ವಿಕ ಸುದ್ದಿಲೋಕ ಚಾಮರಾಜನಗರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಬಿಜೆಪಿ ಯುವ ಮೋರ್ಚಾ. ವತಿಯಿಂದ ತಿರಂಗಾ ಯಾತ್ರೆ ನಡೆಯಿತು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ತಿರಂಗಾಯಾತ್ರೆ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ರಾಮಸಮುದ್ರದಲ್ಲಿರುವ ಡಾ. ಬಿ.ಆರ್ .ಅಂಬೇಡ್ಕರ್ ಪುತ್ಥಳಿಗೆ ತೆರಳಿ ಮಾಲಾರ್ಪಣೆ ಮಾಡಿ ತಿರಂಗಾ ಯಾತ್ರೆ ಮುಕ್ತಾಯವಾಯಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು ವಂದೇ ಮಾತರಂ ಘೋಷಣೆ ಮೊಳಗಿಸುತ್ತಾ ತಿರಂಗಾ ಯಾತ್ರೆ ನಡೆಸಿದರು. ಒಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ ಮಾತನಾಡಿ, ‘‘ಸ್ವಾತಂತ್ರ್ಯ ಸಂಗ್ರಾಮದಲ್ಲಿಬಲಿದಾನ ಮಾಡಿದ ರಾಷ್ಟ್ರಭಕ್ತರಿಗೆ ಪ್ರಣಾಮ ಸಲ್ಲಿಸುವುದು ನಮ್ಮ ಕರ್ತವ್ಯ,’’ಎಂದರು. ಜಿಲ್ಲಾಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಮಾತನಾಡಿದರು. ಈ ವೇಳೆ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯ ಬಾಲರಾಜು, ಜಿಲ್ಲಾಬಿಜೆಪಿ ವಕ್ತಾರ ಮನೋಜ್ ಪಟೇಲ್ , ಆನಂದ್ ಭಗೀರಥ್ , ಪ್ರವೀಣ್ , ಪ್ರದೀಪ್ , ಸುಂದರರಾಜ್ , ರಾಮಸಮುದ್ರ ರಾಜಪ್ಪ, ಶಿವರಾಜ್ , ಚಂದ್ರಶೇಖರ್ , ಬುಲೆಟ್ ಚಂದ್ರು, ನಟರಾಜು, ಪಿ.ರಂಗಸ್ವಾಮಿ, ರಾಮಸಮುದ್ರ ವೇಣುಗೋಪಾಲ್ , ವೀರೇಂದ್ರ, ರಾಮಸಮುದ್ರ ಶಿವಣ್ಣ, ಮಾರ್ಕೆಟ್ ಕುಮಾರ್ , ಕೂಸಣ್ಣ, ಮಂಜುನಾಥ್ , ಸುಂದ್ರಪ್ಪ, ಶಿವಣ್ಣ, ಮಣಿಕಂಠ, ಮಹೇಶ್ ಇತರರು ಪಾಲ್ಗೊಂಡಿದ್ದರು.