ಕಿಕ್ ಗುರಿ, ಅಧಿಕಾರಿಗಳಿಗೆ ಟಾರ್ಗೆಟ್ ಕಿರಿಕಿರಿ

Contributed byGirish J.R|Vijaya Karnataka
pressure on officials to increase liquor sales difficulty in achieving financial targets
ಜೆ.ಆರ್ .ಗಿರೀಶ್ ಬೆಂಗಳೂರು ಜಜ್ಟಿಜಿsh.್ಜ್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ ಪಂಚ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ತೀವ್ರ ಕಸರತ್ತು ನಡೆಸಿರುವ ರಾಜ್ಯ ಸರಕಾರ, ಖಜಾನೆ ತುಂಬಿಸಲು ಮದ್ಯದಂಗಡಿಗಳಿಗೆ ಹಾಗೂ ಅಬಕಾರಿ ಇಲಾಖೆಗೆ ಮದ್ಯದ ವಹಿವಾಟಿನ ಟಾರ್ಗೆಟ್ ಹೆಚ್ಚಿಸಿದೆ. ಆದಾಯ ಗುರಿ ಸಾಧನೆಯ ಅನಿವಾರ್ಯತೆಯಿಂದ ಇಲಾಖೆ ಅಧಿಕಾರಿಗಳು ಮತ್ತು ಮದ್ಯದಂಗಡಿ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಉಚಿತ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಸುಮಾರು 59 ಸಾವಿರ ಕೋಟಿ ರೂ. ಖರ್ಚಾಗುತ್ತಿದ್ದು, ಇದು ಸರಕಾರಕ್ಕೆ ದೊಡ್ಡ ಆರ್ಥಿಕ ಹೊರೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರಕಾರ, ಅಬಕಾರಿ, ಕಂದಾಯ ಹಾಗೂ ಸಾರಿಗೆ ಇಲಾಖೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಅಬಕಾರಿ ಇಲಾಖೆಯು ಪ್ರಮುಖ ಆದಾಯ ಮೂಲವಾಗಿದ್ದು, ಪ್ರತಿ ವರ್ಷ ಮದ್ಯದ ದರ ಪರಿಷ್ಕರಣೆ ಮತ್ತು ಆದಾಯ ಸಂಗ್ರಹಣೆ ಗುರಿ ಹೆಚ್ಚಳದ ಮೂಲಕ ಸರಕಾರ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ4,002 ವೈನ್ ಶಾಪ್ (ಸಿಎಲ…-2), 292 ಕ್ಲಬ್ (ಸಿಎಲ್ -4), 2,994 ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ (ಸಿಎಲ…-7), 3,644 ಬಾರ್ ಆ್ಯಂಡ್ ರೆಸ್ಟೊರೆಂಟ್ (ಸಿಎಲ…-9), 1,071 ಎಂಎಸ್ ಐಎಲ… (ಸಿಎಲ…-11ಸಿ) ಸೇರಿದಂತೆ 12,003 ಮದ್ಯದಂಗಡಿಗಳಿವೆ. ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ರಾಜಸ್ವ ತರುವ ಇಲಾಖೆಗಳ ಪೈಕಿ ಅಬಕಾರಿ ಇಲಾಖೆ ಮುಂಚೂಣಿಯಲ್ಲಿದೆ. 2025-26ನೇ ಸಾಲಿನಲ್ಲಿಅಬಕಾರಿ ಇಲಾಖೆಗೆ 43 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆಯ ಗುರಿ ನೀಡಲಾಗಿತ್ತು. ಅಂತಿಮವಾಗಿ 40,183 ಕೋಟಿ ರೂ. ಆದಾಯ ಸಂಗ್ರಹವಾಯಿತು. ವರ್ಷದಿಂದ ವರ್ಷಕ್ಕೆ ಅಬಕಾರಿ ಇಲಾಖೆ ಆದಾಯ ಸಂಗ್ರಹಣೆ ಗುರಿ ಹೆಚ್ಚುತ್ತಲೇ ಸಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿಇಲಾಖೆಗೆ ಬರೋಬ್ಬರಿ 45 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆ ಗುರಿ ನೀಡಲಾಗಿದೆ. ಆದಾಯ ಗುರಿ ಸಾಧನೆಗಾಗಿ ಹಿರಿಯ ಅಧಿಕಾರಿಗಳು, ಕೆಳ ಹಂತದ ಸಿಬ್ಬಂದಿಗೆ ವಹಿವಾಟು ಮತ್ತು ಕೇಸ್ ಟಾರ್ಗೆಟ್ ನಿಗದಿಪಡಿಸಿ ಒತ್ತಡ ಹೇರುತ್ತಿಧಿದ್ದಾರೆ. ಪ್ರತಿನಿತ್ಯ ಮದ್ಯ ಮಾರಾಟದಿಂದ 100ರಿಂದ 120 ಕೋಟಿ ರೂ.ನಂತೆ ತಿಂಗಳಿಗೆ ಸರಾಸರಿ 3,800 ರೂ. ಆದಾಯ ಗಳಿಸಿದರೆ ಮಾತ್ರ ಆದಾಯ ಸಂಗ್ರಧಿಹಣೆ ಗುರಿ ಸಾಧಿಸಲು ಸಾಧ್ಯವಾಗಲಿದೆ. ಹೀಗಾಗಿ, ಉಪ ಆಯುಕ್ತರ ಮೂಲಕ ರಾಜ್ಯದ ಎಲ್ಲಾ ವಲಯಧಿಗಳ ಅಬಕಾರಿ ನಿರೀಕ್ಷಕರಿಗೆ ಮದ್ಯದ ವಹಿವಾಟು ಹೆಚ್ಚಿಸುವಂತೆ ಖಡಕ್ ಸೂಚನೆ ನೀಡಲಾಗಿದೆ. ಮೌಖಿಕ ಫರ್ಮಾನು: ಕಳೆದ ವರ್ಷದ ವಹಿವಾಟಿನ ಆಧಾರದಲ್ಲಿತಿಂಗಳಿಗೆ ಇಂತಿಷ್ಟು ದೇಶೀಯ ಮದ್ಯ (ಐಎಂಎಲ್ ) ಹಾಗೂ ಬಿಯರ್ ಮಾರಾಟವಾಗಲೇಧಿಬೇಕೆಂದು ಮೌಖಿಕ ಫರ್ಮಾನು ಹೊರಡಿಸಲಾಗಿದೆ. ಪ್ರತಿ ಮದ್ಯದಂಗಡಿಯ ಮೂರು ವರ್ಷಗಳ ವಹಿವಾಟಿನ ಅಂದಾಜಿನಲ್ಲಿಮದ್ಯ ಮಾರಾಟದ ಟಾರ್ಗೆಟ್ ನಿಗದಿಪಡಿಸಲಾಗಿದೆ. ಐಎಂಎಲ್ ಮತ್ತು ಬಿಯರ್ ಎತ್ತುವಳಿ ಕಡಿಮೆಯಾದರೆ ಹಿರಿಯ ಅಧಿಕಾರಿಗಳು, ಕೆಳ ಹಂತದ ಸಿಬ್ಬಂದಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ‘‘ಮದ್ಯದ ವಹಿವಾಟು ಇಳಿಕೆಯಾದ ಮದ್ಯದಂಡಿಗಳ ವಿರುದ್ಧ ಅಕ್ರಮ ಮದ್ಯ ಮಾರಾಟ ಆರೋಪದಡಿ ಸುಳ್ಳು ಪ್ರಕರಣ ದಾಖಲಿಸುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ. ಮದ್ಯದ ಎತ್ತುವಳಿ ಹೆಚ್ಚಿಸಿದರೆ ಮತ್ತು ಅತಿ ಹೆಚ್ಚು ಕೇಸ್ ದಾಖಲಿಸಿದರೆ ಶಹಬ್ಬಾಶ್ ಎನ್ನುತ್ತಾರೆ. ಕಡಿಮೆ ಕೇಸ್ , ವಹಿವಾಟು ಇಳಿಕೆಯಾದರೆ ನಿಂದಿಸಿ ಎಚ್ಚರಿಕೆ ಕೊಡುತ್ತಾರೆ,’’ ಎಂದು ಕಿರಿಯ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಅಕ್ರಮ ಮದ್ಯ ಮಾರಾಟದ ಅಸ್ತ್ರ: ಅಬಕಾರಿ ಇಲಾಖೆ ಆದಾಯ ಏರಿಕೆಯಾಗಿರುವುದು ಜನರು ಕುಡಿತ ಹೆಚ್ಚಿಸಿರುವುದರಿಂದಲೇ ಎಂಬ ವಾದ ಕೆಲವರದ್ದು. ಆದರೆ, ವಸ್ತುಸ್ಥಿತಿ ಬೇರೆಯೇ ಇದೆ. ಪ್ರತಿ ವರ್ಷ ಮದ್ಯ ಮಾರಾಟ ಹೆಚ್ಚಿಸುವಂತೆ ಟಾರ್ಗೆಟ್ ನೀಡಿರುವುದೇ ಆದಾಯ ಹೆಚ್ಚಳಕ್ಕೆ ಅಸಲಿ ಕಾರಣ. ಅಬಕಾರಿ ಇಲಾಖೆ ಪ್ರತಿ ಜಿಲ್ಲೆಗೆ ಮದ್ಯದ ವಹಿವಾಟಿನ ಗುರಿ ನಿಗದಿಪಡಿಸಿರುತ್ತದೆ. ಈ ಗುರಿ ತಲುಪಲು ಸಾಧ್ಯವಾಗಿದ್ದರೆ ಆ ಜಿಲ್ಲೆಯಲ್ಲಿಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಇಲಾಖೆ ಕ್ರಮಕ್ಕೆ ಮುಂದಾಗುತ್ತದೆ. ಅಕ್ರಮ ಮದ್ಯ ಮಾರಾಟದ ನೋಟಿಸ್ ಸಂಕಷ್ಟದಿಂದ ಪಾರಾಗಲು ಸನ್ನದುಧಿದಾರರು, ಇಲಾಖೆ ನಿಗದಿಪಡಿಸಿದ ಪ್ರಮಾಣದಲ್ಲೇ ಮದ್ಯ ಖರೀದಿಸುತ್ತಾರೆ. ಆದರೆ, ಅಷ್ಟೊಂದು ಮದ್ಯ ಮಾರಾಟ ಅಸಾಧ್ಯವಾದ ಕಾರಣ ಕದ್ದುಮುಚ್ಚಿ ಅಕ್ರಮ ನಡೆಸುತ್ತಾರೆ. ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತದೆ.