ನಾರಾಯಣ ಗುರುಗಳು

Contributed byShridevi Ambekallu|Vijaya Karnataka
narayana guru a great leader reflecting the excellence of indian social revolution
ದೇವಳ ಸ್ಥಾಪಿಸಿ ದೇಶದಲ್ಲಿಕ್ರಾಂತಿ ಮೊಳಗಿಸಿದ ಬ್ರಹ್ಮಶ್ರೀ

-----
ಇಂಟ್ರೋ:

ಆಗಸ್ಟ್ 28 ಶ್ರೀ ನಾರಾಯಣ ಗುರುಗಳ ಜಯಂತಿ. ಅವರ ತತ್ತ್ವಚಿಂತನೆಯ ಸಾರ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಮಾನವೀಯ ಸಂದೇಶ.

------------------

* ವಿಜಯ್ ಕೋಟ್ಯಾನ್ , ಮಂಗಳೂರು

vಜ್ಜಿaya.pಟಟ್ಜa್ಟyಃಠಿಜಿಞಛಿsಟ್ಛಜ್ಞಿdಜಿa.್ಚಟಞ

---------

ದಾರ್ಶನಿಕ, ಮಾನವತಾವಾದಿ, ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು ಕೇರಳದ ಅರುವಿಪುರಂನಲ್ಲಿಶಿವಲಿಂಗವನ್ನು ಪ್ರತಿಷ್ಠಾಪಿಸುವ ಮೂಲಕ ಶತಮಾನಗಳ ಕಾಲ ಜಾತಿ-ತಾರತಮ್ಯದಿಂದ ವಂಚಿತರಾಗಿದ್ದ ಜನರಲ್ಲಿಹೊಸ ಆತ್ಮವಿಶ್ವಾಸ ಮೂಡಿಸಿದ ಕ್ರಾಂತಿಪುರುಷರು. ಅವರ ಬದುಕು ಕೇವಲ ಆಧ್ಯಾತ್ಮಿಕ ಸಾಧನೆಯ ಕಥೆಯಲ್ಲ; ಅದು ಸಮಾನತೆ, ಶಿಕ್ಷಣ, ಸ್ವಾಭಿಮಾನ ಮತ್ತು ಮಾನವೀಯತೆಯ ಸಂದೇಶ ಸಾರಿದ ಸಾಮಾಜಿಕ ಪರಿವರ್ತನೆಯ ಮಹಾಗಾಥೆ.

ಭಾರತದ ಇತಿಹಾಸವೇ ಧರ್ಮ, ಸಮಾಜ ಮತ್ತು ಸಂಸ್ಕೃತಿಯಲ್ಲಿಬದಲಾವಣೆ ಅಗತ್ಯವಾದಾಗ ಯುಗಪುರುಷರು ಹುಟ್ಟಿ ಸಾಮಾಜಿಕ ಕ್ರಾಂತಿಗೆ ದಾರಿ ತೋರಿಸಿದ ನಿದರ್ಶನಗಳಿಂದ ತುಂಬಿದೆ. ಅಂತಹ ಮಹನೀಯರ ಸಾಲಿನಲ್ಲಿನಾರಾಯಣ ಗುರುಗಳ ಸ್ಥಾನ ವಿಶಿಷ್ಟ. ಬಾಲ್ಯದಿಂದಲೇ ಮೇಲು-ಕೀಳು ಎಂಬ ತಾರತಮ್ಯವನ್ನು ಒಪ್ಪದ ಅವರು, ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯ ಅನ್ಯಾಯದ ವಿರುದ್ಧ ತಮ್ಮದೇ ಆದ ಶಾಂತಿಯುತ ಮಾರ್ಗದಲ್ಲಿಹೋರಾಡಿದರು.

ಸಂಘರ್ಷರಹಿತ ಕ್ರಾಂತಿಯ ಹರಿಕಾರ

ಹತ್ತೊಂಬತ್ತನೇ ಶತಮಾನದಲ್ಲಿಅಸ್ಪೃಶ್ಯತೆ, ಅಂಧಶ್ರದ್ಧೆ, ಜಾತೀಯತೆ ಮತ್ತು ಸಾಮಾಜಿಕ ಅಸಮಾನತೆಗಳು ತೀವ್ರವಾಗಿದ್ದವು. ಅದರಲ್ಲೂಕೇರಳದ ಸಾಮಾಜಿಕ ಪರಿಸ್ಥಿತಿ ಅತ್ಯಂತ ಸಂಕೀರ್ಣವಾಗಿತ್ತು. ಕೆಳವರ್ಗದ ಜನರಿಗೆ ಶಿಕ್ಷಣ, ದೇವಸ್ಥಾನ ಪ್ರವೇಶ ಸೇರಿದಂತೆ ಮೂಲಭೂತ ಹಕ್ಕುಗಳೇ ನಿರಾಕರಿಸಲ್ಪಡುತ್ತಿದ್ದವು. ಇಂತಹ ಸಂದರ್ಭದಲ್ಲಿನಾರಾಯಣ ಗುರುಗಳು ಬಡವರು, ಮತ್ತು ಶೋಷಿತ ಸಮುದಾಯಗಳ ಧ್ವನಿಯಾಗಿ ಹೊರಹೊಮ್ಮಿದರು. ಅವರ ಕ್ರಾಂತಿಯ ಮಾರ್ಗ ಹಿಂಸೆ ಅಥವಾ ಸಂಘರ್ಷದ್ದಾಗಿರಲಿಲ್ಲ. ಅಧ್ಯಾತ್ಮದ ನೆಲೆಗಟ್ಟಿನಲ್ಲಿಯೇ ಸಾಮಾಜಿಕ ಪರಿವರ್ತನೆ ಸಾಧ್ಯವೆಂದು ತೋರಿಸಿಕೊಟ್ಟರು. ಮನುಷ್ಯನೊಳಗಿನ ಅಜ್ಞಾನವನ್ನು ದೂರ ಮಾಡಿ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದೇ ನಿಜವಾದ ಸಾಮಾಜಿಕ ಮುಕ್ತಿ ಎಂಬುದನ್ನು ಪ್ರತಿಪಾದಿಸಿದರು.

‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’

ನಾರಾಯಣ ಗುರುಗಳ ತತ್ತ್ವಚಿಂತನೆಯ ಸಾರ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಮಾನವೀಯ ಸಂದೇಶ. ಜಾತಿ, ಮತ, ಪಂಥಗಳ ಹೆಸರಿನಲ್ಲಿಮನುಷ್ಯರನ್ನು ವಿಭಜಿಸುವುದಕ್ಕಿಂತ ಮನುಷ್ಯತ್ವವೇ ಶ್ರೇಷ್ಠ ಎಂಬುದನ್ನು ಅವರು ಸಾರಿದರು. ದೇವಸ್ಥಾನಗಳು ಎಲ್ಲರಿಗೂ ಮುಕ್ತವಾಗಬೇಕು ಎಂಬ ಚಿಂತನೆಗೆ ಬಲ ತುಂಬಿದರು. ಮುಂದೆ ಶಿಕ್ಷಣ ಮತ್ತು ಸಾಮಾಜಿಕ ಸಂಘಟನೆಗಳ ಮೂಲಕವೂ ಈ ಚಳವಳಿಗೆ ಮತ್ತಷ್ಟು ಶಕ್ತಿ ನೀಡಿದರು.

ಮಂಗಳೂರಿನ ಕುದ್ರೋಳಿಯಲ್ಲಿಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಸ್ಥಾಪನೆಯಲ್ಲಿಯೂ ಅವರ ಪ್ರೇರಣೆ ಮಹತ್ವದ್ದಾಗಿದೆ. 1908ರಲ್ಲಿದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಆ ದೇಗುಲವು ಇಂದು ಸಾಮಾಜಿಕ ಸಮಾನತೆ ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿ ಗುರುತಿಸಿಕೊಂಡಿದೆ.

ವಿದ್ಯೆಯಿಂದ ಮಾತ್ರ ಉದ್ಧಾರ; ಜ್ಞಾನಕ್ಕೆ ಜಾತಿಯಿಲ್ಲ’ ಎಂಬ ಅವರ ಚಿಂತನೆ ಸಮಾಜದ ಹಿಂದುಳಿದ ವರ್ಗಗಳಲ್ಲಿಶಿಕ್ಷಣದ ಮಹತ್ವವನ್ನು ಬಿತ್ತಿತು. ಶಾಲೆಗಳು ಜ್ಞಾನಮಂದಿರಗಳಾಗಬೇಕು, ಶಿಕ್ಷಣ ಎಲ್ಲರಿಗೂ ದೊರೆಯಬೇಕು ಎಂಬುದು ಅವರ ದೃಢ ನಿಲುವಾಗಿತ್ತು. ಇದೇ ಕಾರಣಕ್ಕೆ ನಾರಾಯಣ ಗುರುಗಳ ಸಾಮಾಜಿಕ ಚಳವಳಿ ಕೇವಲ ಧಾರ್ಮಿಕ ಸುಧಾರಣೆಯಾಗಿ ಉಳಿಯದೆ, ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣದ ಚಳವಳಿಯಾಗಿ ರೂಪುಗೊಂಡಿತು.

ಮಹಿಳಾ ಸಮಾನತೆಗೆ ಒತ್ತು

ಸಮಾಜ ಸುಧಾರಣೆಯ ವಿಚಾರದಲ್ಲಿನಾರಾಯಣ ಗುರುಗಳ ದೃಷ್ಟಿಕೋನ ಬಹಳ ವಿಶಾಲವಾಗಿತ್ತು. ಬಾಲ್ಯವಿವಾಹ, ಮೂಢನಂಬಿಕೆ, ಅರ್ಥಹೀನ ಸಂಪ್ರದಾಯಗಳು ಮತ್ತು ಅತಿವೈಭವದ ಮದುವೆಗಳಿಗೆ ಅವರು ವಿರೋಧ ವ್ಯಕ್ತಪಡಿಸಿದರು. ಮಹಿಳೆಯರಿಗೂ ಶಿಕ್ಷಣ ಮತ್ತು ಸಾಮಾಜಿಕ ಗೌರವ ದೊರೆಯಬೇಕು ಎಂದು ಪ್ರತಿಪಾದಿಸಿದರು.

ಮಹಿಳೆಯರ ಸ್ವಾಭಿಮಾನ ಮತ್ತು ಸಮಾನತೆಗೆ ಆದ್ಯತೆ ನೀಡುವ ಮೂಲಕ, ತಮ್ಮ ಕಾಲಕ್ಕಿಂತ ಬಹಳ ಮುಂದಿದ್ದ ಸಾಮಾಜಿಕ ಚಿಂತನೆಗೆ ಅವರು ದಾರಿ ತೋರಿಸಿದರು. ನಾರಾಯಣ ಗುರುಗಳು ಸಂಸ್ಕೃತ ಮತ್ತು ಮಲಯಾಳಂ ಭಾಷೆಗಳಲ್ಲಿ79 ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯದಲ್ಲಿಹಸಿವು, ಬಡತನ, ಸ್ವಾಭಿಮಾನ, ಸಮಾನತೆ, ಜ್ಞಾನ ಮತ್ತು ಆತ್ಮಜಾಗೃತಿಯ ವಿಚಾರಗಳು ಆಳವಾಗಿ ಪ್ರತಿಬಿಂಬಿಸುತ್ತವೆ. ಅವರ ಬದುಕು ಪವಾಡಗಳಿಗಿಂತ ಪರಿಶ್ರಮದ ಸಂದೇಶ ನೀಡುತ್ತದೆ. ಪೀಠದ ಮೇಲೆ ಕುಳಿತು ಭಕ್ತರಿಂದ ಪೂಜೆ ಸ್ವೀಕರಿಸುವ ಗುರುವಾಗಿರದೆ, ಸಮಾಜದ ನೋವನ್ನು ಅರಿತು ಅದಕ್ಕೆ ಪರಿಹಾರ ಹುಡುಕಿದ ಕರ್ಮಯೋಗಿಯಾಗಿದ್ದರು.

ನಾರಾಯಣ ಗುರುಗಳ ಚಿಂತನೆಗಳು ಕೇರಳದ ಗಡಿಗಳನ್ನು ದಾಟಿ ದೇಶದ ಅನೇಕ ಚಿಂತಕರ ಗಮನ ಸೆಳೆದವು. ರವೀಂದ್ರನಾಥ ಠಾಗೋರ್ , ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದರು ಸೇರಿದಂತೆ ಅನೇಕ ಮಹನೀಯರು ಅವರ ವ್ಯಕ್ತಿತ್ವ ಮತ್ತು ಸಾಮಾಜಿಕ ಸೇವೆಯನ್ನು ಗೌರವದಿಂದ ಕಂಡಿದ್ದರು.

ಅವರ ವಿಚಾರಧಾರೆ ಜಾತಿ, ಮತ ಮತ್ತು ಧರ್ಮದ ಗಡಿಗಳನ್ನು ಮೀರಿ ಮಾನವೀಯತೆಯನ್ನು ಕೇಂದ್ರದಲ್ಲಿಇರಿಸಿತು. ಆದ್ದರಿಂದಲೇ ನಾರಾಯಣ ಗುರುಗಳ ಚಿಂತನೆ ಇಂದಿಗೂ ಸಾರ್ವಕಾಲಿಕವಾಗಿದೆ.