ವಾರ ಭವಿಷ್ಯ

Contributed byShridevi Ambekallu|Vijaya Karnataka
weekly horoscope discover your zodiac signs updated predictions
ಮೇಷ

ಹಿರಿಯರ ಸಲಹೆ ಪಡೆದು ಕೆಲಸ ಮುಂದುವರಿಸಿ. ಸಮಸ್ಯೆಗಳನ್ನು ಧೈರ್ಯದಿಂದ ನಿಭಾಯಿಸಿ. ಹೊಸ ಮನೆ ಕಟ್ಟುವ ಕನಸು ನನಸಾಗುತ್ತದೆ. ಕೋಪ ಕಡಿಮೆ ಮಾಡಿಕೊಳ್ಳಿ. ಕಾಲಿಗೆ ಪೆಟ್ಟಾಗುವ ಸಾಧ್ಯತೆ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ.
ಅದೃಷ್ಟ ಸಂಖ್ಯೆ 9

ವೃಷಭ ರಾಶಿ

ಆರೋಗ್ಯದ ಕಡೆ ಗಮನ ಕೊಡಿ. ಆಕಸ್ಮಿಕ ಧನ ಲಾಭ. ಆಸ್ತಿ ಮಾಡುವಿರಿ. ಕೌಟುಂಬಿಕ ಜೀವನ ಚೆನ್ನಾಗಿರುವುದು. ಹೊಸ ವಾಹನವನ್ನು ಕೊಳ್ಳುವ ಯೋಗ. ಪ್ರಸಿದ್ಧಿಯನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಶುಭ.

ಅದೃಷ್ಟ ಸಂಖ್ಯೆ 5

ಮಿಥುನ

ಆರ್ಥಿಕ ಸ್ಥಿತಿಗತಿ ಉತ್ತಮ. ಆರೋಗ್ಯವಂತರಾಗಿರುವಿರಿ. ಸರಕಾರದ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತದೆ. ಕೆಲಸದಲ್ಲಿಪ್ರಗತಿ. ಆಕಸ್ಮಿಕ ಧನಾಗಮನ. ಮನೆಯಲ್ಲಿಶುಭಕಾರ್ಯ. ಅವಿವಾಹಿತರಿಗೆ ವಿವಾಹ ಯೋಗ.

ಅದೃಷ್ಟ ಸಂಖ್ಯೆ 3

ಕಟಕ

ಎಲ್ಲಾರೀತಿಯಿಂದ ಅನುಕೂಲ. ನಿಮ್ಮ ವಾಕ್ ಶಕ್ತಿಯಿಂದ ಹಾಗೂ ವಿದ್ಯೆಯಿಂದ ಲಾಭ. ಬಂಧುಗಳಿಂದ ಅನುಕೂಲ. ಒಡವೆ ಕೊಂಡುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಶುಭ. ಮಕ್ಕಳಿಂದ ಶುಭ ಸುದ್ದಿ.

ಅದೃಷ್ಟ ಸಂಖ್ಯೆ 5

ಸಿಂಹ

ಆದಾಯದಲ್ಲಿಏರಿಕೆ. ಭೂಮಿಯಿಂದ ಲಾಭ. ಸಹೋದರರಿಗೆ ಸಹಾಯ. ಪ್ರಯತ್ನಗಳೆಲ್ಲವೂ ಕೈಗೂಡುತ್ತವೆ. ವ್ಯವಸಾಯದಿಂದ ಆದಾಯ. ಅವಿವಾಹಿತರಿಗೆ ವಿವಾಹ ಭಾಗ್ಯ. ವಿವಾಹಿತರಿಗೆ ಸಂತಾನ. ಸಂಗಾತಿಯಿಂದ ಸುಖ. ವಿದ್ಯಾರ್ಥಿಗಳಿಗೆ ಉತ್ತಮ ಫಲ.

ಅದೃಷ್ಟ ಸಂಖ್ಯೆ 9

ಕನ್ಯಾ

ಯಾರ ಹೊಗಳಿಕೆಗೂ ತಲೆಬಾಗದಿರಿ. ಕೌಟುಂಬಿಕ ವಿಷಯದಲ್ಲಿಸ್ವಂತ ನಿರ್ಧಾರ ತೆಗೆದುಕೊಳ್ಳಿ. ಆಧ್ಯಾತ್ಮಿಕ ವಿಷಯಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳಿಗೆ ಪ್ರಗತಿ. ವ್ಯಾಪಾರಿಗಳಿಗೆ ಅಭಿವೃದ್ಧಿ. ಮನೆಯಲ್ಲಿಶುಭಕಾರ್ಯ.

ಅದೃಷ್ಟ ಸಂಖ್ಯೆ 3

ತುಲಾ

ಆರೋಗ್ಯದಲ್ಲಿಅಭಿವೃದ್ಧಿ. ಆರ್ಥಿಕ ಸ್ಥಿತಿಗತಿ ಉತ್ತಮ. ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯೊಂದಿಗೆ ಉತ್ತಮ ಸಂಬಂಧ. ನಿಮ್ಮ ವಿದ್ಯೆಯೇ ನಿಮಗೆ ಆಸ್ತಿ. ವಿದ್ಯಾರ್ಥಿಗಳಿಗೆ ಶುಭ.

ಅದೃಷ್ಟ ಸಂಖ್ಯೆ 5

ವೃಶ್ಚಿಕ

ವ್ಯಾಪಾರದಲ್ಲಿಅಭಿವೃದ್ಧಿ. ಆರೋಗ್ಯ ಉತ್ತಮ. ಹಣಕಾಸಿಗೆ ಕೊರತೆ ಇಲ್ಲ. ಉನ್ನತಾಧಿಕಾರಿಗಳಿಂದ ಲಾಭ. ಉದ್ಯೋಗದಲ್ಲಿಬಡ್ತಿ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿಪ್ರಗತಿ. ಮನೆಯಲ್ಲಿಶುಭಕಾರ್ಯ. ಹಲವು ಮೂಲಗಳಿಂದ ಧನ ಲಾಭವಾಗುವುದು.

ಅದೃಷ್ಟ ಸಂಖ್ಯೆ 6

ಧನುಸ್ಸು

ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಆದಾಯದಲ್ಲಿಇಳಿಕೆ. ಹಿರಿಯರೊಂದಿಗೆ ಜಗಳ. ಅಹಂಕಾರ ತೊರೆದು ಬಾಳಿರಿ. ಅಪಘಾತವಾಗುವ ಸಂಭವ. ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡಿ. ಆರೋಗ್ಯದ ಬಗ್ಗೆ ಗಮನ ಕೊಡಿ.

ಅದೃಷ್ಟ ಸಂಖ್ಯೆ 4

ಮಕರ

ವಿರೋಧಿಗಳು ದೂರ ಸರಿಯುವರು. ಆರೋಗ್ಯ ಚೆನ್ನಾಗಿ ಆಗುತ್ತದೆ. ಹಣಕಾಸಿಗೆ ಕೊರತೆ ಇಲ್ಲ. ಸಂಗಾತಿಯಿಂದ ಸುಖ. ಮನೆಯಲ್ಲಿಶುಭಕಾರ್ಯ. ನೂತನ ವಸ್ತಾ್ರಭರಣಗಳನ್ನು ಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿಅಭ್ಯುದಯ.

ಅದೃಷ್ಟ ಸಂಖ್ಯೆ 8

ಕುಂಭ

ಆರೋಗ್ಯದ ಕಡೆ ಗಮನ ಕೊಡಿ. ಖರ್ಚು ವೆಚ್ಚಗಳ ನಿಯಂತ್ರಣವಿರಲಿ. ಮಗನ ಜೊತೆ ಜಗಳ ಆಗದಿರುವ ಹಾಗೆ ನೋಡಿಕೊಳ್ಳಿ. ಬೆನ್ನಿಗೆ ಚುಚ್ಚುವರೆ ಹೆಚ್ಚಿರುವರು. ನವಗ್ರಹ ಶಾಂತಿ ಮಾಡಿಕೊಳ್ಳುವುದು ಉತ್ತಮ.

ಅದೃಷ್ಟ ಸಂಖ್ಯೆ 5

ಮೀನ

ಮನಸ್ಸಿಗೆ ನೆಮ್ಮದಿ. ಧನ ಆಗಮನ. ಕೈಗೊಂಡ ಕೆಲಸ ಕಾರ್ಯಗಳು ನೆರವೇರುತ್ತವೆ. ಮನೆಗೆ ಹೊಸ ವಸ್ತುಗಳನ್ನು ತರುವಿರಿ. ಆರೋಗ್ಯದಲ್ಲಿಸುಧಾರಣೆ. ಮೇಲಧಿಕಾರಿಗಳಿಂದ ಅನುಕೂಲ. ದೂರ ಪ್ರಯಾಣದಿಂದ ಲಾಭ. ವ್ಯಾಪಾರದಲ್ಲಿಅಭಿವೃದ್ಧಿ.

ಅದೃಷ್ಟ ಸಂಖ್ಯೆ 3

ಡಾ.ಅನಸೂಯ ಎಸ್ .ರಾಜೀವ್