ಜ್ಞಾನವೃಕ್ಷ
Contributed by: Shridevi Ambekallu|Vijaya Karnataka•
1. ಚಿತ್ರದಲ್ಲಿರುವುದು ಬ್ರಹ್ಮ ಮಂದಿರ . ಇದು ಎಲ್ಲಿದೆ?
2. ಹಠ ಯೋಗದ ಪ್ರವರ್ತಕರಾದ ಮತ್ಸ್ಯೇಂದ್ರನಾಥರ ಶಿಷ್ಯ ಯಾರು?3. ಷಡ್ದರ್ಶನಗಳಲ್ಲಿಒಂದಾದ ಮೀಮಾಂಸ ದರ್ಶನವು ಯಾರಿಂದ ರಚಿತವಾಯಿತು?
4. ದ್ವೈತ ವೇದಾಂತದ ಸ್ಥಾಪಕರು ಯಾರು?
5. ಬಾದರಾಯಣ ಎಂದು ಯಾರನ್ನು ಕರೆಯುತ್ತಾರೆ?
6. ಕಾಲನೇಮಿ ಎಂದರೆ ಯಾರು?
7. ದ್ವಾಪರಯುಗದಲ್ಲಿಯೂ ಕಾಲನೇಮಿ ಮರುಜನ್ಮ ಪಡೆಯುತ್ತಾನೆ? ಅದು ಯಾರು?
8. ಹನುಮಂತ ಸಂಜೀವಿನಿ ಮೂಲಿಕೆ ತರಲು ಹೋಗಿದ್ದು ಯಾವ ಪರ್ವತಕ್ಕೆ?
ಧಿಧಿಧಿ----
ಉತ್ತರಗಳು: 1.ಪುಷ್ಕರ್ (ರಾಜಸ್ಥಾನ) 2.ಗೋರಖನಾಥ 3.ಜೈಮಿನಿ ಮಹರ್ಷಿ 4. ಮಧ್ವಾಚಾರ್ಯರು 5. ವೇದವ್ಯಾಸರನ್ನು 6.ಮಾರೀಚನ ಮಗ 7. ಕಂಸ 8.ಹಿಮಾಲಯದ ದ್ರೋಣಪರ್ವತ