ಓಣಂ ಆಚರಣೆ

Contributed bygangadhar.korekkana@gmail.com|Vijaya Karnataka
celebration of onam festival with devotion and joy at mulinja school
ಉಪ್ಪಳದ ಮುಳಿಂಜ ಶಾಲೆ

ಮಂಜೇಶ್ವರ: ಉಪ್ಪಳದಲ್ಲಿರುವ ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಓಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರ ಅಧ್ಯಕ್ಷತೆಯಲ್ಲಿನಡೆದ ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ನಾಜಿಯಾ ಅಜೀಜ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರದ ಬಿ.ಪಿ.ಸಿ. ರಾಜಗೋಪಾಲ್ ಓಣಂ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಬಳಿಕ ಕಾಸರಗೋಡು ಜಿಲ್ಲಾಅರಣ್ಯ ಇಲಾಖೆಯ ವತಿಯಿಂದ ಪಶು ಸಂರಕ್ಷಣಾ ಯೋಜನೆಯ ಭಾಗವಾಗಿ ರೇಬಿಸ್ ಮುನ್ನೆಚ್ಚರಿಕೆ ಕುರಿತು ಜಾಗೃತಿ ತರಗತಿಯನ್ನು ನಡೆಸಲಾಯಿತು. ವಿಷ್ಣು ಕೃಷ್ಣನ್ ಅವರು ತರಗತಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿಯೋಗ ಇನ್ ಸ್ಟ್ರಕ್ಟರ್ ತಾರಾ ಕೆ., ಹಿರಿಯ ಶಿಕ್ಷಕರಾದ ರಿಯಾಸ್ ಪೆರಿಂಗಡಿ ಹಾಗೂ ವಾಣಿ ಮತ್ತಿತರರು ಉಪಸ್ಥಿತರಿದ್ದರು.

ಓಣಂ ಆಚರಣೆಯ ಅಂಗವಾಗಿ ಶಿಕ್ಷಕರಾದ ಅಬ್ದುಲ್ ಬಶೀರ್ ಹಾಗೂ ಜಸೀಲಾ ಅವರ ನೇತೃತ್ವದಲ್ಲಿವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಈ ಸ್ಪರ್ಧೆಗಳಲ್ಲಿವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಧನ್ಯ, ಅನುಕೃಷ್ಣ ಅವರ ನೇತೃತ್ವದಲ್ಲಿಆಕರ್ಷಕ ಪೂಕಳಂ ರಚಿಸಲಾಯಿತು. ಮಹಾಬಲಿ ವೇಷಧಾರಿಯಾಗಿದ್ದ ಮೊಹಿನುದ್ದೀನ್ ಅಯಾನ್ ಅವರನ್ನು ಓಣಂ ಹಾಡಿನ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲಾ ಶಿಕ್ಷಕಿ ರೇಷ್ಮಾ ಸ್ವಾಗತಿಸಿದರು. ಶಿಕ್ಷಕಿ ಐಶ್ವರ್ಯ ವಂದಿಸಿದರು. ಶಿಕ್ಷಕಿ ಆಯಿಷತ್ ಸೈನಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

22ಎಂಜೆ ಮುಳಿಂಜಶಾಲೆ ಓಣಂ