ಗಾಂಜಾ ಮಾರಾಟ ಆರೋಪ: ವ್ಯಕ್ತಿ ಬಂಧನ

Contributed byasmysvkr@gmail.com|Vijaya Karnataka
cannabis trafficking crime individual arrested
ಗಾಂಜಾ ಮಾರಾಟ ಆರೋಪ: ವ್ಯಕ್ತಿ ಬಂಧನ

ವಿಕ ಸುದ್ದಿಲೋಕ ಪಿರಿಯಾಪಟ್ಟಣ
ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಆನೆಚೌಕೂರು ಅರಣ್ಯ ಪ್ರದೇಶದ ಗೋಣಿಕೊಪ್ಪ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿಯಲ್ಲಿನಡೆದಿದೆ.

ಪಂಚವಳ್ಳಿ ಗ್ರಾಮದ ಜಬೀಯಾ ಅಲಿಯಾಸ್ ಜಬೀವುಲ್ಲಾಖಾನ್ (40) ಬಂಧಿತ. ಚಾಲಕ ವೃತ್ತಿ ಮಾಡಿಕೊಂಡಿರುವ ಇವನು ಆ.22ರಂದು ಬೆಳಗ್ಗೆ 10.20ರಲ್ಲಿಆನೆಚೌಕೂರು ಅರಣ್ಯ ಗಸ್ತು ವ್ಯಾಪ್ತಿಯಲ್ಲಿಒಂದು ಕೆ.ಜಿ.ಗೂ ಹೆಚ್ಚು ಒಣ ಗಾಂಜಾವನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದಾನೆ. ಈ ಬಗ್ಗೆ ಕೂಡಲೇ ಸ್ಥಳೀಯರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಖಚಿತ ಮಾಹಿತಿ ನೀಡಿದ್ದಾರೆ. ಇದನ್ನು ಆಧರಿಸಿ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪಿಎಸ್ ಐ ಜಗದೀಶ್ ಬಿ.ಎಚ್ . ಪರಿಶೀಲನೆ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಫೋಟೋ:

1) ಆರೋಪಿ ಜಬೀಯಾ ಅಲಿಯಾಸ್ ಜಬೀವುಲ್ಲಾಖಾನ್ .

ಎಂವೈಎಸ್ 23ಬಿಟಿಪಿ1