ಎಮ್ಮಿಗನೂರು-* ಕೇಳ್ರಪ್ಪೋ ಕೇಳಿ-ಚರಂಡಿ ಸ್ವಚ್ಛ ಮಾಡಲು ಆಗ್ರಹ

Contributed bygmbasayya459@gmail.com|Vijaya Karnataka
solid waste issue in drainage near temple in emmiganur village devotees demand action
ಚರಂಡಿ ಸ್ವಚ್ಛ ಮಾಡಲು ಆಗ್ರಹ

ಎಮ್ಮಿಗನೂರು ಗ್ರಾಮದ ಕಂಪ್ಲಿರಸ್ತೆಯ ಐತಿಹಾಸಿಕ ಜಡೆಸಿದ್ದೇಶ್ವರ ಶಿವಯೋಗಿಗಳ ಮಠದ ಬಳಿಯ ಚರಂಡಿಯಲ್ಲಿಘನತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದೆ. ಶ್ರಾವಣ ಮಾಸ ಪ್ರಾರಂಭವಾಗಿದ್ದು, ದೇವರ ದರ್ಶನಕ್ಕೆ ನಿತ್ಯ ಬರುವ ನೂರಾರು ಭಕ್ತರು ಮೂಗು ಮುಚ್ಚಿಕೊಂಡು ಹೋಗುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ದೇವಸ್ಥಾನಕ್ಕೆ ಸ್ಥಳೀಯ ಸೇರಿ ಜಿಲ್ಲೆ, ರಾಜ್ಯದ ನಾನಾ ಭಾಗದ ಜನರು ಆಗಮಿಸುತ್ತಾರೆ. ಚರಂಡಿ ವಾಸನೆಗೆ ಬೇಸತ್ತ ಜನರು ಗ್ರಾಪಂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹತ್ತಿರದಲ್ಲೇ ಗ್ರಾಮ ಪಂಚಾಯಿತಿ ಕಚೇರಿ ಇದೆ. ಅಧಿಕಾರಿಗಳು ಇದೇ ರಸ್ತೆಯಿಂದಲೇ ಓಡಾಡುತ್ತಿದ್ದರೂ ಕಣ್ಣಿಗೆ ಕಾಣದಂತಾಗಿದೆ. ಕೂಡಲೇ ಗ್ರಾಪಂ ಅಧಿಕಾರಿಗಳು ಗಮನ ಹರಿಸಿ ಚರಂಡಿ ಸ್ವಚ್ಛಗೊಳಿಸಬೇಕು. ದೇವರ ದರ್ಶನಕ್ಕೆ ಬರುವ ಭಕ್ತರು ನೆಮ್ಮದಿಯಿಂದ ಸಂಚರಿಸಲು ಅನುಕೂಲ ಮಾಡಬೇಕು.
-ಸಾವಿತ್ರಿ, ಮಲ್ಲಮ್ಮ, ಜಯಮ್ಮ, ಜಗದೀಶ, ಮಲ್ಲಿಕಾರ್ಜುನ, ಜಡೇಶ, ರಂಗಪ್ಪ, ಎಮ್ಮಿಗನೂರು ಗ್ರಾಮಸ್ಥರು

* ಕೋಟ್

ಜಡೆಸಿದ್ದೇಶ್ವರ ಶಿವಯೋಗಿಗಳ ಮಠದ ಮುಂಭಾಗದ ಚರಂಡಿ ತುಂಬಿರುವುದು ಆಡಳಿತ ಮಂಡಳಿಗೆ ಗಮನಕ್ಕೆ ಬಂದಿದೆ. ಶೀಘ್ರ ಸ್ವಚ್ಛತೆ ಕಾರ್ಯ ಮಾಡಲು ಸಿಬ್ಬಂದಿಗೆ ಸೂಚಿಸಲಾಗುವುದು.

-ಅಲರವಿ ಶೇಷಗಿರಿ, ಪಿಡಿಒ, ಎಮ್ಮಿಗನೂರು ಗ್ರಾಪಂ

* 20ವೈಎಂಜಿ3

ಎಮ್ಮಿಗನೂರು ಗ್ರಾಮದ ಐತಿಹಾಸಿಕ ಜಡೆಸಿದ್ದೇಶ್ವರ ಶಿವಯೋಗಿಗಳ ಮಠದ ಬಳಿಯ ಚರಂಡಿಯಲ್ಲಿಘನತ್ಯಾಜ್ಯ ತುಂಬಿರುವುದು.