Ü ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿಸ್ವಾತಂತ್ರ್ಯ ದಿನಾಚರಣೆ

Contributed byshivaraju.rnr@gmail.com|Vijaya Karnataka
celebration of independence day at kpj prabhu skill training institute an event to inspire students with tradition and patriotism
ಬಿಡದಿ: ಬಿಡದಿಯ ಜೋಗರದೊಡ್ಡಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿಶನಿವಾರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ತರಬೇತಿ ಸಂಸ್ಥೆಯ ಆವರಣದಲ್ಲಿಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಸಂಸ್ಥೆಯ ನಿರ್ದೇಶಕ ಎಸ್ .ನರೇಂದ್ರರೆಡ್ಡಿ ಅವರು ಮಾತನಾಡಿ, ದೇಶಾಭಿಮಾನ ಮತ್ತು ದೇಶಭಕ್ತಿಯ ಪ್ರೇರಣೆಯನ್ನು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಜಾಗೃತಿ ಮೂಡಿಸಬೇಕಿದೆ. ವಿದ್ಯಾವಂತರಾಗುವ ಜತೆಗೆ ಸಮಾಜ ಕಟ್ಟುವ ಮುಖಾಂತರ ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಹಿರಿಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿಭಾಗವಹಿಸಿ ತ್ಯಾಗ ಬಲಿದಾನ ಮತ್ತು ಹೋರಾಟದ ಮೂಲಕ ಪಡೆದ ಕುರಿತು ಇತಿಹಾಸದ ಮೆಲುಕು ಹಾಕಿದರು. ಸ್ವಾತಂತ್ರ್ಯದ ಮಹತ್ವ ಮತ್ತು ಹುತಾತ್ಮರನ್ನು ಸಭೆಯಲ್ಲಿಸ್ಮರಿಸಿ ಅವರ ಸಾಧನೆಯ ಬಗ್ಗೆ ನರೇಂದ್ರರೆಡ್ಡಿ ಅವರು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿಸಂಸ್ಥೆಯ ಉಪನ್ಯಾಸಕರಾದ ಬಿ.ಎಂ.ಚಂದ್ರಶೇಖರ್ , ಜಿ.ಎಸ್ .ಸಿದ್ಧಪ್ಪ, ಎಸ್ .ಎಸ್ .ನರೇಶ್ ಕುಮಾರ್ , ಶಿವಕುಮಾರ್ , ವೆಂಕಟೇಶ್ , ಕಾವ್ಯ ಹಾಗೂ ವಿದ್ಯಾರ್ಥಿಗಳು ಇದ್ದರು.

ಧಿಧಿ

15ಬಿಡಿಆರ್ ಫೋಟೋ-3-ಬಿಡದಿಯ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.