ದೇವರಾಜು ಅರಸು ಜನ್ಮದಿನಾಚರಣೆ

Contributed byjohn.dsouza@timesofindia.com|Vijaya Karnataka
celebration of devaraja arasus 111th birthday in a grand manner
ಮಹಾಪುರುಷರ ಬದುಕು ದಾರಿದೀಪ: ಸಹಾಯಕ ಕಮಿಷನರ್ ರಶ್ಮಿ

ವಿಕ ಸುದ್ದಿಲೋಕ ಕುಂದಾಪುರ
ಬಡವರ್ಗದ ಸಹಸ್ರ ಸಹಸ್ರ ಮಕ್ಕಳು ಹಾಸ್ಟೆಲ್ ಓದಿ ನಾಡಿನ ಸತ್ಪ್ರಜೆಯನ್ನಾಗಿಸುವಲ್ಲಿದಿ.ದೇವರಾಜು ಅರಸು ಅವರ ಕೊಡುಗೆ ದೊಡ್ಡದು. ಹಾಸ್ಟೆಲ್ ನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ಅರಸು ಆತ್ಮಚರಿತ್ರೆಯ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು. ಇಂತಹ ಅಸಂಖ್ಯ ಮಹಾಪುರುಷರ ಬದುಕು ಯುವಜನರಿಗೆ ದಾರಿದೀಪ ಆಗಲಿದೆ ಎಂದು ಸಹಾಯಕ ಕಮಿಷನರ್ ರಶ್ಮಿ ಎಸ್ .ಆರ್ . ಹೇಳಿದರು.

ಗುರುವಾರ ಇಲ್ಲಿನ ನಾರಾಯಣಗುರು ಕಲ್ಯಾಣ ಭವನದಲ್ಲಿತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ವತಿಯಿಂದ ಜರುಗಿದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಅವರ 111ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಸು ಸಾಮಾಜಿಕ ನ್ಯಾಯದ ಹರಿಕಾರರು. ಉಳುವವನೇ ಹೊಲದೊಡೆಯ ಕ್ರಾಂತಿಕಾರಿ ಯೋಜನೆ ಜಾರಿ ತಂದವರು. ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣಗೊಳಿಸಿದವರು. ಹಸಿರು ಕ್ರಾಂತಿಯ ಹರಿಕಾರರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟವರು. ಇಂತಹ ಮಹಾತ್ಮರ ಅನುಸರಣೆ ನಮ್ಮದಾಗಬೇಕು ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ, ದೇವರಾಜು ಅರಸು ಅಂತಹ ನಾಯಕರು ಅಪರೂಪಕ್ಕೊಮ್ಮೆ ಹುಟ್ಟಿ ಬರುತ್ತಾರೆ. ಅಂತವರ ಆದರ್ಶ ಪಾಲನೆ ನಮ್ಮದಾಗಬೇಕು ಎಂದರು.

ಬಿದ್ಕಲ್ ಕಟ್ಟೆ ಸರಕಾರಿ ಪಿಯು ಕಾಲೇಜು ಉಪನ್ಯಾಸಕ ರಾಘವೇಂದ್ರ ಕಿಣಿ ಅರಸು ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕುಂದಾಪುರ ತಹಸೀಲ್ದಾರ ಪ್ರದೀಪ ಕುರುಡೇಕರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ., ಪಂಚಾಯಿತಿರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಸುಧಾಕರ ಶೆಟ್ಟಿ, ಎಎಸ್ ಐ ಧರ್ಮೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ಕುಲಾಲ್ , ಪುರಸಭೆ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ವಿ.ಪ್ರಭಾಕರ್ , ತಾ.ಪಂ.ವ್ಯವಸ್ಥಾಪಕ ಗುರುಮೂರ್ತಿ, ಹಿಂದುಳಿದ ವರ್ಗಗಳ ಇಲಾಖೆಯ ರವೀಂದ್ರ ಉಪಸ್ಥಿತರಿದ್ದರು.

ಈ ಸಂದರ್ಭ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಆಶಾದೇವಿ ಸ್ವಾಗತಿಸಿದರು. ಶಂಕರ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ವಂದಿಸಿದರು. ಕೊನೆಯಲ್ಲಿವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯ ನಡೆಸಿಕೊಟ್ಟರು.

ಪೋಟೊ//20ಕೆ-ಎಆರ್ ಎಸ್ //. ಸಹಾಯಕ ಕಮಿಷನರ್ ರಶ್ಮಿ ಎಸ್ .ಆರ್ . ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.