ಸೆ.6ರಂದು ಗಾಯನ ಸ್ಪರ್ಧೆ

Contributed bysanthoshaanampalli7@gmail.com|Vijaya Karnataka
state level singing competition on sep 6
ಸೆ.6ರಂದು ಗಾಯನ ಸ್ಪರ್ಧೆ

ರಾಯಚೂರು: ‘‘ಆಕಾಶ್ ಕರೋಕೆ ಸಿಂಗಿಂಗ್ ಸ್ಟುಡಿಯೋದಿಂದ ಸೆ.6ರಂದು ನಗರದ ಪಂ. ಸಿಧಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿರಾಜ್ಯಮಟ್ಟದ ಗಾಯನ ಸ್ಪರ್ಧೆ ಸೀಜನ್ -2 ಆಯೋಜಿಸಲಾಗಿದೆ,’’ ಎಂದು ಕಾರ್ಯಕ್ರಮದ ಆಯೋಜಕ ಮಾರುತಿ ಬಡಿಗೇರ ತಿಳಿಸಿದರು.
ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಪ್ರಮುಖ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದು, ಚಲನಚಿತ್ರ ನಟಿ ಹಾಗೂ ಸಮಾಜ ಸೇವಕಿ ಡಾ.ಪೂಜಾ ರಮೇಶ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ 20ಕ್ಕೂ ಅಧಿಕ ಗಾಯಕರು ಹಾಗೂ ಗಾಯಕಿಯರು ಆಡಿಷನ್ ನಲ್ಲಿಭಾಗವಹಿಸಿದ್ದು, ಅವರಲ್ಲಿ13 ಮಂದಿ ಗ್ರ್ಯಾಂಡ್ ಸೆಮಿಫೈನಲ್ ಗೆ ಆಯ್ಕೆಯಾಗಿದ್ದಾರೆ. ಸೆ.6ರಂದು ನಡೆಯುವ ಅಂತಿಮ ಸುತ್ತಿನಲ್ಲಿಉತ್ತಮ ಪ್ರದರ್ಶನ ನೀಡುವ ಮೂವರು ಸ್ಪರ್ಧಿಗಳನ್ನು ವಿಜೇತರಾಗಿ ಆಯ್ಕೆ ಮಾಡಲಾಗುವುದು. ಸ್ಪರ್ಧಾರ್ಥಿಗಳಿಗೆ 500 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿಜೇತರಿಗೆ ಪ್ರಥಮ 11 ಸಾವಿಧಿರ ರೂ., ದ್ವಿತೀಯ 5 ಸಾವಿಧಿರ ರೂ. ಹಾಗೂ ತೃತೀಯ 3 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ನಗರ ಶಾಸಕ ಡಾ.ಶಿವರಾಜ್ ಎಸ್ .ಪಾಟೀಲ್ ಅಧ್ಯಕ್ಷತೆ ವಹಿಸುವಧಿರು. ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಅಸ್ಲಾಂ ಪಾಷಾ, ಡಿ.ಶ್ರೀನಿವಾಸ, ಜಗದೀಶ್ , ರೇಖಾ ಕೇಶವರೆಡ್ಡಿ, ಫಾತಿಮಾ ಹುಸೇನ್ , ನರಸಪ್ಪ ಆಶಾಪುರ, ಬೆಂಗಳೂರಿನ ಆರ್ .ಎಂ.ಸ್ಟಾಲಿನ್ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಿಸಲು ಉಚಿತ ಪ್ರವೇಶ ಕಲ್ಪಿಸಲಾಗಿದೆ,’’ ಎಂದು ತಿಳಿಸಿದರು.

ಸುನಿಲ್ ಕುಮಾರ್ , ಚಿರಂಜೀವಿ ಯಾದವ್ , ನರೇಂದ್ರ ಕುಮಾರ್ , ತುಳಸಿ ಯಾದವ್ ಹಾಗೂ ಅಂಜಲಿ ನಾಯಕ್ ಇದ್ದಧಿರು.