ಬಾಳೆಗೊನೆ ಉಣಿಸುವಿಕೆ ಪ್ರಾತ್ಯಕ್ಷಿಕೆ

Contributed bypuru.dpete1987@gmail.com|Vijaya Karnataka
innovative techniques in banana cultivation student presentation
ವಿಕ ಸುದ್ದಿಲೋಕ ಸಂತೇಮರಹಳ್ಳಿಉಮ್ಮತ್ತೂರು ಗ್ರಾಮದಲ್ಲಿಚಾಮರಾಜ ನಗರ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ ಸಿ (ಆನರ್ಸ್ ) ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರಾರ ಯನುಭವ ಶಿಬಿರದ ಅಂಗವಾಗಿ ಬಾಳೆಗೊನೆ ಉಣಿಸುವಿಕೆಯ ಪ್ರಾತ್ಯಕ್ಷಿಕೆ ನಡೆಯಿತು.ಕಾರ ್ಯಕ್ರಮದಲ್ಲಿಸಸ್ಯ ರೋಗಶಾಸ್ತ್ರ ತಜ್ಞೆ ಡಾ. ಪವಿತ್ರಾ. ಬಿ.ಎಸ್ . ಅವರು, ಬಾಳೆಗೊನೆ ಉಣಿಸುವಿಕೆಯ ಮಹತ್ವ, ವಿಧಾನ ಹಾಗೂ ಪ್ರಯೋಜನಗಳ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ತಿಳಿಸಿಕೊಟ್ಟರು. ಪ್ರಾತ್ಯಕ್ಷಿಕೆ: ಒಂದು ಗೊನೆಗೆ 500 ಗ್ರಾಂ ತಾಜಾ ಹಸುವಿನ ಸಗಣಿ, 7.5 ಗ್ರಾಂ ಯೂರಿಯಾ (ನೈಟ್ರೋಜನ್ ಗೊಬ್ಬರ), 7.5 ಗ್ರಾಂ ಸಿಂಗಲ್ ಸೂಪರ್ ಫಾಸ್ಫೇಟ್ (ರಂಜಕ ಮತ್ತು ಗಂಧಕದ ಗೊಬ್ಬರ) ಹಾಗೂ 100 ಮಿ.ಲೀ. ನೀರನ್ನು ಬಳಸಿ ದ್ರವ ಮಿಶ್ರಣ ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಕಾಯಿಗಳು ಹಣ್ಣು ಕಟ್ಟಿದ ನಂತರ ಗಂಡು ಹೂ ಗೊಂಚಲನ್ನು ತೆಗೆದು, ಕೊನೆಯ ಹಣ್ಣಿನ ಸಾಲಿನ ಕೆಳಗೆ 10ರಿಂದ 15 ಸೆಂ.ಮೀ. ಗೊನೆಯ ಮುಖ್ಯ ದಂಟು ಉಳಿಸಿ, ಸಿದ್ಧಪಡಿಸಿದ ದ್ರವ ಮಿಶ್ರಣವನ್ನು ಅದರ ತುದಿಗೆ ಅಳವಡಿಸಿ ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ದಾರದಿಂದ ಕಟ್ಟುವ ವಿಧಾನವನ್ನು ವಿವರಿಸಲಾಯಿತು. ಈ ವಿಧಾನದಿಂದ ಗೊನೆಗೆ ಅಗತ್ಯವಾದ ಪೋಷಕಾಂಶಗಳನ್ನು ನೇರವಾಗಿ ಒದಗಿಸಿ ಗೊನೆಯ ಗಾತ್ರ, ತೂಕ ಹಾಗೂ ಹಣ್ಣಿನ ಗುಣಮಟ್ಟ ಸುಧಾರಿಸಲು ಸಹಾಯವಾಗುತ್ತದೆ ಎಂದು ತಿಳಿಸಲಾಯಿತು. ರೈತ ಮುಖಂಡರಾದ ಪ್ರಭುಸ್ವಾಮಿ ಅವರು ಬಾಳೆ ಬೆಳೆಯಲ್ಲಿಸಿಗಟೋಕಾ ರೋಗದಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು. ಡಾ. ಪವಿತ್ರಾ ಬಿ.ಎಸ್ . ಅವರು ಸಿಗಟೋಕಾ ರೋಗದ ನಿಯಂತ್ರಣ ಹಾಗೂ ಸೂಕ್ತ ನಿರ್ವಹಣಾ ಕ್ರಮಗಳ ಕುರಿತು ರೈತರ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ನೀಡಿದರು.ಕಾರ ್ಯಕ್ರಮದಲ್ಲಿಭಾಗವಹಿಸಿದ್ದ ರೈತರು ತಮ್ಮ ಕೃಷಿ ಸಂಬಂಧಿತ ಸಂದೇಹಗಳನ್ನು ಕೇಳಿ ಪರಿಹಾರ ಪಡೆದುಕೊಂಡರು.