ಶಂಕರನ ಬಂಡೆಗೆ ವಿಶೇಷ ಪೂಜೆ

Contributed byShridevi Ambekallu|Vijaya Karnataka
special puja at shankaras stone during shravan month
ಶಂಕರನ ಬಂಡೆಗೆ ಶ್ರಾವಣ ಪೂಜೆ

ಹೊಳಲ್ಕೆರೆ: ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಗುರು ಕರಿಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿಶ್ರಾವಣ ಮಾಸದ ಮೊದಲನೇ ಸೋಮವಾರದ ವಿಶೇಷ ಪೂಜೆ ಆರಂಭಗೊಂಡಿದ್ದು, ಶ್ರಾವಣ ಮಾಸದ ವಿಶೇಷ ಪೂಜೆಗಳು ನೆರವೇರಲಿವೆ.
ಶಂಕರನ ಬಂಡೆಯಲ್ಲಿಉದ್ಭವ ಲಿಂಗ

ಗ್ರಾಮದ ಹೊರವಲಯದಲ್ಲಿಒಂದೂವರೆ ಕಿಮೀ. ದೂರದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿದೊಡ್ಡ ಹಾಸು ಬಂಡೆ ಇದೆ. ಇಲ್ಲಿಉದ್ಭವ ಲಿಂಗ ಇದ್ದು, ನಿತ್ಯವೂ ಶ್ರಾವಣ ಮಾಸದ ಪೂಜೆ ನಡೆಯಲಿದ್ದು, ವರ್ಷಕ್ಕೊಮ್ಮೆ ಶ್ರಾವಣ ಮಾಸದ ಎಲ್ಲಾಸೋಮವಾರ ವಿಶೇಷ ಪೂಜೆ, ಅಭಿಷೇಕಗಳು ನಡೆಯಲಿವೆ. ಶ್ರೀ ಕರಿಸಿದ್ಧೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಶಂಕರನ ಬಂಡೆಗೆ ಹೋಗುವುದು ಇಲ್ಲಿನ ವಿಶೇಷ. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಸ್ವಾಮಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.