ಸರಕಾರಿ ಶಾಲೆಗಳಲ್ಲಿವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲ್ ಮೂಲಕ ದಾಖಲಿಸಲಾಗುತ್ತಿದೆ. ಆದರೆ ಇದರ ತಾಂತ್ರಿಕ ಸಮಸ್ಯೆ ಬೋಧನಾ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಶಿಕ್ಷಕರ ವಲಯದಲ್ಲಿಅಸಮಾಧಾನ ವ್ಯಕ್ತವಾಗಿದೆ.
ಶಾಲೆಯಿಂದ ಹೊರಗುಳಿಯುವ ಮಕ್ಕಳು ಕಡ್ಡಾಯವಾಗಿ ಹಾಜರಾಗಲು, ಶಾಲೆಗೆ ಬಾರದಿದ್ದರೂ ಹಾಜರಾತಿ ಬೀಳಬಾರದು ಎಂಬ ಕಾರಣದಿಂದ ನಿರಂತರ ಆ್ಯಪ್ ಬಳಕೆಗೆ ತಂದಿದೆ. ಈ ಆ್ಯಪ್ ನಲ್ಲಿವಿದ್ಯಾರ್ಥಿಗಳ ಡಿಜಿಟಲ್ ಹಾಜರಾತಿ ದಾಖಲು ಮಾಡಬೇಕಿದೆ. ಕಳೆದ ತಿಂಗಳ ಹಿಂದೆಯೇ ಶಾಲಾ ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಈ ನಿಯಮ ಜಾರಿಗೆ ತಂದಿದೆ. ಈಗ ಅನುದಾನಿತ ಶಾಲೆಗಳಲ್ಲೂಇದನ್ನು ಆರಂಭಿಸಲು ಸೂಚಿಸಲಾಗಿದೆ. ಆದರೆ ಈ ಹಾಜರಾತಿಗೆ ಬಳಸುವ ನಿರಂತರ ಆ್ಯಪ್ ನ ತಾಂತ್ರಿಕ ದೋಷ ಪಾಠದ ಸಮಯ ನುಂಗುತ್ತಿದೆ. ರಾಜ್ಯದ ಹಲವು ಶಾಲೆಗಳಲ್ಲಿಇಂತಹ ಸಮಸ್ಯೆ ಕಾಡುತ್ತಿದೆ.
ಎರಡು ಬಾರಿ ಹಾಜರಾತಿ...
ನಿರಂತರ ಆ್ಯಪ್ ಮೂಲಕ ಮಕ್ಕಳ ಹಾಜರಾತಿಯನ್ನು ಬೆಳಗ್ಗೆ ಮತ್ತು ಮಧ್ಯಾಹ್ನ ಹೀಗೆ ನಿತ್ಯ ಎರಡು ಬಾರಿ ಹಾಕಬೇಕಿದೆ. ಅದಕ್ಕೆ ಸಮಯ ನಿಗದಿಪಡಿಸಲಾಗಿದೆ. ಆದರೆ ಈ ಆ್ಯಪ್ ನಲ್ಲಿತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಕಡಿಮೆ ಮಕ್ಕಳಿರುವ ಶಾಲೆಯಲ್ಲಿಹಾಗೂ ಹೀಗೂ ನಡೆಯುತ್ತದೆ. ಆದರೆ ಮಕ್ಕಳ ಸಂಖ್ಯೆ ಜಾಸ್ತಿ ಇರುವಲ್ಲಿಶಿಕ್ಷಕರನ್ನು ಹೈರಾಣಾಗಿಸುತ್ತಿದೆ. ತರಗತಿಯಲ್ಲಿಪಾಠ ಮಾಡುವ ಸಮಯದಲ್ಲಿಡಿಜಿಟಲ್ ಹಾಜರಾತಿಗೆ ಕಾಲಹರಣ ಮಾಡಬೇಕಾದ ಸಂದರ್ಭ ಬಂದಿದೆ. ಇದು ಗುಣಾತ್ಮಕ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ನಿತ್ಯ ಒಮ್ಮೆ ಮಾತ್ರ ಹಾಜರಾತಿ ಮಾಡುವಂತೆ ಮಾಡಬೇಕು, ತಾಂತ್ರಿಕ ಸಮಸ್ಯೆ ಪರಿಹರಿಸಬೇಕು, ಹಾಜರಾತಿಗೆ ನಿಗದಿತ ಸಮಯ ನಿರ್ದಿಷ್ಟಪಡಿಸಬಾರದು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಬಾಕ್ಸ್
ತಾಂತ್ರಿಕ ದೋಷ
ವಿದ್ಯಾರ್ಥಿಗಳ ಹಾಜರಾತಿ ಸಂದರ್ಭದಲ್ಲಿನಿರಂತರ ಆಪ್ ನಲ್ಲಿಟೆಕ್ನಿಕಲ್ ಎರರ್ , ಸರ್ವರ್ ಸಮಸ್ಯೆ, ಇಂಟರ್ ನೆಟ್ ಸಮಸ್ಯೆ ಎದುರಾಗುತ್ತಿದೆ. ಮೊಬೈಲ್ ನಲ್ಲಿಮಕ್ಕಳ ಮುಖಚರ್ಯೆ ಒಮ್ಮೆಲೆ ದಾಖಲಾಗುತ್ತಿಲ್ಲ. ಕೆಲವೊಮ್ಮೆ ಮುಖ ಹೊಂದಿಕೆಯೂ ಆಗುತ್ತಿಲ್ಲ, ಹೀಗೆ ಹಾಜರಾತಿ ದಾಖಲಾಗದ ಮಕ್ಕಳನ್ನು ಗುರುತಿಸಿ ಮತ್ತೆ ಅವರ ಪೋಟೋ ತೆಗೆದು ದಾಖಲು ಮಾಡಬೇಕಿದೆ. ಅಲ್ಲದೇ ಕೊಠಡಿಯಲ್ಲಿಬೆಳಕು ಜಾಸ್ತಿ ಅಥವಾ ಕಡಿಮೆ ಇದ್ದರೂ ಫೋಟೊಗಳು ನಮೂದಾಗುತ್ತಿಲ್ಲ. ಹೀಗೆ ಅಪ್ ಲೋಡ್ ಆಗದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದರೂ ಗೈರು ಹಾಜರು ಎಂದು ನಮೂದಾಗುತ್ತದೆ. ಇದು ಬಿಸಿಯೂಟ ನೀಡುವಲ್ಲಿಯೂ ಪರಿಣಾಮ ಬೀರುತ್ತದೆ ಎನ್ನುತ್ತವೆ ಮೂಲಗಳು.
ಕೋಟ್
ಶಿಕ್ಷಕರಿಗೆ ನಿರಂತರ ಆ್ಯಪ್ ಹಾಜರಾತಿ ತರಬೇತಿ ನೀಡಿದ್ದೇವೆ. ಶೇ.85ರಷ್ಟು ಸಾಧನೆಯಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ತಾಲೂಕು, ಜಿಲ್ಲಾನೋಡಲ್ ಅಧಿಕಾರಿಗಳಿಗೆ ತಿಳಿಸಬಹುದು. ಇನ್ನು ಆ್ಯಪ್ ನಲ್ಲಿಎದುರಾಗುವ ತಾಂತ್ರಿಕ ಸಮಸ್ಯೆ ಪರಿಹಾರಕ್ಕೂ ಪ್ರಯತ್ನಿಸುತ್ತಿದ್ದೇವೆ.
-ಡಾ.ಈಶ್ವರ ಉಳ್ಳಾಗಡ್ಡಿ, ಅಪರ ಆಯುಕ್ತ, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ವಿಭಾಗ