ಪ್ರಸನ್ನ ಕರ್ಪುರ

Contributed byshubha.hegde@timesgroup.com|Vijaya Karnataka
pride of freedom fighters prasanna karpur
ಬ್ಲರ್ಬ್

ಸ್ವಾತಂತ್ರೋತ್ಸವದ ಆಚರಣೆ ಮುಗಿದಿದೆ. ಆದರೆ ಅದು ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ಅನುದಿನವೂ ನೆನಪಿಸಿಕೊಳ್ಳುತ್ತಾ, ಅಳವಡಿಸಿಕೊಳ್ಳಬೇಕು.
ಆತ್ಮಗೌರವದ ಸಂಕೇತವಾಗಿ ಸದಾ ಜೊತೆಗಿರಲಿ ಸ್ವಾತಂತ್ರ್ಯ ದಿನ

ಪ್ರಸನ್ನ ಕರ್ಪೂರ

ದೇಶದ ಆತ್ಮಗೌರವದ ಸಂಕೇತ, ತ್ಯಾಗದ ಸ್ಮರಣೆ, ಸ್ವಾಭಿಮಾನದ ಹಬ್ಬ ಸ್ವಾತಂತ್ರ್ಯದ ದಿನಾಚರಣೆ ಎಲ್ಲೆಡೆ ಸಡಗರ, ಸಂಭ್ರಮದೊಂದಿಗೆ ಮುಗಿದಿದೆ. ಆದರೆ ತ್ರಿವರ್ಣ ಕಣ್ಣಲ್ಲಿಇನ್ನೂ ಉಳಿದಿದೆ. ಭಕ್ತಿ ತುಂಬಿದ ದೇಶದ ಹೆಮ್ಮೆಯ ಗೀತೆ ಕಿವಿಯಲ್ಲಿಅನುರಣಿಸುವಂತಿದೆ. ಅದೇ ಕಾರಣಕ್ಕೆ ಸ್ವಾತಂತ್ರ್ಯ ಅಂದರೆ ಒಂದು ದಿನಾಚರಣೆಗೆ ಸೀಮಿತವಲ್ಲ. ವರ್ಷ, ದಶಕ, ಶತಕಗಳು ಕಳೆದರೂ ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ಗಳಿಸಿದ ಅಮೂಲ್ಯ ಸಂಪತ್ತನ್ನು ಕಾಪಾಡಿಕೊಂಡು ಹೋಗಬೇಕು.

ಭಾರತ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ದೇಶ. ಬದಲಾದ ಸನ್ನಿವೇಶದಲ್ಲಿಭಾರತವಿಂದು ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿದೆ. ಎಲ್ಲಕ್ಷೇತ್ರಗಳಲ್ಲಿಅಭಿವೃದ್ಧಿ ಕಾಣುತ್ತಿದೆ. ವಿದೇಶಿ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆಯುತ್ತಿದೆ. ಎಐ ಯುಗದಲ್ಲೂತನ್ನದೇ ಆದ ಹಿರಿಮೆ ಗರಿಮೆ ಉಳಿಸಿಕೊಂಡು ಸಮಗ್ರ ಪ್ರಗತಿಯ ಕನಸು ನನಸಾಗಿಸುವಲ್ಲಿಭಾರತ ಸಾಗುತ್ತಿದೆ. ಇದಕ್ಕೆ ಹಲವರ ಕೊಡುಗೆ ಇದೆ. ಹಿರಿಯರ ತ್ಯಾಗ, ಬಲಿದಾನದ ಪರಿಣಾಮ ನಾವಿಂದು ಇದರ ಫಲ ಉಣ್ಣುತ್ತಿದ್ದೇವೆ. ಆದರೆ ಮುಂದೆ ಇನ್ನಷ್ಟು ನಮ್ಮನ್ನು, ನಮ್ಮ ದೇಶವನ್ನು ಬಲಿಷ್ಠವಾಗಿಸಲು ಹಿಂದಿನವರನ್ನು ಸದಾ ನೆನೆಯಬೇಕು.

ತಲೆಮಾರಿನ ತ್ಯಾಗಕ್ಕೆ ಸಿಕ್ಕ ಫಲ

ಭಾರತದ ಸ್ವಾತಂತ್ರ್ಯ ಒಂದು ದಿನದಲ್ಲಿದೊರೆತದ್ದಲ್ಲ. ಅದರ ಹಿಂದೆ ದಶಕಗಳ ಹೋರಾಟವಿದೆ. ರಕ್ತ, ಬೆವರು, ಕಣ್ಣೀರು ಮತ್ತು ತ್ಯಾಗದಿಂದ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಸೆರೆಮನೆಯ ಕತ್ತಲು ಕೋಣೆಗಳಿವೆ. ಲಾಠಿ ಏಟುಗಳಿವೆ. ನೇಣುಗಂಬವೇರಿದ ಯುವಕರಿದ್ದಾರೆ. ಕುಟುಂಬ, ಆಸ್ತಿ, ಅಧಿಕಾರ ಮತ್ತು ವೈಯಕ್ತಿಕ ಸುಖವನ್ನೆಲ್ಲದೇಶಕ್ಕಾಗಿ ತ್ಯಜಿಸಿದ ಅಸಂಖ್ಯಾತ ಜೀವಗಳ ಕಥೆಯಿದೆ. ಮಹಾತ್ಮ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹ, ಸುಭಾಷ್ ಚಂದ್ರ ಬೋಸ್ ಅವರ ಕ್ರಾಂತಿಕಾರಿ ಹೋರಾಟ, ಭಗತ್ ಸಿಂಗ್ ಅವರ ಬಲಿದಾನ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢ ನಾಯಕತ್ವ ಸೇರಿದಂತೆ ಅನೇಕ ಮಹನೀಯರ ಕೊಡುಗೆ ಸ್ವಾತಂತ್ರ್ಯ ಹೋರಾಟಕ್ಕೆ ದಿಕ್ಕು ನೀಡಿತು. ಆದರೆ ಇತಿಹಾಸದ ಪುಟಗಳಲ್ಲಿಹೆಸರು ಕಾಣದ ಲಕ್ಷಾಂತರ ಸಾಮಾನ್ಯ ಜನರ ತ್ಯಾಗವೂ ಈ ಸ್ವಾತಂತ್ರ್ಯದ ಅಡಿಪಾಯದಲ್ಲಿದೆ. ಹೀಗಾಗಿ ಇಂದು ನಾವು ಮುಕ್ತವಾಗಿ ಮಾತನಾಡುವ ಪ್ರತಿಯೊಂದು ಮಾತಿನ ಹಿಂದೆ, ನಿರ್ಭಯವಾಗಿ ಬರೆಯುವ ಪ್ರತಿಯೊಂದು ಅಕ್ಷರದ ಹಿಂದೆ ಮತ್ತು ಸ್ವತಂತ್ರವಾಗಿ ಬದುಕುವ ಪ್ರತಿಯೊಂದು ಕ್ಷಣದ ಹಿಂದೆ ಒಂದು ತಲೆಮಾರಿನ ತ್ಯಾಗವಿದೆ. ಭಾರತ ಈಗ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಕೃಷಿ, ಕೈಗಾರಿಕೆ, ವೈದ್ಯಕೀಯ, ಶಿಕ್ಷಣ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದೇಶ ಜಾಗತಿಕ ಮಟ್ಟದಲ್ಲಿತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ದೂರದ ಹಳ್ಳಿಯ ಮಗುವಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ರೈತನ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ಸಿಗುತ್ತಿದೆ. ಯುವಕರಿಗೆ ತಮ್ಮ ಪ್ರತಿಭೆಗೆ ತಕ್ಕ ಅವಕಾಶ ದೊರೆಯುತ್ತಿದೆ. ಬಡವನಿಗೂ ಗೌರವಯುತ ಜೀವನದ ಅವಕಾಶ ಇದೆ. ಈಗ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಇನ್ನಷ್ಟು ಬಲಪಡಿಸುವ ಪಯಣ ಮುಂದುವರಿಯಬೇಕು. ಹಸಿವು, ಬಡತನ, ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರ ಮತ್ತು ಶೋಷಣೆಯಿಂದಲೂ ಸಮಾಜ ಮುಕ್ತವಾಗಬೇಕು. ಕಟ್ಟಕಡೆಯ ಹಳ್ಳಿಗೂ ಅಭಿವೃದ್ಧಿ ತಲುಪಬೇಕು. ಪ್ರತಿಯೊಂದು ಮಗುವಿನ ಕಣ್ಣಲ್ಲೂಭವಿಷ್ಯದ ಕನಸು ಮೂಡಬೇಕು. ಪ್ರತಿಯೊಬ್ಬ ನಾಗರಿಕನಿಗೂ ತನ್ನ ದೇಶದಲ್ಲಿಗೌರವದಿಂದ ಬದುಕುವ ಭರವಸೆ ಇರಬೇಕು. ಅಂದಾಗ ಮಾತ್ರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ನಿಜವಾದ ಅರ್ಥ ದೊರೆಯುತ್ತದೆ.

ಬಾಕ್ಸ್

ಯುವಶಕ್ತಿಯ ಕೈಯಲ್ಲಿಭಾರತದ ಭವಿಷ್ಯ

ಭಾರತ ಇಂದು ವಿಶ್ವದ ಗಮನ ಸೆಳೆಯುತ್ತಿರುವ ಬಲಿಷ್ಠ ರಾಷ್ಟ್ರ. ಪ್ರಗತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಯುವಜನರ ಮೇಲಿದೆ. ಯುವಕರು ಉದ್ಯೋಗ ಹುಡುಕುವವರಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವವರಾಗುತ್ತಿದ್ದಾರೆ ಜ್ಞಾನ, ಕೌಶಲ, ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ತಮ್ಮ ಬದುಕಿನ ಮೌಲ್ಯಗಳನ್ನಾಗಿ ಮಾಡಿಕೊಂಡು ಭಾರತವನ್ನು ಇನ್ನಷ್ಟು ಶಕ್ತಿಶಾಲಿ ರಾಷ್ಟ್ರವನ್ನಾಗಿಸುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಅರುಣಾಚಲ ಪ್ರದೇಶದವರೆಗೆ ಹರಡಿರುವ ಈ ಮಹಾನ್ ರಾಷ್ಟ್ರದ ನಿಜವಾದ ಶಕ್ತಿ ಅದರ ಏಕತೆ ಮತ್ತು ಸಹಬಾಳ್ವೆ. ಈ ಏಕತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಹೊಣೆಗಾರಿಕೆ. ಸಿಕ್ಕಿದ ಸ್ವಾತಂತ್ರ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ದೇಶದ ಅಖಂಡತೆಯನ್ನು ಕಾಪಾಡುತ್ತಾ, ಸಮಾಜದಲ್ಲಿಶಾಂತಿ ಮತ್ತು ಸಹೋದರತೆಯನ್ನು ಬೆಳೆಸಬೇಕು. ದೇಶ ನಮಗಾಗಿ ಏನು ಮಾಡಿದೆ ಎಂಬುದಕ್ಕಿಂತ, ದೇಶಕ್ಕಾಗಿ ನಾವು ಏನು ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಸದಾ ಜೀವಂತವಾಗಿರಲಿ.