ಪುಸ್ತಕ ಓದುವಿನಿಂದ ಜ್ಞಾನಾರ್ಜನೆ ಹೆಚ್ಚಳ

Contributed bypuru.dpete1987@gmail.com|Vijaya Karnataka
reading books its importance in knowledge acquisition
ವಿಕ ಸುದ್ದಿಲೋಕ ಚಾಮರಾಜನಗರ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿ ಗಳು ಪುಸ್ತಕಗಳನ್ನು ಓದುವ ಹವ್ಯಾಸ ವನ್ನು ಬೆಳೆಸಿಕೊಂಡಾಗ ಜ್ಞಾರ್ನಾಜನೆ ಹೆಚ್ಚಳಕ್ಕೆ ಅನುಕೂಲವಾಗುತ್ತದೆ ಎಂದು ಗುಂಡ್ಲುಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಶ್ರೀನಿವಾಸ ನಾಯಕ ಸಲಹೆ ನೀಡಿದರು.ನಗರದ ಜೆಎಸ್ ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿಜೆಎಸ್ ಎಸ್ ಮಹಿಳಾ ಕಾಲೇಜು ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಗ್ರಂಥಾಲಯದ ಪಿತಾಮಹ ಡಾ. ಎಸ್ .ಆರ್ .ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ ಮತ್ತು ಅತಿಥಿ ಉಪನ್ಯಾಸ ಕಾರ ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು. ವಿದ್ಯಾರ್ಥಿಗಳು ಜೀವಂತ ಜ್ಞಾನ ಕೇಂದ್ರವಾಗಿರುವ ಗ್ರಂಥಾಲಯಗಳ ಉಪಯೋಗ ಪೂರ್ಣ ಪ್ರಮಾಣದಲ್ಲಿಪಡೆದುಕೊಳ್ಳಬೇಕು. ಗ್ರಂಥಪಾಲಕರ ಮಾರ್ಗದರ್ಶನ ದೊಂದಿಗೆ ಓದುವ ಹವ್ಯಾಸವನ್ನು ನಿರಂತರವಾಗಿ ರೂಪಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಗಣಿತ ಮತ್ತು ಭೌತಶಾಸ್ತ್ರದ ಅಧ್ಯಾಪಕರಾಗಿದ್ದ ಡಾ.ರಂಗನಾಥನ್ ಅವರು ಗ್ರಂಥಾಲಯ ಕ್ಷೇತ್ರಕ್ಕೆ ಬಂದು ದಶಮಾಂಶ ವರ್ಗೀಕರಣ ಪದ್ಧತಿ, ಸೂಚೀಕರಣ, ಗ್ರಂಥಾಲಯ ಆಡಳಿತ, ಓದುಗ ಕೇಂದ್ರಿತ ಸೇವೆಗಳ ಮೂಲಕ ಭಾರತದಲ್ಲಿಗ್ರಂಥಾಲಯ ಚಳುವಳಿಗೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿಎಲ್ಲಾಮಾಹಿತಿಗಳು ನಿಖರವಾಗಿರುವುದಿಲ್ಲ. ಆದ್ದರಿಂದ ವಿಶ್ವಾಸಾರ್ಹ ಮಾಹಿತಿಯನ್ನು ಗುರುತಿಸಿ ಓದುಗರಿಗೆ ತಲುಪಿಸುವಲ್ಲಿಗ್ರಂಥಪಾಲಕರ ಪಾತ್ರ ಮಹತ್ವವಾದದ್ದು ಎಂದು ಅಭಿಪ್ರಾಯಪಟ್ಟರು.ಕಾರ ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಗ್ರಂಥಾ ಲಯದ ಬಳಕೆಯಿಂದ ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿ ಹೊಂದುತ್ತದೆ. ಪುಸ್ತಕಗಳ ಅಧ್ಯಯನದ ಜೊತೆಗೆ ಹೆಚ್ಚಿನ ಜ್ಞಾನಾರ್ಜನೆ ಮಾಡುವ ಮೂಲಕ ಗ್ರಂಥಾಲಯವನ್ನೇ ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.ಕಾರ ್ಯಕ್ರಮದಲ್ಲಿಗ್ರಂಥಾಲಯದ ಸಂಚಾಲಕ ನಟರಾಜನ್ , ಐಕ್ಯೂಎಸಿ ಸಂಯೋಜಕ ಮಲ್ಲಿಕಾರ್ಜುನ ಸ್ವಾಮಿ, ಗ್ರಂಥ ಪಾಲಕಿ ಎಂ.ಪೂಜಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.