತ್ವ ಮತ್ತು ಶಾಖ ತುಂಬುತ್ತದೆ. ಕೆಂಟಿಯಾ ಪಾಮ್ , ಟ್ರಾವೆಲರ್ಸ್ ಪಾಮ್ ಮತ್ತು ಅಗಲವಾದ ಹೋಸ್ಟಾ ಎಲೆಗಳ ಗಿಡಗಳು ಇದಕ್ಕೆ ಸುಂದರವಾಗಿ ಕಾಣುತ್ತವೆ.

ಚಾರ್ಕೋಲ್ ಸ್ಪಿಯರ್ ಇನ್ ಬ್ಲೂಮ್ : ಸಂಪೂರ್ಣ ಗೋಳಾಕಾರದ ಚಾರ್ಕೋಲ್ ಬಣ್ಣದ ಸ್ಪಿಯರ್ ಇನ್ ಬ್ಲೂಮ್ ಕುಂಡವು ಸ್ಕ್ಯಾ ಂಡಿನೇವಿಯನ್ ಶೈಲಿಯಲ್ಲಿರುತ್ತದೆ. ಇದರ ಸರಳ ಆಕಾರವು ಗಿಡದಲ್ಲಿಬಿಡುವ ಹೂವುಗಳಿಗೆ ಹೆಚ್ಚು ಗಮನ ಸೆಳೆಯುವಂತೆ ಮಾಡುತ್ತದೆ. ತುಂಬಿ ತುಳುಕುವಂತೆ ಬೆಳೆಯುವ ಗುಲಾಬಿ ಹೈಡ್ರೇಂಜಾ, ಪರ್ಪಲ್ ಆಸ್ಟಷ್ ರ್ ಮತ್ತು ಲ್ಯಾವೆಂಡರ್ ಹೂವಿನ ಗಿಡಗಳು ಇದರಲ್ಲಿಆಕರ್ಷಕವಾಗಿ ಕಾಣುತ್ತವೆ.

ಸ್ಕಲ್ಪ$್ಚರ್ ಬ್ರೊಮೆಲಿಯಾಡ್ ಟವರ್ : ಒಣಗಿದ ಅಥವಾ ಬಿದ್ದಿರುವ ದೊಡ್ಡ ಮರದ ಮೊಂಡನ್ನು ಲಂಬವಾಗಿ ನಿಲ್ಲಿಸಿ, ಅದನ್ನೇ ಒಂದು ಸ್ವಾಭಾವಿಕ ಕುಂಡವನ್ನಾಗಿ ಪರಿವರ್ತಿಸಲಾದ ಸ್ಕಲ್ಪ$್ಚರ್ ಬ್ರೊಮೆಲಿಯಾಡ್ ಟವರ್ ಪ್ಲಾಂಟರ್ , ಗಾರ್ಡನ್ ಗೆ ದಟ್ಟವಾದ ಕಾಡಿನ ಕಳೆ ತರುತ್ತದೆ. ವಿವಿಧ ಬಣ್ಣಗಳ ಬ್ರೊಮೆಲಿಯಾಡ್ಸ್ ಮತ್ತು ಜೇಡರ ಗಿಡಗಳು ಇದರಲ್ಲಿಚೆನ್ನಾಗಿ ಕಾಣುತ್ತವೆ.

ಫ್ಲೂಟೇಡ್ ಸ್ಟೋನ್ ಕಾಟೇಜ್ ಅರ್ನ್ : ಸಾಂಪ್ರದಾಯಿಕ ಯೂರೋಪಿಯನ್ ಕಾಟೇಜ್ ಶೈಲಿಯ ಲಂಬ ಗೆರೆಗಳನ್ನು ಹೊಂದಿರುವ ಕಲ್ಲಿನ ಕುಂಡಗಳು ನೈಸರ್ಗಿಕ ಕಲ್ಲುಅಥವಾ ಇಟ್ಟಿಗೆಯ ಗೋಡೆಗಳ ಮುಂದೆ ಇಡಲು ಮತ್ತು ಗಾರ್ಡನ್ ಹಾದಿಗಳನ್ನು ಅಲಂಕರಿಸಲು ಸೂಕ್ತ. ಮೆಜೆಂತಾ ಸ್ಟಾಕ್ , ಬ್ಲೂಲೋಬೆಲಿಯಾ ಇತ್ಯಾದಿ ಇದಕ್ಕೆ ಫರ್ಪೆಕ್ಟ್ ಆಯ್ಕೆ.

ಪಿರಮಿಡ್ ಟೆಕ್ಸ್ ಚರ್ಡ್ ಬ್ರಾಂಜ್ : ಪಿರಮಿಡ್ ಆಕಾರದ ಉಬ್ಬು ತಗ್ಗುಗಳ ಟೆಕ್ಸ$್ಚರ್ ಹೊಂದಿರುವ ಕಂಚಿನ ಬಣ್ಣದ ಆಧುನಿಕ ಕುಂಡವಿದು. ಇದು ಸೂರ್ಯನ ಬೆಳಕನ್ನು ವಿಭಿನ್ನವಾಗಿ ಪ್ರತಿಫಲಿಸುವುದರಿಂದ ಕೇವಲ ಗಿಡದ ಕುಂಡವಾಗಿರದೆ ಒಂದು ಸುಂದರ ಶಿಲ್ಪಕಲೆಯಂತೆ ಕಾಣುತ್ತದೆ. ಮರದ ಸೋಫಾಗಳ ಪಕ್ಕದಲ್ಲಿಇದು ಐಷಾರಾಮಿ ಲುಕ್ ನೀಡುತ್ತದೆ. ಬಿಳಿ ಬಣ್ಣದ ಬರ್ಡ್ ಆಫ್ ಪ್ಯಾರಡೈಸ್ ಗಿಡ ಇದಕ್ಕೆ ಸೂಕ್ತ ಆಯ್ಕೆ.

ಕಾಂಕ್ರೀಟ್ ನಲ್ಲಿಆಲಿವ್ ಮರ: ಕಚ್ಚಾ ಕಾಂಕ್ರೀಟ್ ಬಣ್ಣದ ದಪ್ಪನೆಯ ಬೌಲ್ ಮಾದರಿಯ ಇಂಥ ಕುಂಡಗಳಲ್ಲಿರುವ ಕಾಂಕ್ರೀಟ್ ನ ಬೂದು ಬಣ್ಣ ಮತ್ತು ಆಲಿವ್ ಎಲೆಗಳ ತಿಳಿ ಹಸಿರು ಬಣ್ಣದ ಸಂಯೋಜನೆಯು ಅತ್ಯಂತ ಪ್ರಶಾಂತವಾದ ಮೆಡಿಟರೇನಿಯನ್ ಕಳೆ ತರುತ್ತದೆ. ಇದಕ್ಕೆ ಸೂಕ್ತ ಗಿಡವೆಂದರೆ ಸಣ್ಣ ಆಲಿವ್ ಮರ.

ರೂಫ್ ಟಾಪ್ ಪ್ಲಾಂಟರ್ ಕ್ಲಸ್ಟರ್ : ಬಿಳಿ, ಚಾರ್ಕೋಲ್ ಮತ್ತು ತಾಮ್ರದ ಫಿನಿಶಿಂಗ್ ಹೊಂದಿರುವ ವಿವಿಧ ಎತ್ತರದ ಫೈಬರ್ ಸ್ಟೋನ್ ಕುಂಡಗಳ ಗುಂಪಾಗಿರುವ ಈ ವಿನ್ಯಾವು ಟೆರೇಸ್ ಅಥವಾ ರೂಫ್ ಟಾಪ್ ಗಾರ್ಡನ್ ಗಳಿಗೆ ಅತ್ಯಂತ ಸೂಕ್ತ. ಕೇವಲ ಒಂದೇ ಕುಂಡ ಇಡುವ ಬದಲು ಮೂರ್ನಾಲ್ಕು ಕುಂಡಗಳನ್ನು ಒಟ್ಟಿಗೆ ಇಡುವುದರಿಂದ ಆಕರ್ಷಣೆ ಹೆಚ್ಚುತ್ತದೆ. ಇದಕ್ಕೆ ಸೂಕ್ತ ಗಿಡಗಳೆಂದರೆ ಅರೆಕಾ ಪಾಮ್ ಮತ್ತು ಬನಾನಾ ಲೀವ್ ್ಸ ಗಿಡಗಳು.

ಸ್ಟೆಡ್ ಚಾರ್ಕೋಲ್ ಟ್ರಿಯೊ: ಕೆಳಭಾಗದಲ್ಲಿಸಣ್ಣ ಚುಕ್ಕೆಗಳಂತಹ ಟೆಕ್ಸ್ $್ಚಚರ್ ಹೊಂದಿರುವ ಮೂರು ಶಂಖು ಆಕಾರದ ಚಾರ್ಕೋಲ್ ಕುಂಡಗಳಿವು. ಮರಳು ಅಥವಾ ಬಿಳಿ ಕಲ್ಲುಗಳ ಹಾಸಿನ ಮೇಲೆ ಇವುಗಳನ್ನು ಇಟ್ಟಾಗ ಇವು ಮರುಭೂಮಿಯ ವಿಶಿಷ್ಟ ಮತ್ತು ಐಷಾರಾಮಿ ರೆಸಾರ್ಟ್ ಮಾದರಿಯ ವಾತಾವರಣ ಸೃಷ್ಟಿಸುತ್ತವೆ. ಕಳ್ಳಿ ಗಿಡ, ಸಿಲ್ವರ್ ಫ್ಯಾನ್ ಪಾಮ್ ಮತ್ತು ಖರ್ಜೂರದ ಸಣ್ಣ ಗಿಡಗಳು ಇದಕ್ಕೆ ಸೂಕ್ತ ಆಯ್ಕೆ.

ರಿಬ್ಬೆಡ್ ವೈಟ್ ಬೌಲ್ : ಅಡ್ಡ ಗೆರೆಗಳನ್ನು ಹೊಂದಿರುವ ಸ್ವಚ್ಛ ಬಿಳಿ ಬಣ್ಣದ ಅಗಲವಾದ ಕುಂಡವಾಗಿರುವ ಇದನ್ನು ಸ್ವಿಮ್ಮಿಂಗ್ ಪೂಲ್ ಪಕ್ಕ ಅಥವಾ ಆಧುನಿಕ ಬಾಲ್ಕನಿಗಳಲ್ಲಿಕನಿಷ್ಠ ಶೈಲಿಯ ಸೌಂದರ್ಯ ನೀಡಲು ಬಳಸಲಾಗುತ್ತದೆ. ಇದಕ್ಕೆ ಸೂಕ್ತ ಗಿಡಗಳೆಂದರೆ ಕಾಕ್ಟಸ್ ಗಿಡಗಳು, ಸಕ್ಯೂಲೆಂಟ್ ಅಥವಾ ಗಾಢ ಹಸಿರು ಎಲೆಗಳಿರುವ ಕ್ಯಾಲಥಿಯಾ.

ಮಾಡರ್ನ್ ಬ್ಲ್ಯಾಕ್ ಕ್ಯೂಬ್ ರೋ: ಚೌಕಾಕಾರದ, ಎತ್ತರದ ಈ ಕಪ್ಪು ಕುಂಡಗಳನ್ನು ಸಾಲಾಗಿ ಜೋಡಿಸಿದರೆ ಹೆಚ್ಚು ಆಕರ್ಷಕ. ಮನೆಯ ದೊಡ್ಡ ಕಾಂಪೌಂಡ್ ಗೋಡೆಯು ಖಾಲಿ ಕಾಣುತ್ತಿದ್ದರೆ ಇಂಥ ಕುಂಡಗಳನ್ನು ಸಾಲಾಗಿ ಇಟ್ಟು, ಕೆಳಗೆ ಸಣ್ಣ ದೀಪಗಳನ್ನು ಹಾಕುವುದರಿಂದ ಇಡೀ ಮನೆಯ ಹೊರನೋಟವೇ ಬದಲಾಗುತ್ತದೆ. ಇಟಾಲಿಯನ್ ಸೈಪ್ರೆಸ್ ಮತ್ತು ಕೆಳಗೆ ಹರಡುವ ಹಸಿರು ಬಳ್ಳಿಗಳು ಇದಕ್ಕೆ ಉತ್ತಮ ಆಯ್ಕೆ.

ಬಾಕ್ಸ್

ಕುಂಡಗಳನ್ನು ಜೋಡಿಸುವ ನಿಯಮ

ಮೂರರ ನಿಯಮ: ಯಾವಾಗಲೂ ಒಂದೇ ಗಾತ್ರದ ಕುಂಡಗಳ ಬದಲು ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಮೂರು ಕುಂಡಗಳನ್ನು ಒಟ್ಟಿಗೆ ಇಡಿ. ಇದು ಕಣ್ಣಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಥ್ರಿಲ್ಲರ್ , ಫಿಲ್ಲರ್ , ಸ್ಪಿಲ್ಲರ್ : ಒಂದು ಕುಂಡದಲ್ಲಿಗಿಡ ನೆಡುವಾಗ ಎತ್ತರವಿರುವ ಗಿಡ, ಕುಂಡ ತುಂಬಿಸುವ ಮಧ್ಯಮ ಗಿಡ ಮತ್ತು ಕುಂಡದಿಂದ ಹೊರಗೆ ಇಳಿಯುವ ಬಳ್ಳಿ ಈ ಮೂರರ ಮಿಶ್ರಣವಿದ್ದರೆ ಕುಂಡ ಸುಂದರವಾಗಿ ಕಾಣುತ್ತದೆ.

ಬೆಳಕಿನ ಬಳಕೆ: ಗಾಢ ಬಣ್ಣದ ಗೋಡೆಗೆ ತಿಳಿ ಬಣ್ಣದ ಕುಂಡಗಳು ಹಾಗೂ ರಾತ್ರಿಯ ವೇಳೆಗೆ ಗಿಡಗಳ ಕೆಳಗೆ ಸಣ್ಣ ವಾಮ್ ರ್ ವೈಟ್ ದೀಪಗಳನ್ನು ಬಳಸಿದರೆ ಮನೆಯ ಹೊರಾಂಗಣ ರೆಸಾರ್ಟ್ ನಂತೆ ಕಂಗೊಳಿಸುತ್ತದೆ.