ವಿಕ ಸುದ್ದಿಲೋಕ ಚಿಕ್ಕಮಗಳೂರುಪರಿಸರ ಸೂಕ್ಷತ್ರ್ಮಪ್ರದೇಶ ಘೋಷಣೆಯಿಂದ ಮಲೆನಾಡಿಗರಿಗೆ ಆಗಬಹುದಾದ ಸಮಸ್ಯೆ ಪರಿಗಣಿಸಿ ಬಾಧಿತ ಪ್ರದೇಶದ ಎಲ್ಲರೂ ಮುಂದಿನ 30 ದಿನದೊಳಗೆ ಆಕ್ಷೇಪಣೆ ಸಲ್ಲಿಸಬೇಕು. ರಾಜ್ಯ ಸರಕಾರವು ಕೇರಳ ಮಾದರಿಯಲ್ಲಿಜನವಸತಿ ಮತ್ತು ಅರಣ್ಯವನ್ನು ಪ್ರತ್ಯೇಕಿಸಲು ಭೌತಿಕ ಸರ್ವೆಗಾಗಿ ಕಾಲಾವಕಾಶ ಪಡೆಯಬೇಕು ಎಂದು ಜಿಲ್ಲಾನಾಗರಿಕ ಹೋರಾಟ ಸಮಿತಿ ಮುಖಂಡ ಎಸ್ .ವಿಜಯ್ ಕುಮಾರ್ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಜಿಲ್ಲೆಯ 137 ಗ್ರಾಮಗಳನ್ನು ಪರಿಸರ ಸೂಕ್ಷತ್ರ್ಮ ಪ್ರದೇಶ ವ್ಯಾಪ್ತಿಯಲ್ಲಿಗುರುತಿಸಿದ್ದು ಈ ಹಿಂದೆ ಘೋಷಿಸಿದ್ದ 6ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ್ದರೂ ಮತ್ತೆ ಯಥಾವತ್ತಾದ ಅಧಿಸೂಚನೆ ಹೊರಬಿದ್ದಿದೆ. ಇದು ಜಾರಿಯಾದಲ್ಲಿಮಲೆನಾಡಿನಲ್ಲಿತಲೆತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಜನಜೀವನದ ಮೇಲೆ ಘೋರ ಪರಿಣಾಮ ಬೀರಲಿದೆ ಎಂದರು.
ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲಚುನಾಯಿತ ಶಾಸಕರು, ಎಂಎಲ್ ಸಿಗಳು, ಎಂಪಿ, ರಾಜ್ಯಸಭಾ ಸದಸ್ಯರು ಶೀಘ್ರ ಸಭೆ ಆಯೋಜಿಸಿ ಅದರ ಸಾಧಕ ಬಾಧಕಗಳನ್ನು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಅಧಿಸೂಚನೆಯಲ್ಲಿಗುರುತಿಸಿರುವ ನಕ್ಷೆಯೂ ಉಪಗ್ರಹ ಆಧಾರಿತವಾಗಿದ್ದು, ಇದರಿಂದ ಕಾಫಿ ತೋಟ, ಅಡಕೆ, ರಬ್ಬರ್ , ಮತ್ತಿತರ ತೋಟಗಾರಿಕಾ ಬೆಳೆಗಳು ಸ್ವಾಭಾವಿಕ ಅರಣ್ಯ ವ್ಯಾಪ್ತಿಯ ನಕಾಶೆಯೊಳಗಿದ್ದು ಇದನ್ನು ಸರಿಪಡಿಸಲು ಭೌತಿಕ ಸರ್ವೆ ನಡೆಸಿ ಗಡಿ ಗುರುತು ಮಾಡಬೇಕು. ರೈತರ ಜಮೀನು, ಗ್ರಾಮಗಳು, ಶಾಲೆ, ಆಟದ ಮೈದಾನ, ಸ್ಮಶಾನಗಳನ್ನು ಗುರುತಿಸಿದ ನಂತರ ಸೀಮಿತ ಪ್ರದೇಶಕ್ಕೆ ಮಾತ್ರ ಪರಿಸರ ಸೂಕ್ಷತ್ರ್ಮ ಪ್ರದೇಶ ಎಂದು ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ ಮಾತನಾಡಿ, ಗೆಜೆಟ್ ನಲ್ಲಿಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಜನಪ್ರತಿನಿಧಿಗಳು 1ರಿಂದ 7ನೇ ಅಧಿಸೂಚನೆವರೆಗೂ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಜನರ ನೆರವಿಗೆ ಧಾವಿಸಲಿ ಎಂದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಸಮ್ಮುಖದಲ್ಲಿನಗರದಲ್ಲಿಆ.24ರ ಮಧ್ಯಾಹ್ನ 2ಕ್ಕೆ ಸಭೆ ನಡೆಯಲಿದ್ದು, ರೈತರು, ಮುಖಂಡರು ಭಾಗವಹಿಸಬೇಕು ಎಂದು ಹೇಳಿದರು.
ಜಿಲ್ಲಾಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್ , ಕೆ.ಕೆ.ರಘು ಮಾತನಾಡಿದರು. ಕಾರ್ಯದರ್ಶಿ ಮಹೇಶ್ ಕೆರಮಕ್ಕಿ, ಮೋಹನ್ , ಸುಪ್ರೀತ್ , ರಚನ್ ಮತ್ತಿತರರಿದ್ದರು.