ವಿಕ ಸುದ್ದಿಲೋಕ ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರೆ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದಲ್ಲಿಶನಿವಾರ ಮೊದಲನೆ ಶ್ರಾವಣ ಮಾಸದಂದು ತಾಲೂಕು ಮತ್ತು ಜಿಲ್ಲೆಗಳಿಂದ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ರಂಗಪ್ಪನ ದೇವಾಲಯದಲ್ಲಿಬಿಳಿಗಿರಂಗನಾಥ ಸ್ವಾಮಿಗೆ ಬೆಳಗೆ ್ಗ5ರಿಂದಲೇ ವಿಶೇಷ ಪೂಜೆ ಸಲ್ಲಿಸಿ ಬಿಳಿಗಿರಂಗನಾಥ ಸ್ವಾಮಿಗೆ ಮತ್ತು ಅಲಮೇಲು ಮಂಗಮ್ಮ ನವರಿಗೆ ತುಳಸಿ, ವಿವಿಧ ಹೂವಿಗಳಿಂದ ಮೂರ್ತಿಯನ್ನು ಶೃಂಗರಿಸಲಾಗಿತ್ತು. ಮಹಾಮಂಗಳಾರತಿ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು. ಶ್ರಾವಣ ಶನಿವಾರ ಅಂಗವಾಗಿ ಗರುಡೋತ್ಸವ ಮೆರವಣಿಗೆ ಭಕ್ತರ ಸಮ್ಮುಖದಲ್ಲಿನಡೆಯಿತು. ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು. ಭಕ್ತರಿಗೆ ಅನುಗುಣವಾಗಿ ಯಳಂದೂರು ಪಟ್ಟಣದಿಂದ ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು.