ದಿನಭವಿಷ್ಯ 23 ಆಗಸ್ಟ್ 2026

Contributed bynetravati.krishnamurthy@timesgroup.com|Vijaya Karnataka
daily horoscope 2026 shocking events for your zodiac
ದಿನಭವಿಷ್ಯ 23 ಆಗಸ್ಟ್ 2026

ಶ್ರೀಪತಿ ಭಟ್ | ಬೆಂಗಳೂರು
(ಕನ್ಯಾ, ಮಕರ-ಈ ರಾಶಿಯವರಿಗೆ ವಾಣಿ ಯೋಗ)

---

ಮೇಷ : ಕಹಿ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಇವೆಲ್ಲವೂ ಕ್ಷಣಿಕವಾದುದು. ವಿದೇಶದಿಂದ ಶುಭ ಸಮಾಚಾರ ಕೇಳುವಿರಿ. ವ್ಯಾಪಾರ-ವ್ಯವಹಾರಗಳಿಗೆ ಹೊಸ ತಿರುವು ಸಿಗಲಿದೆ.

(ಶುಭ ಸಂಖ್ಯೆ: 9, ಅದೃಷ್ಟ ಬಣ್ಣ : ಕೆಂಪು)

-------------

ವೃಷಭ : ಕಾರ್ಯದಲ್ಲಿಎಷ್ಟೇ ಮನುಷ್ಯ ಪ್ರಯತ್ನವಿದ್ದರೂ ಯಶಸ್ಸು ಪಡೆಯುವಾಗ ವಿಘ್ನ ಉಂಟಾಗುವುದು ಸಹಜ. ಬರಬೇಕಾದ ಹಣ ಪಡೆಯಲು ಅಧಿಕಾರಿಗಳ ಹಿಂದೆ ಸುತ್ತುವ ಕಾರ್ಯಕ್ಕೆ ಮುಕ್ತಿ ಸಿಗಲಿದೆ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಬಿಳಿ)

--------------

ಮಿಥುನ : ಸಂಘ-ಸಂಸ್ಥೆಗಳಲ್ಲಿಸಣ್ಣ-ಪುಟ್ಟ ತಪ್ಪುಗಳನ್ನು ಸರಿಪಡಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ. ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯವೆನಿಸುವುದು. ಸಿನಿಮಾ ರಂಗದವರಿಗೆ ಉತ್ತಮ ಅವಕಾಶ ಸಿಗಲಿದೆ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಗುಲಾಬಿ)

-------------------

ಕಟಕ : ಬರಹಗಾರರಿಗೆ ಮತ್ತು ಚಲನಚಿತ್ರರಂಗದವರಿಗೆ ಹಣ ಮತ್ತು ಖ್ಯಾತಿ ದೊರೆಯುವುದು. ಹಿತಶತ್ರುಗಳ ಅನುಭವ ಆಗುವುದು. ಹೋಟೆಲ್ ವ್ಯಾಪಾರ ಪ್ರಾರಂಭಿಸುವ ಯೋಚನೆ ಫಲಪ್ರದವಾಗುತ್ತದೆ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕೇಸರಿ)

-----------------

ಸಿಂಹ : ಕಾರ್ಯಕ್ಷೇತ್ರದಲ್ಲಿವಿವಿಧ ರೀತಿಯ ಅಭಿವೃದ್ಧಿಯಿಂದ ಬಹುಮಟ್ಟಿಗೆ ಮನಸ್ಸು ಸಂತೃಪ್ತಗೊಳ್ಳಲಿದೆ. ಮನಸ್ಸಿನ ದುಗುಡ ನಿವಾರಣೆಗೊಳ್ಳಲಿದೆ. ಅವಿವಾಹಿತರಿಗೆ ಶುಭ ಫಲಗಳು ಲಭಿಸಲಿವೆ.

(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಹಳದಿ)

-----------------------

ಕನ್ಯಾ : ರಾಜಕೀಯ ಭವಿಷ್ಯದಲ್ಲಿಜನಪ್ರಿಯತೆ ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸಿ. ಸ್ಪರ್ಧಾ ಮನೋಭಾವದಿಂದ ಉನ್ನತ ಸ್ಥಾನಕ್ಕೆ ಏರಬಹುದು. ಸಮೀಪವರ್ತಿಗಳಿಂದ ಸಮಯೋಚಿತ ಸಹಾಯ ಸಿಗಲಿದೆ.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಂದು)

-----------

ತುಲಾ : ಆದಾಯದಲ್ಲಿಗಣನೀಯ ಏರಿಕೆ ಆಗಲಿದೆ. ದುಡಿಮೆಯು ಸಾರ್ಥಕವಾಗಲಿದೆ. ಜೀವನ ನಡೆಸುವ ವಿಧಾನವು ಇತರಿಗೆ ಮಾದರಿಯಾಗಿ ಇರಲಿದೆ. ಸಮಾಜ ಸೇವೆಯ ನಿಮಿತ್ತ ಓಡಾಟ ಹೆಚ್ಚುವುದು.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಹಸಿರು)

---------

ವೃಶ್ಚಿಕ : ಸಮಸ್ಯೆಯಿಂದ ಹೊರಬರಲು ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ ತೀರ್ಮಾನ ಕೈಗೊಳ್ಳುವಿರಿ. ವ್ಯಕ್ತಿಯೊಬ್ಬರ ಪರಿಚಯ ಜೀವನ ಶೈಲಿಯನ್ನೇ ಬದಲಿಸಲಿದೆ. ನಿಮ್ಮ ಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಕಾಣುವಿರಿ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಕಿತ್ತಳೆ)

----------

ಧನು: ಸ್ವಂತವಾಗಿ ವ್ಯಾಪಾರ ಮಾಡಲು ಯೋಚಿಸಿದ ನಿಮಗೆ ತಂದೆಯವರು ನೆರವಿಗೆ ಬರುವರು. ರೈತರು ಬೆಳೆದ ತರಕಾರಿ ಮತ್ತು ಹಣ್ಣು ಬೆಳೆಗಳಿಗೆ ನಿರೀಕ್ಷಿತ ಲಾಭ ಸಿಗಲಿದೆ. ಕಷ್ಟಗಳ ಪರಿಹಾರಕ್ಕೆ ಶ್ರೀದೇವರ ಸೇವೆಯನ್ನು ಮಾಡಿ.

(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಕಪ್ಪು)

------------

ಮಕರ: ಸಂಬಂಧಿಗಳಿಗೆ ಅತಿಯಾಗಿ ಬೆಲೆ ಕೊಡುವ ನೀವು ಸಂಬಂಧಿಕರ ಮೊಸಳೆ ಕಣ್ಣೀರಿಗೆ ಸುಲಭವಾಗಿ ಮರುಳಾಗದಿರಿ. ಸಂಜೆಯ ಸಮಯದಲ್ಲಿಕೆಲಸದ ಒತ್ತಡ ಹೆಚ್ಚಾಗಿ ಶಿರೋವೇದನೆ ಉಂಟಾಗಲಿದೆ.

(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಪಾಚಿ ಹಸಿರು)

-----------

ಕುಂಭ: ಕೆಲಸದಲ್ಲಿಗಮನ ಹೆಚ್ಚು ಕಡಿಮೆ ಆದಲ್ಲಿನೀವು ಬಯಸುತ್ತಿರುವ ಬಡ್ತಿ ಪಡೆಯುವಲ್ಲಿವಿಫಲರಾಗುವಿರಿ. ತೋಟಕ್ಕೆ ನೀರಿನಿಂದ ಉಂಟಾಗುತ್ತಿರುವ ತೊಂದರೆಯನ್ನು ತಡೆಗಟ್ಟುವ ಸಲುವಾಗಿ ಕ್ರಮವನ್ನು ತೆಗೆದುಕೊಳ್ಳಿ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕಂದು)

-----------

ಮೀನ: ವ್ಯವಹಾರದ ಬಗ್ಗೆ ಗಮನ ಹರಿಸುವುದು ಮುಖ್ಯ. ದೇವರ ಕೃಪೆ ಮತ್ತು ಹಿರಿಯರ ಆಶೀರ್ವಾದದಿಂದ ಎಲ್ಲಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ಸಿಗಲಿದೆ. ಜನರನ್ನು ಆಕರ್ಷಿಸುವ ಕಲೆ ಕರಗತವಾಗಿದೆ.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೀಲಿ)