ಅರಸು ಆದರ್ಶ ಪಾಲಿಸಿ

Contributed bypavanpvk123@gmail.com|Vijaya Karnataka
celebration of devaraja arasus 111th birth anniversary equality and welfare of backward classes
ಅರಸು ಆದರ್ಶ ಪಾಲಿಸಿ

ಹುನಗುಂದ: ‘‘ ದೇವರಾಜ ಅರಸು ಅವರ ಆದರ್ಶಗಳು ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಇಂದಿನ ಪೀಳಿಗೆ ಅಳವಸಿಕೊಂಡು, ಸಮಾನತೆ ಮತ್ತು ಸೌಹಾರ್ದತೆ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು,’’ಂದು ತಹಸೀಲ್ದಾರ್ ಪ್ರದೀಪ ಕುಮಾರ್ ಹಿರೇಮಠ ಹೇಳಿದರು.
ಪಟ್ಟಣದ ಡಿ.ದೇವರಾಜು ಅರಸು ಭವನದಲ್ಲಿತಾಲೂಕು ಆಡಳಿತ, ತಾಪಂ, ಪುರಸಭೆ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿನಡೆದ ಡಿ.ದೇವರಾಜು ಅರಸು ಅವರ 111ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘‘ಹಿಂದುಳಿದವರ, ಶೋಷಿತರ ಹಾಗೂ ದುರ್ಬಲ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅರಸು ಅವರು ಮಹತ್ವದ ಕೊಡುಗೆ ನೀಡಿದ್ದಾರೆ,’’ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿ ದೇಶಪಾಂಡೆ ಮಾತನಾಡಿದರು. ಮಹಾಂತೇಶ ಅವಾರಿ ಉಪನ್ಯಾಸ ನೀಡಿದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಮಾಟೂರ, ಕಾನಿಪ ಅಧ್ಯಕ್ಷ ಅಮರೇಶ ನಾಗೂರ ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮುತ್ತಣ್ಣ ಕಲಗೋಡಿ, ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ, ಅಮೀನಗಡ ಪಪಂ ಉಪಾಧ್ಯಕ್ಷೆ ಶ್ರೀದೇವಿ ನಿಡಗುಂದಿ ಇದ್ದರು.

ಪಫಟೊ

ಹುನಗುಂದ ಪಟ್ಟಣದ ಡಿ.ದೇವರಾಜು ಅರಸು ಭವನದಲ್ಲಿಅರಸು ಅವರ 111ನೇ ಜನ್ಮ ದಿನ ಆಚರಿಸಲಾಯಿತು.