ಮೇಷ : ಮನೆ ನವೀಕರಣಗೊಳಿಸುವ ಕಾರ್ಯಕ್ಕೆ ಕೈ ಹಾಕುವವರು ವಾಸ್ತು ಬಗ್ಗೆ ಗಮನ ಕೊಡಿ. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಬೆಳಸಿಕೊಳ್ಳಿ. ವಾಹನ ಚಾಲನೆ ಮಾಡುವಾಗ ಜಾಗೃತರಾಗಿರಿ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಕೆಂಪು)
-------------------
ವೃಷಭ : ವ್ಯಾಪಾರ ವೃತ್ತಿಯಲ್ಲಿಅರೋಗ್ಯಕರ ಪೈಪೋಟಿ ಕಂಡಬಂದರೂ ಸಮಾಧಾನಕರ ಲಾಭ ಇರುವುದು. ಐತಿಹಾಸಿಕ ಅನ್ವೇಷಣೆಯ ಹಾದಿಯಲ್ಲಿಮತ್ತಷ್ಟು ದೂರ ಸಾಗಿದಲ್ಲಿಯಶಸ್ಸಿನ ಛಾಯೆ ಕಾಣಲಿದೆ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ನೀಲಿ)
---------------
ಮಿಥುನ: ಸಾಮರ್ಥ್ಯದ ಅರಿವು ಉಂಟಾದಲ್ಲಿಜಯ ಇರಲಿದೆ. ಲೇವಾದೇವಿ ವ್ಯವಹಾರಗಳಿಂದ ಹಣ ಒಳ್ಳೆಯ ಕಾರ್ಯಗಳಿಗೆ ಸಹಾಯವಾಗುವುದು. ಹಣಕಾಸಿನ ಕೊರತೆ ಅಷ್ಟಾಗಿ ಕಾಡದು.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಹಸಿರು)
------------------------
ಕಟಕ : ವ್ಯವಹಾರದಲ್ಲಿಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಉತ್ತಮ ಆದಾಯ ಲಭ್ಯವಾಗಲಿದೆ. ಸರಕಾರಿ ನೌಕರರಿಗೆ ಅವರ ಕ್ಷೇತ್ರದಲ್ಲಿಏಳಿಕೆ ಪ್ರಾಪ್ತಿ ಆಗುವುದು. ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಜಯ ಸಿಗಲಿದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಹಳದಿ)
----------------
ಸಿಂಹ: ಮೇಲಧಿಕಾರಿ ವರ್ಗದವರಿಗೆ ಲೆಕ್ಕಪತ್ರಗಳು ಸಮರ್ಪಕವಾಗಿರುವುದು ಕಂಡುಬರುವುದು. ಆರಕ್ಷಕ ಅಧಿಕಾರಿಗಳಿಗೆ ಕೆಲಸದಲ್ಲಿಒತ್ತಡ ನಿವಾರಣೆ ಆಗಲಿದೆ. ಮನೆಯಲ್ಲಿಸಂತಸದ ವಾತಾವರಣ ಸೃಷ್ಟಿಯಾಗಲಿದೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಿತ್ತಳೆ)
-------------
ಕನ್ಯಾ : ಹೊಸ ಕೆಲಸ ಶುರು ಮಾಡುವ ಮುನ್ನ ಮುಂದಿನ ಕ್ರಮಗಳ ಕುರಿತು ಗಂಭೀರವಾಗಿ ಯೋಚಿಸಿ ತೀರ್ಮಾನಿಸಿ. ಹೊಸ ಆಕಾಂಕ್ಷೆಗಳನ್ನು ಮತ್ತು ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಳ್ಳುವಿರಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಆಲೀವ್ )
-------------
ತುಲಾ : ಅನುಮಾನಕ್ಕೆ ಎಡೆ ಮಾಡಿಕೊಡುವಂತಹ ಹಲವು ವಿಷಯಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಸರಕಾರದಿಂದ ಸಹಾಯ ದೊರೆಕುವುದು. ಅವಕಾಶಗಳನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಿ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಮರೂನ್ )
---------------
ವೃಶ್ಚಿಕ : ಕೇವಲ ಮಾತಿನಲ್ಲಿಅಲ್ಲದೇ ವ್ಯವಹಾರದಲ್ಲಿಯೂ ಚಾಣಾಕ್ಷತನ ತೋರುವುದು ಏಳಿಗೆಗೆ ಕಾರಣವಾಗಲಿದೆ. ವೈದ್ಯ ವೃತ್ತಿಯಲ್ಲಿನ ನಿಮ್ಮ ಸಾಧನೆಗೆ ಸಾಮಾಜಿಕವಾಗಿ ಗೌರವವನ್ನು ಪಡೆದುಕೊಳ್ಳುವಿರಿ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಸುವರ್ಣ)
-----------
ಧನು : ಮನೆಯ ಸಾಕು ಪ್ರಾಣಿಗಳ ಆರೋಗ್ಯ ಆತಂಕಕಾರಿ ವಿಷಯವಾಗಿ ಪರಿಣಮಿಸಬಹುದು. ಶಿಶುವಿನ ಜನನ ಕುಟುಂಬದ ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ. ಸಹನೆಯನ್ನು ಪರೀಕ್ಷಿಸುವ ಸಂದರ್ಭ ಎದುರಾಗಲಿದೆ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಬೂದು)
-----------
ಮಕರ : ಆರ್ಥಿಕ ಬಲ ಮತ್ತು ಪ್ರಯತ್ನ ಬಲವೆಷ್ಟಿದ್ದರೂ ಸಹೋದರರ ಅಥವಾ ಸಂಬಂಧಿಕರ ಸಹಾಯ ಕೇಳುವುದು ಅನಿವಾರ್ಯ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗಲಿದೆ.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಕಪ್ಪು)
------------
ಕುಂಭ : ರಾಜಕೀಯ ವರ್ಗದಲ್ಲಿಅಥವಾ ಸಂಘ-ಸಂಸ್ಥೆಗಳ ಹೊಸ ಹುದ್ದೆಗೆ ಅಭ್ಯರ್ಥಿಯಾಗುವ ಆಕಾಂಕ್ಷೆ ಮುಗಿಲೇರುವುದು. ವ್ಯಕ್ತಿತ್ವಕ್ಕೆ ಚ್ಯುತಿ ಇಲ್ಲದೇ ಸಮಾಜದಲ್ಲಿಗೌರವ ದೊರೆಯಲಿದೆ.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಖಾಕಿ)
-------------
ಮೀನ : ದುರ್ಜನರ ಸಹವಾಸದಿಂದ ಗೌರವ ಮತ್ತು ಹಣ ಕಳೆದುಕೊಳ್ಳುವಂತೆ ಆಗುವುದು. ಸಜ್ಜನರ ಸಹವಾಸ ಮಾಡಿದಲ್ಲಿಸಾಮಾಜಿಕ ಸ್ಥಾನಮಾನ ಹೆಚ್ಚಬಹುದು.