ವಿಕ ಸುದ್ದಿಲೋಕ ಚನ್ನರಾಯಪಟ್ಟಣ ಸಂವಿಧಾನಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ ಪ್ರತಿಮೆಯನ್ನು ಪಟ್ಟಣದ ಮಿನಿವಿಧಾನಸೌಧದ ಎದುರು ನಿಲ್ಲಿಸಿ 10 ತಿಂಗಳಾದರೂ ಅನಾವರಣ ಮಾಡಲು ತಾಲೂಕು ಆಡಳಿತ ಮೀನಮೇಷ ಎಣಿಸುತ್ತಿರುವುದನ್ನು ಖಂಡಿಸಿ ಆ.25ರಂದು ಅರೆಬೆತ್ತಲೆ ಚಳವಳಿ ಹಮ್ಮಿಕೊಳ್ಳುವುದಾಗಿ ಬಿಜೆಪಿ ಮುಖಂಡ ನಂಜುಂಡಮೈಮ್ ತಿಳಿಸಿದರು.
ಈ ಸಂಬಂಧ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ,‘‘ಪ್ರತಿಮೆ ಲೋಕಾರ್ಪಣೆ ಮಾಡಬೇಕೆಂದು 15 ದಿನದ ಹಿಂದೆಯೇ ಮೌನ ಪ್ರತಿಭಟನೆ ಮಾಡಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ,’’ಎಂದರು.
‘‘ಪ್ರತಿಮೆ ಅನಾವರಣಕ್ಕೆ ಇಲ್ಲಸಲ್ಲದ ಕಾರಣಗಳನ್ನು ಮುಂದಿಟ್ಟುಕೊಂಡು ಮುಂದೂಡುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಅವರಿಗೆ ಆಗದಿದ್ದರೆ ನಮಗೆ ಜವಾಬ್ದಾರಿ ನೀಡಿದರೆ ಎಲ್ಲವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರತಿಮೆ ಅನಾವರಣ ಮಾಡುತ್ತೇವೆ. ಮತ್ತೆ ಮುಂದೂಡುವ ಪ್ರಯತ್ನ ಮುಂದುವರಿಸಿದರೆ ಆ.25ರಂದು ವಿವಿಧ ಸಂಘಟನೆಗಳೊಂದಿಗೆ ಸೇರಿ ಅರೆಬೆತ್ತಲೆ ಮೆರವಣಿಗೆ ಮಾಡಲಾಗುವುದು,’’ಎಂದು ಎಚ್ಚರಿಸಿದರು.
ಚಿತ್ರ: ಎಚ್ ಎಸ್ ಎನ್ 23ಸಿಆರ್ ಪಿ2- ಚನ್ನರಾಯಪಟ್ಟಣ ಮಿನಿವಿಧಾನಸೌಧದ ಆವರಣದಲ್ಲಿನಿಲ್ಲಿಸಿರುವ ಡಾ.ಬಿ.ಆರ್ .ಅಂಬೇಡ್ಕರ್ ಪ್ರತಿಮೆ ಅನಾವರಣ ವಿಬಂಳ ಖಂಡಿಸಿ ನಡೆಯುವ ಪ್ರತಿಭಟನೆ ಹಿನ್ನೆಲೆ ಬಿಜೆಪಿ ಮುಖಂಡ ನಂಜುಂಡ ಮೈಮ್ ಭಿತ್ತಿಪತ್ರ ಬಿಡುಗಡೆ ಮಾಡಿದರು.