ಬೇವೂರ: ‘‘ಪರಕೀಯರ ದಾಸ್ಯದಿಂದ ನಮ್ಮ ದೇಶವನ್ನು ಉಳಿಸಿಕೊಳ್ಳಲು ಸಹಸ್ರಾರು ಮಹನೀಯರು ಹೋರಾಡಿದ್ದಾರೆ. ಅವರನ್ನು ಸ್ಮರಿಸಿ, ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ,’’ಸಮಾಜಸೇವಕ ಹನುಮಂತ ಚಿಮ್ಮಲಗಿ ಹೇಳಿದರು.ಸಮೀಪದ ಭಗವತಿ ಗ್ರಾಪಂ ಆವರಣದಲ್ಲಿಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
‘‘ಭಾರತ ದೇಶ ತನ್ನದೇ ಆದ ಸಂಸ್ಕೃತಿ, ಮೌಲ್ಯಗಳಿಂದ ಶ್ರೀಮಂತವಾಗಿದೆ. ಸ್ವಾತಂತ್ರ್ಯ ಹೋರಾಟಗಾರರಿಂದ, ಸಾಧು-ಸಂತರ, ಋುಷಿಮುನಿಗಳ, ರಾಜ ಮಹಾರಾಜರ, ಅನ್ನದಾತರ, ಸಾಹಿತಿ, ಶಿಕ್ಷಣ ತಜ್ಞರ, ಯುವಕರ ಸಾಧನೆ, ಆದರ್ಶಗಳಿಂದ ಸಮೃದ್ಧವಾದ ದೇಶವಾಗಿದೆ,’’ಎಂದರು.
ಪಿಡಿಒ ಶಶಿಕಲಾ ಕೊಡತಿ ಧ್ವಜಾರೋಹಣ ಮಾಡಿದರು. ಕಾರ್ಯದರ್ಶಿ ಪುಟ್ಟು ಲಮಾಣಿ, ಮಾಜಿ ಅಧ್ಯಕ್ಷ ಶಿವಪುತ್ರಪ್ಪ ದೊಡ್ಡಮನಿ, ಸಂಗಣ್ಣ ಮಡ್ಡಿ, ಮಾಜಿ ಸದಸ್ಯ ಕಾಂತಪ್ಪ ಅಸೂಟಿ, ಪ್ರಭು ದೊಡಮನಿ, ಭೀಮವ್ವ ಮಾದರ, ಶರಣಪ್ಪ ಗುಳೇದ, ಕಾಡಪ್ಪ ಗುಳೇದ, ಶೇಖಪ್ಪ ನಾಯಕ, ಮುತ್ತಪ್ಪ ಕಂಬಾರ, ಪರಶುರಾಮ ಕಂಬಾರ, ಬಸಪ್ಪ ಪದರಾ, ಕಾಶಿಕರಣ ಗುಳೇದ, ಶೇಖಪ್ಪ ಕಲ್ಕಟಕರ್ , ಸುರೇಶ ಲೋಕಾಪುರ, ಹೇಮಲತಾ ಮುರುಡಿ ಇದ್ದರು.
ಬೇವೂರ-15-08
ಬೇವೂರ ಸಮೀಪ ಭಗವತಿ ಗ್ರಾಪಂ ಆವರಣದಲ್ಲಿನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿಸಮಾಜ ಸೇವಕ ಹನುಮಂತ ಚಿಮ್ಮಲಗಿ ಮಾತನಾಡಿದರು.