*(ಕಡ್ಡಾಯ - ಸ್ವಾತಂತ್ರ್ಯೋತ್ಸವ)

Contributed bylcgadavi@gmail.com|Vijaya Karnataka
independence day celebration honoring the heroes of freedom
ವಿಕ ಸುದ್ದಿಲೋಕ ಮೂಡಲಗಿ

ನಮ್ಮ ದೇಶದ ಸ್ವಾತಂತ್ರತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರತ್ರ್ಯಹೋರಾಟಗಾರರನ್ನು ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ತಹಸೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.
ತಾಲೂಕು ಆಡಳಿತದಿಂದ ಪಟ್ಟಣದ ಬಸವರಂಗ ಮಂಟಪದಲ್ಲಿಶನಿವಾರ ಜರುಗಿದ ಸ್ವಾತಂತ್ರೊತ್ರ್ಯೕತ್ಸವದ ಸಮಾರಂಭದಲ್ಲಿಮಾತನಾಡಿದ ಅವರು, ‘‘ದೇಶವನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲರಿಗೂ ಸೇರಿದ್ದು’’, ಎಂದರು. ನಂತರ ತಹಸೀಲ್ದಾರ ಕಚೇರಿ ಮತ್ತು ಗಾಂಧಿ ವೃತ್ತದಲ್ಲಿಧ್ವಜಾರೋಹಣ ನೆರವೇರಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ625ಕ್ಕೆ 624 ಅಂಕಪಡೆದ ಅಮೃತಾ ಶಿವಲಿಂಗ ನುಚ್ಚುಂಡಿಗೆ ಸ್ವಾತಂತ್ರ ಹೋರಾಟಗಾರ ದಿ.ರಾವಜೆಪ್ಪ ಬಾಲಪ್ಪ ಸೋನವಾಲಕರ ಸ್ಮರಣಾರ್ಥ ಡಾ. ಪ್ರದೀಪ ಸೋನವಾಲ್ಕರ ಕೊಡಮಾಡುವ ಒಂದು ಲಕ್ಷ ರೂ. ಚೆಕ್ ಅನ್ನು ಎಸ್ .ಆರ್ . ಸೋನವಾಲ್ಕರ ವಿತರಿಸಿದರು.

ತಾಪಂ ಇಒ ಪ್ರಸನ್ ನೆರಲೇಕರ, ಬಿಒ ಪ್ರಕಾಶ ಹಿರೇಮಠ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಉಪ ನೋಂದಣಾಧಿಕಾರಿ ಡಿ.ಕೆ.ಕುಳ್ಳೂರ, ಪುರಸಭೆ ಮುಖ್ಯಾಧಿಕಾರಿ ಸಿ.ಬಿ. ಪಾಟೀಲ ಮತ್ತಿತರರು ಇದ್ದರು.

ಆರ್ .ವಿ. ಯರಗಟ್ಟಿ ಸ್ವಾಗತಿಸಿದರು. ಕರಿಬಸವರಾಜು ನಿರೂಪಿಸಿದರು. ನಾಗರಾಜ ಗಡಾದ ವಂದಿಸಿದರು.

ಮಸಗುಪ್ಪಿಯಲ್ಲಿ:

ಇಲ್ಲಿನ ಗ್ರಾಪಂನಲ್ಲಿಪಿಡಿಒ ಆರ್ .ಎನ್ . ಗುಜನಟ್ಟಿ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿಎಸ್ ಡಿಎಂಸಿ ಅಧ್ಯಕ್ಷ ಬಾಳಗೌಡ ಪಾಟೀಲ, ಶ್ರೀ ಮಹಾಲಕ್ಷ್ಮೇ ಪ್ರೌಢ ಶಾಲೆಯಲ್ಲಿಅಧ್ಯಕ್ಷ ಸಾತಪ್ಪ ಕೊಳದುರ್ಗಿ, ಪಿಕೆಪಿಎಸ್ ನಲ್ಲಿಅಧ್ಯಕ್ಷ ಬಾಳಪ್ಪ ಗಂಗಣ್ಣವರ, ಶ್ರೀ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿಬಾಲಚಂದ್ರ ಹೊಸಕೋಟಿ, ಪಶು ಆಸ್ಪತ್ರೆಯಲ್ಲಿಲಕ್ಷ್ಮಣ ನರಗುಂದ, ವರಮಹಾಲಕ್ಷ್ಮೇ ಬ್ಯಾಂಕಿನಲ್ಲಿಲಕ್ಕಪ್ಪ ಮಕರದ, ಶ್ರೀ ಲಕ್ಷ್ಮೇ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಬಸವರಾಜ ಭುಜಣ್ಣವರ, ಸರಕಾರಿ ಪ್ರೌಢ ಶಾಲೆಯಲ್ಲಿಎಸ್ ಡಿಎಂಸಿ ಅಧ್ಯಕ್ಷ ಶ್ರೀಕಾಂತ ಆಶಿರೊಟ್ಟಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ಕಲ್ಲೋಳಿಯಲ್ಲಿ:

ಪಟ್ಟಣದ ಶ್ರೀ ಮಹಾಲಕ್ಷ್ಮೇ ಸೌಹಾರ್ದ ಸಹಕಾರಿ ಸಂಘ ಹಾಗೂ ಶ್ರೀ ಮಹಾಲಕ್ಷ್ಮೇ ಪಿಕೆಪಿಎಸ್ ಸಂಘದ ಆಡಳಿತ ಕಚೇರಿಯಲ್ಲಿರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ ಧ್ವಜಾರೋಹಣ ನೆರವೇರಿಸಿದರು. ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಗುರುನಾಥ ವ್ಯಾಪಾರಿ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ಅಡಿವೆಪ್ಪ ಕುರಬೇಟ, ಕಾಡೇಶ ಗೋರೋಶಿ, ತುಕಾರಾಮ ಪಾಲ್ಕಿ, ದಶಗೀರ ಕಮತನೂರ, ಪ್ರಭು ಕಡಾಡಿ, ಮಲ್ಲಪ್ಪ ಹೆಬ್ಬಾಳ, ಗೋಪಾಲ ಜಾಲರ, ಅಶೋಕ ತಳವಾರ, ಬಸವರಾಜ ದಾಸನಾಳ ಉಪಸ್ಥಿತರಿದ್ದರು.

ಫೋಟೊ: (15ಎಮ್ ಡಿಎಲ್ -1):

ಮೂಡಲಗಿಯ ತಾಲೂಕು ಆಡಳಿತದಿಂದ ಜರುಗಿದ ಸ್ವಾತಂತ್ರೊತ್ರ್ಯೕತ್ಸವ ಸಮಾರಂಭದಲ್ಲಿಗಣ್ಯರು ಭಾಗವಹಿಸಿದ್ದರು.