ಮೋದಿ ಆಳ್ವಿಕೆಯಲ್ಲಿಕುಸಿಯುತ್ತಿರುವ ಪ್ರಜಾತಂತ್ರ-ಹರಿಪ್ರಸಾದ್

Contributed byKENCHE GOWDA|Vijaya Karnataka
democracy under siege hariprasads striking remarks against modi government
ವಿಕ ಸುದ್ದಿಲೋಕ ಬೆಂಗಳೂರು

ನರೇಂದ್ರ ಮೋದಿ ಅವರು ಪ್ರಧಾನಿಯಾದ 2014ರ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದ್ದು, ಹಿಂದೆಂದೂ ಕಾಣದಷ್ಟು ಬಿಕ್ಕಟ್ಟುಗಳನ್ನು ದೇಶ ಎದುರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ,‘‘ಸಂವಿಧಾನಬಾಹಿರ ಶಕ್ತಿಗಳು ದೇಶದ ರಾಜಕಾರಣವನ್ನು ನಿಯಂತ್ರಿಸುತ್ತಿವೆ. ಶಾಂತಿಧೂತ ಗಾಂಧೀಜಿಯನ್ನು ಕೊಂದ ಈ ಶಕ್ತಿಗಳು ರಾಷ್ಟ್ರಪಿತನನ್ನು ಅಪಮಾನಿಸುವ ಹಾಗೂ ಪಂಡಿತ್ ನೆಹರು ಬಗ್ಗೆ ಸುಳ್ಳು ಬಿತ್ತುವ ಕೆಲಸ ಮಾಡುತ್ತಿವೆ. ಸಂವಿಧಾನಕ್ಕಿಂತಲೂ ಸನಾತನ ಧರ್ಮವೇ ಹೆಚ್ಚು ಎಂದು ನಾಚಿಕೆ ಇಲ್ಲದೆ ವಾದಿಸುವವರಿಗೆ ಮೋದಿ ಅವರ ಆಡಳಿತದಲ್ಲಿಮನ್ನಣೆ ಸಿಗುತ್ತಿದೆ,’’ ಎಂದು ದೂರಿದರು.

‘‘ಆರ್ ಎಸ್ ಎಸ್ ಮತ್ತು ಅದರ ಬೆಂಬಲಿಗರನ್ನು ಹೊರತುಪಡಿಸಿ ಮುಸ್ಲಿಂರು, ಸಿಖ್ಖರು ಸೇರಿದಂತೆ ಎಲ್ಲಜಾತಿ, ಧರ್ಮ ಮತ್ತು ವರ್ಗದ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಸಂಸ್ಕೃತ ಭಾಷೆಯಲ್ಲಿದ್ದ ವೇದ, ಉಪನಿಷತ್ತುಗಳು, ಮಹಾಕಾವ್ಯಗಳು ಭಾರತೀಯರನ್ನು ಸಮಾನರು ಎಂದು ಕರೆದಿರಲಿಲ್ಲ. ಆದರೆ, ಸಂವಿಧಾನವು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ,’’ ಎಂದರು.

‘‘ಕೇಂದ್ರ ಸರಕಾರ ಈಗ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಎಸ್ ಐಆರ್ ಮೂಲಕ ಕೋಟ್ಯಾಂತರ ಜನರ ಮತದಾನದ ಹಕ್ಕು ಕಸಿಯುತ್ತಿದೆ. ರಾಮಮಂದಿರದಲ್ಲಿನಡೆದ ಅಕ್ರಮದ ಬಗ್ಗೆ ಶ್ರೀರಾಮ ಭಕ್ತರು ಮಾತ್ರ ಚರ್ಚೆ ಮಾಡಬೇಕು. ಉಳಿದವರು ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲಎಂದು ವಾದಿಸಲಾಗುತ್ತಿದೆ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೆ ಅಧಿಕಾರಕ್ಕೆ ನಿಶ್ಚಿತ

ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ‘‘ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಅಪೇಕ್ಷೆ ಹಾಗೂ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಯಾವುದೇ ರಾಗ-ದ್ವೇಷಗಳಿಲ್ಲದೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ,’’ ಎಂದು ಹೇಳಿದರು.

ಮಾಜಿ ಸಿಎಂ ವೀರಪ್ಪ ಮೊಯಿಲಿ, ರಾಜ್ಯ ಗ್ಯಾರಂಟಿÜ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್ .ಎಂ.ರೇವಣ್ಣ, ಎಂಎಲ್ಸಿಗಳಾದ ಉಮಾಶ್ರೀ, ನಾಗರಾಜ್ ಯಾದವ್ ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.