ಶಿಲ್ಪ ಸ್ವಾರಸ್ಯ

Contributed byShridevi Ambekallu|Vijaya Karnataka
the excellence of kartikeya sculpture an artistic devotion in south india
ಕಾರ್ತಿಕೇಯೋ ಮಹಾಸೇನಃ

------------------
ದಕ್ಷಿಣ ಭಾರತದಲ್ಲಿಅದರಲ್ಲೂತಮಿಳು ನಾಡಿನಲ್ಲಿಷಣ್ಮುಖ ಅಥವಾ ಮುರುಗನ್ ತುಂಬ ಜನಪ್ರಿಯ. ಸಿಂಗಾಪುರದಲ್ಲಿಮುರುಗನ ಪ್ರಸಿದ್ಧ ದೇವಾಲಯವಿದೆ. ಇವೆಲ್ಲಇತ್ತೀಚಿನ ರಚನೆಗಳಾದರೂ ಷಣ್ಮುಖನು ಆರಾಧನೆ ಎರಡನೇ ಶತಮಾನದಿಂದ ನಡೆದಿರುವುದು ತಿಳಿಯುವಂತಿದೆ.

ಇಲ್ಲಿರುವ ಕಾರ್ತಿಕೇಯನ ಶಿಲ್ಪವು ಪ್ರತಿಹಾರ ಕಾಲಕ್ಕೆ ಸೇರಿದ್ದು ಇದು ಉತ್ತರಖಂಡದರಾಣಿಹಾಟ್ , ಪೌರಿ ಗಢ್ವಾಲ್ ಪ್ರದೇಶದಲ್ಲಿದೆ.

ಕಾರ್ತಿಕೇಯೋ ಮಹಾಸೇನಃಶರಜನ್ಮಾ ಷಡಾನನಃ ಎನ್ನುವುದು ಅಮರಕೋಶದ ಉಲ್ಲೇಖ. ಶಿವ ಪಾರ್ವತಿಯರ ಮೊದಲ ಮಗನಾದ ಈತನು ದೇವ ಸೇನಾಪತಿ. ತಾರಕಾಸುರನನ್ನು ಸಂಹಾರ ಮಾಡಿದವ.ಕೃತಿಕಾ ನಕ್ಷತ್ರಗಳ ಪಾಲನೆಯಿಂದ ಬೆಳೆದ ಕಾರಣ ಈತ ಕಾರ್ತಿಕೇಯ.

ಪೌರಾಣಿಕವಾಗಿಯೂ ಈತ ಪ್ರಸಿದ್ಧನೇ ಹೌದು. ಕಾರ್ತಿಕೇಯನ ಮೂರ್ತಿರೂಪದ ವಿವರಣೆಗಳು ವಿಷ್ಣುಧರ್ಮೋತ್ತರ ಪುರಾಣ, ವರಾಹಮಿಹಿರನ ಶಿಲ್ಪಶಾಸ್ತ್ರ, ಸಮರಾಂಗಣ ಸೂತ್ರಧಾರ ಮತ್ತು ಸ್ಕಂದಪುರಾಣಗಳಲ್ಲಿಕಾಣುತ್ತದೆ. ಕಾರ್ತಿಕೇಯನ ಮೂರ್ತಿಗಳು ನಿಂತ ಅಥವಾ ಕುಳಿತ ಭಂಗಿಗಳಲ್ಲಿರುತ್ತವೆ. ಕೆಲವೆಡೆಗಳಲ್ಲಿಆರು ಮುಖಗಳೊಂದಿಗೆ ಚಿತ್ರಿಸಲ್ಪಟ್ಟಿದ್ದರೂ, ಹೆಚ್ಚಿನ ಮೂರ್ತಿಗಳು ಏಕಮುಖವಾಗಿವೆ. ವಿವಿಧ ದೇವತೆಗಳಿಂದ ಆಯುಧಗಳನ್ನು ಪಡೆದ ಕಾರಣದಿಂದ ವಿಭಿನ್ನ ಆಯುಧಗಳು ಕಾಣಿಸುತ್ತವೆ. ಹೀಗಾಗಿ ಎರಡರಿಂದ ಹನ್ನೆರಡು ಕೈಗಳವರೆಗೆ ಇರುವ ರೂಪಗಳೂ ಕಂಡುಬರುತ್ತವೆ. ಸ್ಕಂದನ ಚಿತ್ರಣವು ಪ್ರಾಚೀನ ನಾಣ್ಯಗಳ ಮೇಲೂ ಇದೆ. ಯೌಧೇಯ ಮತ್ತು ಕುಶಾನರ ಕಾಲದ ನಾಣ್ಯಗಳು ಒಂದು ಮತ್ತು ಆರು ಮುಖಗಳ ಕಾರ್ತಿಕೇಯ ಚಿತ್ರಣಗಳಿಂದ ಅಲಂಕೃತವಾಗಿವೆ. ಗುಪ್ತ ಕಾಲದ ಕುಮಾರಗುಪ್ತನ ನಾಣ್ಯಗಳಲ್ಲಿಕಾರ್ತಿಕೇಯನ ಚಿಹ್ನೆ ಕಾಣುತ್ತದೆ. ಬಿಲ್ಸದ್ ನ ಶಿಲಾಶಾಸನದಲ್ಲಿಷಣ್ಮುಖನ ಉಲ್ಲೇಖವಿದೆ. ಭಿಟಾ ಮತ್ತು ಬಸಾರ್ ಪ್ರದೇಶಗಳಿಂದ ದೊರೆತ ಮಣ್ಣಿನ ಮುದ್ರೆಗಳಲ್ಲೂ‘ಸ್ಕಂದ’ ಎಂಬ ಹೆಸರು ಉಲ್ಲೇಖವಾಗಿದೆ.