24ರಿಂದ ಮಹಾಯಾಗ

Contributed byShridevi Ambekallu|Vijaya Karnataka
mangalore maha yag attend the shrimad lakshmenarayana maha yag
ಮಂಗಳೂರು: ಲೋಕಕಲ್ಯಾಣ, ಧರ್ಮ ಸಂವರ್ಧನೆ, ಶಾಂತಿ, ಸಮೃದ್ಧಿ ಹಾಗೂ ಸರ್ವಜನ ಕ್ಷೇಮದ ಸಂಕಲ್ಪದೊಂದಿಗೆ ಜಗದಾಚಾರ್ಯ ಸ್ವಾಮಿ ಅಖಿಲೇಶ್ ಜೀ ಮಹಾರಾಜ್ ಸೇವಾ ಸಂಸ್ಥಾನ ಮತ್ತು ದಿ ಸ್ಯಾಫ್ರನ್ ಫ್ರಂಟ್ ಇದರ ಸಹಯೋಗದೊಂದಿಗೆ ಶ್ರೀಮದ್ ಲಕ್ಷ್ಮೇನಾರಾಯಣ ಮಹಾಯಾಗ ಆ.24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿಆಯೋಜಿಸಲಾಗಿದೆ ಎಂದು ಕಾರಾರ ಯಧ್ಯಕ್ಷ ದಿನಕರ ಶೆಟ್ಟಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾಹಿತಿ ನೀಡಿ, ದಕ್ಷಿಣ ಕನ್ನಡದಲ್ಲಿಪ್ರಥಮ ಬಾರಿಗೆ ನಡೆಯುತ್ತಿರುವ ಈ ಮಹಾಯಾಗ ಆಚಾರ್ಯ ಶ್ರೀ ಲವ್ ಕುಶ್ ಮಿಶ್ರಾಜೀ, ವಿಂದ್ಯಾಚಲ್ , ವಾರಣಾಸಿ, ಉತ್ತರಪ್ರದೇಶ ಪೌರೋಹಿತ್ಯದಲ್ಲಿನಾನಾ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ. ಮಹಾಯಾಗದ ಆರಂಭದ ಅಂಗವಾಗಿ ಆ.24ರಂದು ಬೆಳಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಯೋಗೇಶ್ವರ ಕದ್ರಿ ಮಠದವರೆಗೆ ಕಳಶಯಾತ್ರೆ ನಡೆಯಲಿದೆ. ನಂತರ ಐದು ದಿನಗಳ ಕಾಲ ಯಾಗದ ನಾನಾ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಮಹಾಯಾಗದ ಸಂದರ್ಭದಲ್ಲಿಹೋಮ-ಹವನಗಳು, ಮಂತ್ರಪಠಣ, ಪೂಜಾ ವಿಧಿವಿಧಾನಗಳು ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಆ.28ರಂದು ಪೂರ್ಣಾಹುತಿ ನೆರವೇರಲಿದೆ ಎಂದರು.