ರಾಯಚೂರು- ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯ

Contributed bysanthoshaanampalli7@gmail.com|Vijaya Karnataka
protection of childrens rights everyones duty
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶರಣಮ್ಮ ಕಾರನೂರು ಹೇಳಿಕೆ

ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯ
ವಿಕ ಸುದ್ದಿಧಿಲೋಕ ರಾಯಚೂರು

‘‘ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮಕ್ಕಳಿಲ್ಲದ ದಂಪತಿ ಕಾನೂನಾತ್ಮಕವಾಗಿ ದತ್ತು ಪಡೆಯುವುದು ಮತ್ತು ಬಾಲ್ಯ ವಿವಾಹ ನಿಷೇಧ ಮಾಡುವಲ್ಲಿಅಧಿಕಾರಿಗಳ ಸಮನ್ವಯತೆ ಅತೀ ಮುಖ್ಯವಾಗಿದೆ,’’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶರಣಮ್ಮ ಕಾರನೂರು ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಮಾರ್ಗದರ್ಶಿ ಸೊಸೈಟಿ ಜಸ್ಟ್ ಟೈಟ್ಸ್ ಫಾರ್ ಚಿಲ್ಡ್ರನ್ ಹಾಗೂ ಡಾನ್ ಬೋಸ್ಕೋ ಸಂಸ್ಥೆ ಆಶ್ರಯದಲ್ಲಿಆಯೋಧಿಜಿಧಿಸಿದ್ದ ಪೋಷಕತ್ವ ಯೋಜನೆ , ಕಾನೂನಾತ್ಮಕ ದತ್ತು , ಬಾಲ್ಯ ವಿವಾಹ ನಿಷೇಧ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಕಾನೂನುಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು, ಪೊಲೀಸ್ ಇಲಾಖೆ ಅಧಿಕಾರಿ/ಸಿಬ್ಬಂದಿ, ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿ ಹಾಗೂ ಜಿಲ್ಲಾಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಘಟಕದ ಸಿಬ್ಬಂದಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತಧಿನಾಧಿಡಿದರು.

‘‘ಪೋಷಕತ್ವ ಯೋಜನೆ ಅನುಷ್ಠಾನದಲ್ಲಿಡಾನ್ ಬೋಸ್ಕೋ ಸಂಸ್ಥೆ, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಸಹಕಾರದೊಂದಿಗೆ ಜಿಲ್ಲೆಯಲ್ಲಿಕಾರ್ಯ ನಿರ್ವಹಿಸುತ್ತಿದೆ. ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನಾತ್ಮಕವಾಗಿ ದತ್ತು ಪಡೆಯುವುದು ಮತ್ತು ಬಾಲ್ಯ ವಿವಾಹ ನಿಷೇಧ ಮಾಡುವಲ್ಲಿಅಧಿಕಾರಿಗಳ ಸಮನ್ವಯತೆ ಅತೀ ಮುಖ್ಯವಾಗಿದೆ. ಅದರಂತೆ ಪ್ರತಿಯೊಂದು ಮಗುವು ತನ್ನ ಹಕ್ಕುಗಳನ್ನು ಅನುಭವಿಸುವ ನಿಟ್ಟಿನಲ್ಲಿಕಾರ್ಯನಿರ್ವಹಿಸುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿಯಾಗಿದೆ,’’ ಎಂದು ತಿಳಿಧಿಸಿಧಿದಧಿರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮನ್ಸೂರ್ ಅಹ್ಮದ್ , ಜಿಲ್ಲಾಮಕ್ಕಳ ರಕ್ಷಣಾ ಘಟಕದ ಯೋಜನೆಗಳು ಮತ್ತು ಬಾಲಮಂದಿರಗಳ ಸೌಲಭ್ಯಗಳ ಕುರಿತು ತಿಳಿಸಿ, ದತ್ತು ನಿಯಮಗಳ ಪ್ರಕಾರ ಮಕ್ಕಳನ್ನು ಕಾನೂನಾತ್ಮಕ ದತ್ತು ಪಡೆಯುವುದು ಮತ್ತು ಪೋಷಕತ್ವದಿಂದ ಮಕ್ಕಳನ್ನು ದತ್ತು ಪಡೆಯುವುದು ಮತ್ತು ಮಕ್ಕಳ ರಕ್ಷಣೆಗಾಗಿ ಇರುವ ಕಾನೂನುಗಳ ಕುರಿತು ತಿಳಿಸಿದರು.

ಕಲಬುರಗಿ ಮಾರ್ಗದರ್ಶಿ ಸೊಸೈಟಿ ನಿರ್ದೇಶಕ ಆನಂದ್ ರಾಜ್ ಮಾತಧಿನಾಧಿಡಿಧಿದಧಿರು. ಇನ್ ಸ್ಪೆಕ್ಟರ್ ಯಲ್ಲಪ್ಪ, ಜಿಲ್ಲಾಮಕ್ಕಳ ರಕ್ಷಣಾಧಿಕಾರಿ ಕುಮಾರ, ಸಂಪಧಿನ್ಮೂಲ ವ್ಯಕ್ತಿ ಶಿವಮಲ್ಲು, ಕಿರಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಂ.ಡಿ. ಗೋಕುಲ್ , ರಾಯಚೂರು ಶಿಶು ಅಬಿವೃದ್ಧಿ ಯೋಜನಾಧಿಕಾರಿ ಮಂಜುನಾಥ, ವೆಂಕಟೇಶ ಇದ್ದರು.

---

ಸಂತೋಷ 21ಎ.ಎಧಿಸ್ 05

ರಾಯಚೂರಿನಲ್ಲಿಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ ಕಾರನೂರು ಮಾತಧಿನಾಧಿಡಿದರು.