ಅವರ ಕಾಲಾವಧಿ 1716-1797. ಪೂರ್ವಾಶ್ರಮದ ಹೆಸರು ಕೃಷ್ಣಾಚಾರ್ಯ. ತಂದೆ ಸುಬ್ಬಣ್ಣಾಚಾರ್ಯರೇ ಮೊದಲ ಗುರುಗಳು. ನಂತರ ಸತ್ಯಬೋಧತೀರ್ಥರ ಮಾರ್ಗದರ್ಶನದಲ್ಲಿವೇದಾಂತ, ವ್ಯಾಕರಣ, ಮೀಮಾಂಸೆ, ನ್ಯಾಯಶಾಸ್ತ್ರಗಳ ಪಾಂಡಿತ್ಯ ಗಳಿಸಿದರು.
26ನೇಯ ಯತಿವರರಾದ ಶ್ರೀ ಸತ್ಯಸಂಧತೀರ್ಥರು ಕೃಷ್ಣಾಚಾರ್ಯರಿಗೆ ಸನ್ಯಾಸದೀಕ್ಷೆ ನೀಡಿ ಸತ್ಯವರತೀರ್ಥರೆಂದು ಕರೆದರು. ವೇದಾಂತ ಸಾಮ್ರಾಜ್ಯದಲ್ಲಿ1794-1797ರವರೆಗೆ ಕೇವಲ ಮೂರು ವರ್ಷಗಳ ಕಾಲ ಮಾತ್ರವಿದ್ದರೂ ತಮ್ಮ ಜ್ಞಾನ, ಭಕ್ತಿ, ವೈರಾಗ್ಯಗಳ ಮೂಲಕ ಪೀಠಾಧಿಪತಿಗಳ ಸಾಲಿನಲ್ಲಿಶಾಶ್ವತ ಛಾಪು ಮೂಡಿಸಿದ ಅಪ್ರತಿಮ ದ್ವೈತ ವೇದಾಂತದ ಪ್ರತಿಪಾದಕರು. ಮಹಿಷಿಯಲ್ಲಿಶ್ರೀ ಹನುಮಾನ್ ಹಾಗೂ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿಯ ಪ್ರತಿಷ್ಠಾನೆಗೈದು ತಮ್ಮ ಗುರುಗಳ ವೃಂದಾವನ ನಿರ್ಮಿಸಿ ಸಮಾರಾಧನೆಗೈದು ಸವಣೂರಿಗೆ ಬಂದರು. ಅಲ್ಲಿತಮ್ಮ ವಿದ್ಯಾಗುರುಗಳ ಸನ್ನಿಧಿಯಲ್ಲಿಅಲವಣಾಹಾರದಿಂದ 24 ಲಕ್ಷ ಪ್ರಣವಜಪಗಳನ್ನು ಮಾಡಿ ಗುರುಗಳಿಗೆ ಸಮರ್ಪಿಸಿದರು. ತಮ್ಮ ಗುರುಗಳು ರಚಿಸಿದ ‘ಶ್ರೀಮದ್ ವಿಷ್ಣುಸಹಸ್ರನಾಮ ವಿವೃತಿ’ ಎಂಬ ಕೃತಿಯನ್ನು ಲಕ್ಷ ತುಳಸಿ ಅರ್ಚನೆಯೊಂದಿಗೆ ಸಮರ್ಪಣೆ ಮಾಡಿದರು. ಶ್ರೀ ಜಯತೀರ್ಥರ ‘ನ್ಯಾಯಸುಧಾ’ದ ಎರಡು ಅಧ್ಯಾಯಗಳಿಗೆ ಟೀಕೆ ಹಾಗೂ ಶ್ರೀ ಮಧ್ವಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ಟೀಕೆ ರಚಿಸಿರುವರು
ಶ್ರೀ ಅಡವಿ ಆಚಾರ್ಯರೆಂದು ಪ್ರಸಿದ್ಧರಾದ ಜಯತೀರ್ಥಾಚಾರ್ಯರಿಗೆ ಸನ್ಯಾಸ ದೀಕ್ಷೆಯಿತ್ತು ‘ವಿಷ್ಣುತೀರ್ಥ’ರೆಂದು ಕರೆದು ಅವರಿಗೆ ಪ್ರಣವೋಪದೇಶ ನೀಡಿದರು.
ಆ ಕಾಲಕ್ಕೆ ದಿವಾನ ಪೂರ್ಣಯ್ಯನವರು ಶ್ರೀಗಳಲ್ಲಿವಿಶೇಷ ಗೌರವಾದರಗಳನ್ನು ಹೊಂದಿದ್ದರು. ಟಿಪ್ಪುಸುಲ್ತಾನನ ಪ್ರಾಬಲ್ಯ ಅಧಿಕವಾದ ಸಮಯದಲ್ಲಿಅವರ ರಕ್ಷಣೆಗೆ ಹಾಗೂ ಸಂಸ್ಥಾನದ ಯೋಗಕ್ಷೇಮಕ್ಕೆ ವಿಶೇಷ ವ್ಯವಸ್ಥೆ ಒದಗಿಸಿದ್ದರು. ಶ್ರೀ ಸತ್ಯಬೋಧತೀರ್ಥರ ಕಾಲದಲ್ಲಿಸಂಸ್ಥಾನಕ್ಕೆ ಸಂದ ಅಪಾರ ಸಂಪತ್ತೆಲ್ಲಶ್ರೀಸತ್ಯವರತೀರ್ಥರ ಸಂಚಾರಕಾಲದಲ್ಲಿಜೊತೆಗಿರಲು ಹಲವಾರು ಕಳ್ಳರು, ಡಕಾಯಿತರ ಕಣ್ಣು ಅದರ ಮೇಲಿದ್ದು ಹೊಡೆಯಲು ಹೊಂಚು ಹಾಕಿದ್ದರು. ಒಂದು ಮುಂಜಾನೆ ಆಷಾಢ ಶುದ್ಧ ಚತುರ್ದಶಿ ಕಳ್ಳನೋರ್ವ ಶ್ರೀಸೀತಾರಾಮರ ಪ್ರತಿಮೆಗಳಿದ್ದ ಪೆಟ್ಟಿಗೆಯನ್ನು ಕದ್ದೊಯ್ದನು. ಪೂಜೆಗೆ ಅಣಿಯಾಗಿ ಬಂದ ಶ್ರೀಗಳಿಗೆ ದೇವರ ಪ್ರತಿಮೆಗಳು ಕಳುವಾದ ವಿಷಯ ತಿಳಿದು ಬಹು ವ್ಯಥೆಪಟ್ಟರು. ಹುಡುಕಿಸಲು ಪಟ್ಟ ಪ್ರಯತ್ನಗಳೆಲ್ಲ ವಿಫಲವಾಗಲು ಶ್ರೀರಾಮನು ಒಡ್ಡಿದ ಪರೀಕ್ಷೆ ಇದೆಂದು ಪ್ರತಿಮೆಗಳು ಸಿಗುವವರೆಗೆ ಉಪವಾಸವಿರುವ ಪ್ರತಿಜ್ಞೆ ಕೈಗೊಂಡರು. ಈ ವಿಷಯ ದಿವಾನ ಪೂರ್ಣಯ್ಯನವರಿಗೆ ತಿಳಿದು ಕಳುವಾದ ಪೆಟ್ಟಿಗೆಯನ್ನು ತಾವು ಹುಡುಕಿಸಿಕೊಡುವೆವು ಉಪವಾಸ ಬೇಡೆಂದು ಬೇಡಿಕೊಂಡರೂ ಕೇಳದೇ ತಮ್ಮ ಪಟ್ಟು ಬಿಡಲಿಲ್ಲ. ತೀರ್ಥ ಮಾತ್ರ ಸೇವಿಸಿ ಇಡೀ ದಿನ ಧ್ಯಾನಸ್ಥರಾಗಿರುತ್ತಿದ್ದರು. ಉಪವಾಸ ಮುಂದುವರಿಯಿತು. 21ನೆಯ ದಿನ ಕಳ್ಳನು ಆಭರಣಗಳನ್ನೆಲ್ಲತೆಗೆದಿಟ್ಟುಕೊಂಡು ಕೇವಲ ಪ್ರತಿಮೆಗಳನ್ನು ಬಾಳೆಯೆಲೆಯಲ್ಲಿಸುತ್ತಿ ಸನಿಹದಲ್ಲಿದ್ದ ಹುಲ್ಲಿನ ಬಣವೆಯಲ್ಲಿಟ್ಟು ಪರಾರಿಯಾಗಿದ್ದ . ಇದು ನವರತ್ನ ಅಣ್ಣಯ್ಯಾಚಾರ್ಯರ ಕಣ್ಣಿಗೆ ಕಂಡು ಅತೀವ ಹರುಷಗೊಂಡು ಶ್ರೀಗಳಿಗೆ ಪ್ರತಿಮೆಗಳನ್ನು ಹಸ್ತಾಂತರಿಸಿದರು. ಶ್ರೀ ಸತ್ಯವರ ತೀರ್ಥರ ಸಂತಸಕ್ಕೆ ಪಾರವೇ ಇರಲಿಲ್ಲ. ಪ್ರತಿಮೆಗಳನ್ನು ಶುಚಿಗೊಳಿಸಿ ಶಾಸ್ತೊ್ರೕಕ್ತವಾಗಿ ಪೂಜೆಗೈದರು. ಪೂರ್ಣಯ್ಯನವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
21 ದಿನಗಳ ಉಪವಾಸದಿಂದ ಜರ್ಜರಿತವಾದ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿಕೊಳ್ಳಲಾಗಲಿಲ್ಲ. ತಮ್ಮ ಉತ್ತರಾಧಿಕಾರತ್ವದ ಹೊಣೆಯನ್ನು ವಹಿಸಲು ನವರತ್ನ ಅಣ್ಣಯ್ಯಾಚಾರ್ಯರಿಗೆ ಸನ್ಯಾಸ ದೀಕ್ಷೆ ನೀಡಿ ಶ್ರೀ ಸತ್ಯಧರ್ಮತೀರ್ಥರೆಂದು ಕರೆದು ವೇದಾಂತ ಜ್ಞಾನದ ಜ್ಯೋತಿಯನ್ನು ಹೊತ್ತೊಯ್ಯಲು ಇವರೇ ಸಮರ್ಥರೆಂದು ತೀರ್ಮಾನಿಸಿದರು ದ್ವೈತ ಸಾಮ್ರಾಜ್ಯ ಪೀಠದಲ್ಲಿಕುಳ್ಳಿರಿಸಿ ಪಟ್ಟಾಭಿಷೇಕ ನೆರವೇರಿಸಿದರು. ಮುಂದೆ ಎರಡು ದಿನಗಳ ನಂತರ ಶ್ರಾವಣ ಶುದ್ಧ ಸಪ್ತಮಿ ಶ್ರೀಸತ್ಯವರತೀರ್ಥರು ನಾಮಗೊಂಡಲುವಿನಲ್ಲಿಇಹಲೋಕ ತ್ಯಜಿಸಿದರು. ಸಂತೆಬಿದನೂರಿನಲ್ಲಿರಾಜ ಜನಮೇಜಯ ಪ್ರತಿಷ್ಠಾಪಿಸಿದ ಪ್ರಸಿದ್ಧ ಪಂಡಿತ ಶ್ರೀ ಮುಖ್ಯಪ್ರಾಣದೇವರ ದೇವಾಲಯದೆದುರು ಶ್ರೀಸತ್ಯವರತೀರ್ಥರ ವೃಂದಾವನವಿದೆ. ಸಂತೆಬಿದನೂರು ಆಂಧ್ರಪ್ರದೇಶದ ಅನಂತಪುರಜಿಲ್ಲೆಯಲ್ಲಿದೆ.