ಇಂದು ಸಂಭ್ರಮದ ವರ ಮಹಾಲಕ್ಷಿತ್ರ್ಮಹಬ್ಬ

Contributed bysureshdevaramani@gmail.com|Vijaya Karnataka
var mahalaxmi festival a milestone for shopping joy and price hikes
ಮುಖಪುಟದ ಲೇಯರ್ ಗೆ

ಇಂದು ಸಂಭ್ರಮದ ವರ ಮಹಾಲಕ್ಷಿತ್ರ್ಮಹಬ್ಬ
ವಿಕ ಸುದ್ದಿಲೋಕ ಕೊಟ್ಟೂರು

ಪಟ್ಟಣದಲ್ಲಿವರ ಮಹಾಲಕ್ಷಿತ್ರ್ಮ ಹಬ್ಬದ ಸಿದ್ಧತೆಗಾಗಿ ಪೂಜೆ ಸಾಮಗ್ರಿ, ಹೂವು, ಹಣ್ಣು ಖರೀದಿ ಗುರುವಾರ ಜೋರಾಗಿ ನಡೆಯಿತು. ಆದರೆ, ಬೆಲೆ ಏರಿಕೆ ಬಿಸಿ ಜನರ ಮೇಲೆ ಪರಿಣಾಮ ಬೀರಿತ್ತು.

ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರ ಮಹಾಲಕ್ಷ್ಮಿಹಬ್ಬಕ್ಕಾಗಿ ಹೊಸ ಬಟ್ಟೆ, ಬಾಳೆ ದಿಂಡು, ವೈವಿಧ್ಯಮಯ ಹಣ್ಣು, ತರೇಹೆವಾರಿ ಹೂವುಗಳನ್ನು ಮಹಿಳೆಯರು ಖರೀದಿಸಿದರು. ಪಟ್ಟಣದಲ್ಲಿವಾರದ ಸಂತೆ ಗುರುವಾರ ನಡೆಯುತ್ತಿದ್ದರಿಂದ ಸಂತೆಗೆ ಬಂದ ಜನರಿಂದ ಮತ್ತು ಹಬ್ಬದ ಖರೀದಿಗೆ ಬಂದ ಜನರಿಂದ ಮಾರುಕಟ್ಟೆಯಲ್ಲಿ ಜನ ಜಂಗುಳಿ ಇತ್ತು.

ಹೂವಿನ ದರ ಏರಿಕೆ:

ಕಳೆದ ವರ್ಷಕ್ಕಿಂತ ಈ ಬಾರಿ ಹಣ್ಣುಗಳ ಬೆಲೆ ಶೇ 40ರಷ್ಟು ಏರಿಕೆಯಾಗಿದ್ದವು. ಸೇಬು ಕೇಜಿಗೆ 250 ರೂ. ಇದ್ದರೆ, ಪೇರಲ, ಮೂಸಂಬಿ, ದಾಳಿಂಬೆ ಹಣ್ಣುಗಳ ಬೆಲೆು 150-200ರೂ.ವರೆಗೆ ಇತ್ತು. ಹಣ್ಣುಗಳಿಗೆ ಪೈಪೋಟಿ ನೀಡುವಂತೆ ಹೂವುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಸಹಜವಾಗಿ ಬೆಲೆಯೂ ಹೆಚ್ಚಾಗಿತ್ತು. ಕಾಕಡ, ಮಲ್ಲಿಗೆ ಕೆಜಿಗೆ 650 ರೂ, ಕನಕಾಂಬರ ಕೆಜಿಗೆ 800 ರೂ. ಸೇವಂತಿಗೆ ಕೆಜಿಗೆ 250-300ರೂ, ಬಟನ್ ರೋಜಾ ಕೆಜಿಗೆ 320 ರಿಂದ 400ರೂ, ಸುಂಗಧರಾಜ ಕೆಜಿಗೆ 500ರೂ. ಆಗಿದ್ದವು.

ಮಹಿಳೆಯರ ಪ್ರಮುಖ ಹಬ್ಬವಾದ ವರ ಮಹಾಲಕ್ಷಿತ್ರ್ಮ ಹಬ್ಬದಲ್ಲಿಎಲ್ಲವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ದರವೂ ಸಹಜವಾಗಿ ಏರಿಕೆಯಾಗಿತ್ತು. ಆದರೂ ಪೂಜೆಗಾಗಿ ದುಬಾರಿ ಬೆಲೆಯಲ್ಲೂಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಮಹಿಳೆಯರು ಎಲ್ಲವನ್ನೂ ಖರೀದಿ ಮಾಡಿದರು.

ಕೋಟ್

ಹಬ್ಬದ ನಿಮಿತ್ತ ಎಲ್ಲಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆಯಲ್ಲಿಏರಿಕೆಯಾಗಿತ್ತು. ಆದರೂ ಜನರು ಎಂದಿನಂತೆ ಹೂವುಗಳನ್ನು ಖರೀದಿಸಿದರು.

-ಸಿ.ಷಡಾಕ್ಷರಿ, ಮಲ್ಲಿಕಾರ್ಜುನ, ಹೂ ವ್ಯಾಪಾರಿಗಳು, ಕೊಟ್ಟೂರು

ಕೋಟ್

ಸೇಬು ಸೇರಿ ಇತರೆ ಎಲ್ಲಹಣ್ಣುಗಳ ಬೆಲೆಯೂ ಮಾಮೂಲಿ ದಿನಕ್ಕಿಂತ ಹೆಚ್ಚಿದೆ. ಆದರೂ ಖರೀದಿ ಭರಾಟೆ ಜೋರಾಗಿದೆ.

- ಸೈಫುಲ್ಲಾ, ಶಮನ್ , ಹಣ್ಣಿನ ವ್ಯಾಪಾರಿಗಳು, ಕೊಟ್ಟೂರು.

ವಿಎನ್ ಆರ್ 20ಕೆಟಿಅರ್ 3: ಕೊಟ್ಟೂರಿನಲ್ಲಿವರ ಮಹಾಲಕ್ಷಿತ್ರ್ಮ ಹಬ್ಬಕ್ಕಾಗಿ ಹಣ್ಣುಗಳ ಮಾರಾಟಕ್ಕೆ ಅಂಗಡಿ ಅಲಂಕರಿಸಿರುವುದು.