ಕಿಕ್ಕರ್ : ರೈತರು ಒಗ್ಗಟ್ಟಾಗಿ ಬಂದರೆ ವಾರದೊಳಗೆ ನಿರ್ಧಾರ | ಸಚಿವ ಎಸ್ ಎಸ್ ಎಂ ಭರವಸೆ | 9.82 ಕೋಟಿ ವೆಚ್ಚದ ತುಂಬಿಕೆರೆ ಏತ ಯೋಜನೆಗೆ ಭೂಮಿ ಪೂಜೆ
----ಭದ್ರಾ ನೀರಿಗೆ ಒಮ್ಮತ ಮೂಡಲಿ
ವಿಕ ಸುದ್ದಿಲೋಕ ಮಾಯಕೊಂಡ
‘‘ಭದ್ರಾ ಡ್ಯಾಂನಿಂದ ಭದ್ರಾ ನಾಲೆಗೆ ಮುಂಗಾರು ಬೆಳೆಗೆ ಅಥವಾ ಹಿಂಗಾರು ಬೆಳೆಗೆ ನೀರು ಬಿಡಬೇಕೆಂಬ ವಿಚಾರದಲ್ಲಿರೈತರದಲ್ಲಿಒಮ್ಮತವಿಲ್ಲ, ರೈತರು ಒಗ್ಗಟ್ಟಾಗಿ ಬಂದರೆ ವಾರದೊಳಗೆ ರೈತರೊಂದಿಗೆ ಮತ್ತೊಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು,’’ ಎಂದು ಜಿಲ್ಲಾಉಸ್ತುವಾರಿ ಸಚಿವ ಎಸ್ .ಎಸ್ . ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆ ತಾಲೂಕು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆನಗೋಡು ಹೋಬಳಿಯ ತುಂಬಿಗೆರೆ ಗ್ರಾಮದಲ್ಲಿಭಾನುವಾರ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ ಭದ್ರಾ ನೀರು ಬಿಡುವ ವಿಚಾರದಲ್ಲಿ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ನನ್ನ ವಿರುದ್ಧವೂ ಕೆಲವರು ಟೀಕೆ ಮಾಡಿದ್ದಾರೆ. ನೀರು ಹರಿಸಲು ಕೆಲ ರೈತರು ಬೇಕು ಎನ್ನುತ್ತಾರೆ, ಕೆಲವರು ಬೇಡ ಎನ್ನುತ್ತಿದ್ದಾರೆ. ರೈತರಲ್ಲಿಯೇ ಗೊಂದಲವಿದ್ದು, ಎಲ್ಲರೂ ಒಮ್ಮತಾಭಿಪ್ರಾಯಕ್ಕೆ ಬರಬೇಕಿದೆ’’ ಎಂದರು.
‘‘ಕೆಲವು ರೈತರು ಈಗಾಗಲೇ ಸಮಯ ಮೀರಿದ್ದು ಈಗ ಭತ್ತಕ್ಕೆ ನೀರು ಬಿಡಬಾರದು ಬೇಸಿಗೆಗೆ ನೀಡಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಈಗಲೇ ನೀರು ನೀಡಬೇಕು ಎನ್ನುತ್ತಿದ್ದಾರೆ. ಐಸಿಸಿ ಸಭೆಯಲ್ಲೂರೈತರು ಸ್ಪಷ್ಟ ನಿರ್ಧಾರಕ್ಕೆ ಬರಲಿಲ್ಲ. ಡ್ಯಾಮ್ ನಲ್ಲಿಈಗ 175 ಅಡಿ ನೀರಿದೆ. ಜಿಲ್ಲೆಯಲ್ಲಿ1 ಲಕ್ಷ ಹೆಕ್ಟೇರ್ ಅಡಕೆ, 1.5 ಲಕ್ಷ ಹೆಕ್ಟೇರ್ ಭತ್ತದ ಬೆಳೆ ಇದೆ. ಎರಡೂ ಬೆಳೆಗೆ ನೀರು ಬಿಡುವ ಜೊತೆಗೆ ಎಲ್ಲಾರೈತರಿಗೂ ಅನುಕೂಲ ಆಗುವ ನಿರ್ಧಾರ ಮಾಡೋಣ’’ ಎಂದು ಹೇಳಿದರು.
ತುಂಬಿಗೆರೆ ಏತ ಯೋಜನೆ:
‘‘ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಿದೆ, ಅದಕ್ಕೆ ಪೂರಕವಾಗಿ ಯೋಜನೆ ರೂಪಿಸಲಾಗುವುದು. ತುಂಬಿಗೆರೆ ಏತ ನೀರಾವರಿ ಯೋಜನೆಗೆ ಸರಕಾರದಿಂದ 9.82 ಕೋಟಿ ರೂ.ಮಂಜೂರಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕಿದೆ. 22 ಕೆರೆ ಏತ ನೀರಾವರಿ ಯೋಜನೆ ಲೋಪವಾದಂತೆ ಈ ಯೋಜನೆ ಆಗಬಾರದು. ಜನಪರ ಯೋಜನೆಗಳಲ್ಲೂರಾಜಕೀಯ ಆಗದಿರಲಿ. ತುಂಬಿಗೆರೆ ಯೋಜನೆಗೆ ಮೊದಲು 5 ಕೋಟಿ ರೂ.ಗೆ ಎಸ್ಟಿಮೇಟ್ ಆಗಿತ್ತು, ಡಿಐ ಪೈಪ್ ಹಾಕುವ ಸಲುವಾಗಿ ಈಗ ಹೆಚ್ಚುವರಿ ಹಣ ನೀಡಿ ಟೆಂಡರ್ ನೀಡಲಾಗಿದೆ, ಶೀಘ್ರದಲ್ಲೆಕಾಮಗಾರಿ ಪ್ರಾರಂಭವಾಗಲಿದೆ’’ ಎಂದರು.
22 ಕೆರೆ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮಾತನಾಡಿ, ‘‘ಸರಕಾರದ ಕೆಲಸ ಮಾಡಿಸಿಕೊಳ್ಳುವುದನ್ನು ತುಂಬಿಗೆರೆ ಗ್ರಾಮದವರನ್ನ ನೋಡಿ ಕಲಿಯಬೇಕು. ಗ್ರಾಮದ ಕೆರೆಗೆ ನೀರು ತುಂಬಿಸಲು ಗ್ರಾಮಸ್ಥರು ಸುಮಾರು 28 ಸಲ ಬೆಂಗಳೂರಿಗೆ ತೆರಳಿ ಸಚಿವರನ್ನು ಬೆನ್ನತ್ತಿ ಕೆಲಸ ಮಾಡಿಸಿಕೊಂಡರು. ಕೆಲಸದಲ್ಲಿವ್ಯತ್ಯಾಸ ಆದರೆ ಸಚಿವರ ಗಮನ ತನ್ನಿ’’ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ತುಂಬಿಗೆರೆ ಬಸಣ್ಣ, ಗಣೇಶ್ ದಾಸಕರಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಚಂದ್ರಣ್ಣ, ಐಗೂರು ಚಂದ್ರಣ್ಣ , ಐಗೂರು ಹನುಮಂತಪ್ಪ, ಲಿಂಗಾಪುರ ಜಯಣ್ಣ, ಕೃಷ್ಣ, ಮಂಜುನಾಥ್ , ಅಗಸನಕಟ್ಟೆ ಶಿವಮೂರ್ತಿ, ಅಜ್ಜಣ್ಣ, ಗುಮ್ಮನೂರು ಶಂಭಣ್ಣ, ಕಾಟೇಹಳ್ಳಿ ಹಾಲೇಶ್ , ಎಂಜಿನಿಯರ್ ಶಶಿಕುಮಾರ್ ಸುತ್ತಲ ಗ್ರಾಮಗಳ ಜನತೆ ಇದ್ದರು.
---
ಬಾಕ್ಸ್ ...
22 ಕೆರೆಗಳ ಕಾಮಗಾರಿಗೆ 75 ಕೋಟಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಕೆ.ಎಸ್ . ಬಸವಂತಪ್ಪ, ‘‘ಗ್ರಾಮಸ್ಥರಾದ ನಿಮ್ಮ ಶ್ರಮದ ಫಲವಾಗಿ ಇಂದು ಯೋಜನೆ ಜಾರಿಯಾಗಿದೆ. ಮಾಯಕೊಂಡ ಕ್ಷೇತ್ರದ ಜನರ ಹೋರಾಟದ ಫಲ 22 ಕೆರೆ ಏತ ನೀರಾವರಿ ಯೋಜನೆ, ಎಲ್ ಅಂಡ್ ಟಿ ಕಂಪನಿ ಕಾಮಗಾರಿ ಕಳಪೆಯಿಂದ ವಿಫಲವಾಯಿತು. ಈ ಕಾಮಗಾರಿಗೆ ಜೀವ ಕೊಡಲು ಡಿ.ಕೆ. ಶಿವಕುಮಾರ್ ಅವರ ಕಾಳಜಿಯಿಂದ 75 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಹಳೆಯ ಯೋಜನೆಯ 18 ಕೋಟಿ ಸೇರಿ ಕಾಮಗಾರಿ ಕೈಗೊಂಡು, ತರಳಬಾಳು ಶ್ರೀಗಳ ಮಾರ್ಗದರ್ಶನದಲ್ಲಿ22 ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ’’ ಎಂದು ಹೇಳಿದರು.
-----
ವಿವಿ ಸಾಗರಕ್ಕೆ ನೀರು ಆರೋಪ ಸುಳ್ಳು
’’ಉಪ ಚುನಾವಣೆ ಹಿನ್ನೆಲೆ ವಾಣಿ ವಿಲಾಸ ಸಾಗರಕ್ಕೆ ನೀರು ಬಿಡಲು ಸರಕಾರ ಷಡ್ಯಂತ್ರ ಮಾಡುತ್ತಿದೆ ಎಂಬ ರೈತರ ಆರೋಪ ಸುಳ್ಳು. ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಟ್ರಯಲ್ ರನ್ ಮಾಡಲು ನೀರು ಕೇಳಿದ್ದರು. ಮಾತುಕತೆಯಂತೆ ತುಂಗಾ ಜಲಾಶಯದಿಂದ ಎತ್ತುವಳಿ ಮಾಡಿ, ನಂತರ ಬೇಕಾದರೆ ನೋಡೋಣ ಎಂದಿದ್ದೇವೆ’’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಎಸ್ ಎಸ್ ಎಂ ಉತ್ತರಿಸಿದರು.
----
23ಎಂವೈಕೆ 2
ಮಾಯಕೊಂಡ ವಿಧಾನಸಭಾ ಕ್ಷೇತ್ರದ ತುಂಬಿಗೆರೆ ಗ್ರಾಮದಲ್ಲಿಭಾನುವಾರ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವನ್ನು ಸಚಿವರಾದ ಎಸ್ .ಎಸ್ . ಮಲ್ಲಿಕಾರ್ಜುನ್ ಹಾಗೂ ಕೆ.ಎಸ್ . ಬಸವಂತಪ್ಪ ಉದ್ಘಾಟಿಸಿದರು.