ಬುದ್ದು ಅನ್ನು ಬುದ್ಧನಾಗಿಸಬಲ್ಲಕ್ರೀಡೆ ಚೆಸ್

Contributed byjohn.dsouza@timesofindia.com|Vijaya Karnataka
chess the path from ignorance to wisdom
ಓಪನ್ ರಾರ ಯಪಿಡ್ ಚೆಸ್ ಟೂರ್ನಿ ಉದ್ಘಾಟಿಸಿ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ

ವಿಕ ಸುದ್ದಿಲೋಕ ಕುಂದಾಪುರ
ಚೆಸ್ ಕೇವಲ ಮಾನಸಿಕ ಕ್ರೀಡೆಯಲ್ಲ. ದೈಹಿಕವಾಗಿಯೂ ಸಾಮರ್ಥ್ಯ ನೀಡುವಂತದ್ದು. ಚೆಸ್ ಗ್ರಾತ್ರ್ಯಂಡ್ ಮಾಸ್ಟರ್ ವಿಶ್ವನಾಥ ಆನಂದನ್ ಆದಿಯಾಗಿ ವಿಶ್ವ ಚಾಂಪಿಯನ್ ಆಗಿರುವವರೆಲ್ಲಾಪಂದ್ಯಾಟದ ಮೊದಲು ನಡೆಸುವ ದೈಹಿಕ ಕಸರತ್ತು ಚೆಸ್ ಪಟುಗಳಿಗೆ ಮಾದರಿಯಾಗಬೇಕಿದೆ. ಬುದ್ದುವನ್ನು ಬುದ್ಧನಾಗಿಸಬಲ್ಲಕ್ರೀಡೆಯೊಂದಿದ್ದರೆ ಅದು ಚೆಸ್ ಮಾತ್ರ ಎಂದು ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ನುಡಿದರು.

ಭಾನುವಾರ ಇಲ್ಲಿನ ನಾರಾಯಣಗುರು ಕಲ್ಯಾಣ ಮಂಟಪದಲ್ಲಿಸಿದ್ಧಿವಿನಾಯಕ ಚೆಸ್ ಅಕಾಡೆಮಿ ಉಡುಪಿ ಜಿಲ್ಲಾಅಸೋಸಿಯೇಶನ್ ಮತ್ತು ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ 45ನೇ ವರ್ಷದ ಓಪನ್ ರಾರ ಯಪಿಡ್ ಚೆಸ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಸ್ವಸ್ಥ ಶರೀರ ಇದ್ದಾಗ ಸ್ವಸ್ಥ ಮನಸ್ಸು ನಿರ್ಮಿಸಲ್ಪಡುತ್ತದೆ. ಚೆಸ್ ಕ್ರೀಡೆಗೆ ದೊಡ್ಡ ಸ್ಥಳಾವಕಾಶ ಬೇಕಾಗಿಲ್ಲ. ಆದರೆ ಧೃಡವಾದ ಮನಸ್ಸು ದೈಹಿಕ ಸಾಮರ್ಥ್ಯ ಚೆಸ್ ಪಟುವಿಗೆ ಬೇಕು. ಭಾರತ ಚೆಸ್ ಗೆ ದೊಡ್ಡ ಅವಕಾಶ ಸೃಷ್ಟಿಸುತ್ತಿರುವ ರಾಷ್ಟ್ರವಾಗಿದೆ ಎಂದರು.

ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬೀಜಾಡಿ ಅಶೋಕ ಪೂಜಾರಿ ಚೆಸ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಯಾವುದೇ ಕ್ರೀಡೆಯಿರಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾ ಚಟುವಟಿಕೆಗಳಿಗೆ ಸಂಘವು ಯಾವಾಗಲೂ ಪ್ರೋತ್ಸಾಹ ನೀಡುತ್ತದೆ ಎಂದರು.

ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಶಫಿ, ಉಡುಪಿ ಜಿಲ್ಲಾಚೆಸ್ ಅಸೋಸಿಯೇಶನ್ ಅಧ್ಯಕ್ಷ ಉಮಾನಾಥ್ , ಕ್ರೀಡಾ ಸಂಘಟಕ ಅಶೋಕ ಪಿ.ಕೆ. ಉಪಸ್ಥಿತರಿದ್ದರು. ಸಿದ್ಧಿವಿನಾಯಕ ಚೆಸ್ ಅಕಾಡೆಮಿ ಅಧ್ಯಕ್ಷ ಬಾಬು ಪೂಜಾರಿ ಉಪ್ಪುಂದ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪೋಟೊ//23ಕೆ-ಸಿಎಚ್ ಎಸ್ //. ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಚೆಸ್ ಪಂದ್ಯಾಟ ಉದ್ಘಾಟಿಸಿದರು.