ಸರ್ಪ ಸಂಸ್ಕಾರ

Contributed byShridevi Ambekallu|Vijaya Karnataka
naga dosha remedies procedures and rules for sarpa samskara
ಸರ್ಪ ಸಂಸ್ಕಾರ

ಯಾರು, ಯಾಕೆ ಮಾಡಬೇಕು?
-----------------

*ಪ್ರಶಾಂತ್ ಭಟ್ ಕೋಟೇಶ್ವರ

--------

ವ್ಯಕ್ತಿಗಳ ಜಾತಕ ನೋಡಿದ ಜ್ಯೋತಿಷರು ಸಾಮಾನ್ಯವಾಗಿ ದುಸ್ಥಾನಗಳಲ್ಲಿರಾಹು ಇದ್ದಾಗ ನಿಮಗೆ ಸರ್ಪದೋಷವಿದೆ. ಸರ್ಪ ಸಂಸ್ಕಾರ ಮಾಡಿಸಿ ಬನ್ನಿ ಎಂದು ಹೇಳುತ್ತಾರೆ. ಹಾಗಾದರೆ ಯಾರು ಯಾವ ಸಂದರ್ಭದಲ್ಲಿಸರ್ಪ ಸಂಸ್ಕಾರ ಮಾಡಬೇಕು?

1. ಸರ್ಪನ ಮರಣ ನೋಡಿರಬೇಕು ಮತ್ತು ಅದಕ್ಕೆ ಸಂಸ್ಕಾರ ಆಗದೆ ಇರಬೇಕು.

2. ಸ್ಥಳ ಬಾಧಿತ ಸರ್ಪದೋಷಗಳು ಪ್ರಶ್ನಾಚಿಂತನೆಯಲ್ಲಿಕಂಡು ಬಂದರೆ ಆಗ ಸರ್ಪ ಸಂಸ್ಕಾರ ಬೇಕು.

3. ಹೊಸದಾಗಿ ನಾಗಬನ ಮಾಡುವುದಿದ್ದರೆ ಆಗ ಸರ್ಪ ಸಂಸ್ಕಾರದ ಮೂಲಕ ನಾಗಶಿಲಾ ಪ್ರತಿಷ್ಠೆಯಾಗಬೇಕು. ಭೂಮಿ ಎಂದ ಮೇಲೆ ಜೀವಿಗಳು ಪ್ರತೀ ಇಂಚು ಇಂಚಿಗೂ ಸತ್ತಿರುತ್ತದೆ. ಭೂಮಿಯು ಸ್ಮಶಾನವೇ ಆಗಿರುತ್ತದೆ. ಅದಕ್ಕಾಗಿ ಮತ್ರ್ಯಲೋಕ ಎಂದು ಕರೆದರು. ಆಗ ಸರ್ಪ ಸಂಸ್ಕಾರ ಮಾಡಿ ಭೂಮಿಯಲ್ಲಿನಿಧಿ ಸ್ಥಾಪಿಸಿ ನಾಗ ಪ್ರತಿಷ್ಠೆ ಮಾಡಬಹುದು.

4. ವಾಹನಗಳ ಗಾಲಿಗಳಿಗೆ ನಾಗನು ಬಿದ್ದು ಸತ್ತಿದ್ದು ಕಂಡರೆ, ಯಾವುದೋ ನವಿಲೋ, ಗಿಡುಗನೋ, ಮುಂಗುಸಿಯೋ ಅಥವಾ ಇನ್ಯಾವ ಪ್ರಾಣಿ ಪಕ್ಷಿಗಳಿಂದ ನಾಗರ ಹಾವು ಸತ್ತಿದ್ದು ಕಂಡರೆ ಸಂಸ್ಕಾರ ಮಾಡಲೇಬೇಕು.

5.ಕೆಲವೊಮ್ಮೆ ನಾಗವಂಶದ ಸರಿಸೃಪಾದಿ ಅಂದರೆ ಇತರ ವಿಷಯುಕ್ತ ಹಾವುಗಳು ನಮ್ಮ ಕೈಯಲ್ಲಿಕೊಲ್ಲಲ್ಪಟ್ಟಿದ್ದರೆ ಅದು ನಾಗದೋಷವಾಗುತ್ತದೆ. ಆಗ ಸಂಸ್ಕಾರ ಮಾಡಬಹುದು.

6. ನಾಗಬನಗಳು ನಮ್ಮಿಂದಾಗಿ ಸುಟ್ಟು ಹೋಗಿದ್ದರೆ, ಧ್ವಂಸವಾಗಿದ್ದರೆ ಇಲ್ಲಿಅಗೋಚರವಾಗಿ ಸರ್ಪ ಸಂತತಿ ನಾಶವಾಗಿರಬಹುದು. ಇಂತಹ ವಿಚಾರವಿದ್ದಾಗ ಸಂಸ್ಕಾರ ಮಾಡಬೇಕು.

ಯಾವ ದಿನಗಳಲ್ಲಿಸಂಸ್ಕಾರ ಮಾಡಬೇಕು?

ಮಾಡಿಸುವವರ ತಾರಾಬಲ ಮುಖ್ಯವಲ್ಲ. ಈ ಸರ್ಪಸಂಸ್ಕಾರದ ಪ್ರತಿಕೃತಿ ದಹನ ಕಾಲಕ್ಕೆ ಧನಿಷ್ಟಾ ಪಂಚಕ ದೋಷಗಳಿರಬಾರದು.

ಧನಿಷ್ಟಾ ಪಂಚಕವೆಂದರೆ- ಧನಿಷ್ಟಾ ನಕ್ಷತ್ರದ ಮೂರನೇ ಮತ್ತು ನಾಲ್ಕನೇ ಪಾದ, ಶತಭಿಷ, ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ ನಕ್ಷತ್ರಗಳು ಸರ್ಪ ಸಂಸ್ಕಾರಕ್ಕೆ ಯೋಗ್ಯವಲ್ಲ. ತಂದೆ ತಾಯಿ ಇರುವವರು ಇದಕ್ಕೆ ಅರ್ಹರಲ್ಲ. ಅಂದರೆ ಪಿತೃಕಾರ್ಯ ಮಾಡುವ ಅರ್ಹತೆ ಇರುವವರು ಮಾತ್ರ ಮಾಡಬಹುದು. ಸಂಸ್ಕಾರದ ನಂತರ ಆಶ್ಲೇಷಾ ಬಲಿ, ನಾಗರ ಪ್ರತಿಷ್ಠೆ, ಗೋಪೂಜನ ಆಗಬೇಕು.

ಸಂಸ್ಕಾರಗಳನ್ನು ಅಂದರೆ ನಾಗ ಪ್ರತಿಕೃತಿ ದಹನವನ್ನು ನದಿ ತೀರ, ಕೆರೆ ಬಾವಿಗಳ ಬಳಿ ಮಾಡಬೇಕು. ಕೆಲ ದೇವಸ್ಥಾನ, ಮಠಗಳಲ್ಲಿಇದಕ್ಕೆ ಬೇಕಾದ ವ್ಯವಸ್ಥೆಗಳಿವೆ. ಸಂಸ್ಕಾರವು ನಾಲ್ಕು ದಿನಗಳದ್ದಾಗಿರುತ್ತದೆ. ಮೊದಲ ದಿನ ಪ್ರತಿಕೃತಿ ದಹನ, ಮತ್ತೆ ಎರಡು ದಿನ ತರ್ಪಣ, ಕೊನೆಯ ದಿನ ಇದಕ್ಕೆ ಸಂಬಂಧಿಸಿ ಕಾರ್ಯಗಳು, ಇನ್ನು ಕೆಲವೊಮ್ಮೆ ಕೇವಲ ಸರ್ಪಬಲಿ ಮಾತ್ರ ಮಾಡಿ ಸರ್ಪದೋಷದ ನಿವಾರಣಾ ಕ್ರಮವೂ ಇದೆ. ಇದು ದೋಷಗಳ ಆಧಾರದಲ್ಲಿಮಾಡು ವಂತದ್ದು. ಸಂಸ್ಕಾರಕ್ಕೆ ಶುರುಮಾಡಿದ ಮೇಲೆ ಸಂಸ್ಕಾರ ದೀಕ್ಷೆಯಲ್ಲಿರಬೇಕು. ಅಂದರೆ ಒಪ್ಪೊತ್ತು ಊಟ, ಸಾತ್ವಿಕ ಆಹಾರ ಸೇವಿಸಬೇಕು. ಸಂಸ್ಕಾರ ಆರಂಭಿಸಿ ಮುಗಿಯುವ ತನಕ ಯಾವುದೇ ದೇವತಾ ಕಾರ್ಯವನ್ನು ಆ ಯಜಮಾನನ ಕುಟುಂಬಸ್ಥರು ಮಾಡಬಾರದು. ದೇವಸ್ಥಾನಕ್ಕೂ ಹೋಗಬಾರದು. ಮನೆ ದೇವರಿಗೂ ಪೂಜೆ ಮಾಡಬಾರದು. ಒಂದು ವೇಳೆ ನಿತ್ಯ ಓದುವ ಸಹಸ್ರನಾಮಾದಿ ಸ್ತುತಿ ಶ್ಲೋಕಗಳಿದ್ದರೆ ಮನಸ್ಸಿನಲ್ಲೇ ಓದಬಹುದು. ಇದು ಸೂತಿಕಾಚರಣೆಯಂತೆಯೇ ಆಗಿರುವುದರಿಂದ ಈ ನಿಯಮ ಪಾಲನೆ ಮಾಡಬೇಕು. ಇಷ್ಟೆಲ್ಲಸಂಸ್ಕಾರ ನಿಯಮಗಳಾದ ಮೇಲೆ ದೇವತಾದರ್ಶನ, ಪೂಜಾದಿಗಳನ್ನು ಮಾಡಬಹುದು.