‘ಮಾದಾರ ಮಹಾಸಭಾ ಸದಸ್ಯತ್ವ ಪಡೆಯಿರಿ’

Contributed bysureshdevaramani@gmail.com|Vijaya Karnataka
registration for madara mahasabha membership begins
‘ ಮಾದಾರ ಮಹಾಸಭಾ ಸದಸ್ಯತ್ವ ಪಡೆಯಿರಿ’

ವಿಕ ಸುದ್ದಿಲೋಕ ಕೊಟ್ಟೂರು
‘‘ಪ್ರಸ್ತುತ ಮಾದಿಗ ಸಮುದಾಯದ ಬಲವರ್ಧನೆಗೆ ಸಮುದಾಯದ ಪ್ರತಿಯೊಬ್ಬರೂ ಮಾದಾರ ಮಹಾಸಭಾ ಸದಸ್ಯತ್ವ ಪಡೆಯಬೇಕು,’’ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿನಡೆದ ರಾಜ್ಯ ಮಾದಾರ ಮಹಾಸಭಾ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಮಾತನಾಡಿದರು.

‘‘ಭೂ ಮಂಡಲದ ಮೂಲ ನಿವಾಸಿಗಳಾದ ನಾವು ಮಾದಿಗ ಜಾತಿ ಹೆಸರನ್ನು ಹೇಳಲು ಹಿಂಜರಿಯಬಾರದು. ನೂರಾರು ವರ್ಷಗಳಿಂದ ಎಲ್ಲಕ್ಷೇತ್ರಗಳಲ್ಲಿತುಳಿತಕ್ಕೊಳಗಾಗಿರುವ ಮಾದಿಗರು ಸಂಘಟನೆಯಾಗಬೇಕಿದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿಸಮಾಜ ಅಭಿವೃದ್ಧಿ ಹೊಂದಬೇಕಿದೆ.ಬಾಂಧವರು ಮಹಾಸಭಾದಲ್ಲಿಸದಸ್ಯತ್ವ ಪಡೆಯಬೇಕು. ಗ್ರಾಮ ಮಟ್ಟದಿಂದ ನಗರ ಪ್ರದೇಶದವರೆಗಿನ ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿಸದಸ್ಯತ್ವ ಮಾಡಿಸಲು ಜಾಗೃತಿ ಮೂಡಿಸಬೇಕು. ನೋಂದಣಿಯ ಕಾರ್ಡ್ ಹೊಂದಬೇಕು,’’ ಎಂದರು ಹೇಳಿದರು.

ಶಾಲೆ, ಕಾಲೇಜು ಸ್ಥಾಪಿಸಿ:

ಮಹಾಸಭಾ ಜಿಲ್ಲಾಕಾರ್ಯದರ್ಶಿ ಬದ್ದಿ ಮರಿಸ್ವಾಮಿ ಮಾತನಾಡಿ, ‘‘ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಾಲೆ, ಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ರಾಜ್ಯಾದ್ಯಂತ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯ ತೆರೆಯಬೇಕಾಗಿದೆ. ಯುಪಿಎಸ್ , ಕೆಪಿಎಸ್ ಸಿ ಸೇರಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಸಾಧನೆ ತೋರಲು ಉತ್ತಮ ತರಬೇತಿ ಕೇಂದ್ರಗಳನ್ನು ತೆರೆಯುವುದು ಅವಶ್ಯವಿದೆ,’’ಎಂದರು.

ಮಹಾಸಭಾದ ತಾಲೂಕು ಅಧ್ಯಕ್ಷ ಕನ್ನಾಕಟ್ಟಿ ಶಿವರಾಜ, ಮುಖಂಡರಾದ ಹಡಗಲಿ ಪುತ್ರೇಶ್ , ಜಿಲ್ಲಾಉಪಾಧ್ಯಕ್ಷ ಎಚ್ .ಪೂಜಪ್ಪ, ಖಜಾಂಚಿ ದುರೇಶ, ಮಹಿಳಾ ಮುಖಂಡರಾದ ವಿಶಾಲಾಕ್ಷಿ ರಾಜಣ್ಣ, ಮುಖಂಡರಾದ ಬೇವೂರು ಕೊಟ್ರೇಶ್ , ಅಕ್ಷಯ್ ಕುಮಾರ, ರಾಂಪುರ ಶ್ರೀನಿವಾಸ, ಪೂಜಾರ್ ಅಜ್ಜಯ್ಯ, ಗುಲಾಲಿ ದುರುಗೇಶ, ಹನುಮಂತ, ಮಹೇಶ್ , ಪರಸಪ್ಪ, ರಾಜಣ್ಣ, ಕೊಟ್ರೇಶ್ , ಶಂಕರಪ್ಪ, ಸುರೇಶ್ , ರಾಮಣ್ಣ ಇತರರು ಇದ್ದರು.

ವಿಎನ್ ಆರ್ 20ಕೆಟಿಆರ್ 1: ಕೊಟ್ಟೂರು ಪ್ರವಾಸಿ ಮಂದಿರದಲ್ಲಿಕರ್ನಾಟಕ ಮಾದಾರ ಮಹಾಸಭಾದ ಸದಸ್ಯತ್ವ ಅಭಿಯಾನದ ಪೋಸ್ಟರ್ ಗಳನ್ನು ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಇತರರು ಪ್ರದರ್ಶಿಸಿದರು.