ಡಿಜಿಟಲ್ ಸುರಕ್ಷತೆ ಕುರಿತು ಅರಿವು

Contributed byknamana4@gmail.com|Vijaya Karnataka
digital security a comprehensive training for students
ವಿಕ ಸುದ್ದಿಲೋಕ ವಿರಾಜಪೇಟೆ

ತಾಲೂಕಿನ ಕಂಡಂಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‘ಸಂಭ್ರಮ ಶನಿವಾರ’ ಅಂಗವಾಗಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಹಾಗೂ ಅಂತರ್ಜಾಲದ (ಇಂಟರ್ ನೆಟ್ ) ಸುರಕ್ಷಿತ ಬಳಕೆ ಕುರಿತು ವಿಶೇಷ ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿಕಂಪ್ಯೂಟರ್ , ಟಿವಿ ಸೇರಿದಂತೆ ಡಿಜಿಟಲ್ ಸಾಧನಗಳನ್ನು ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿಕೊಡಲಾಯಿತು. ಮುಖ್ಯವಾಗಿ ಅಪರಿಚಿತರಿಗೆ ವೈಯಕ್ತಿಕ ಮಾಹಿತಿ ನೀಡದಿರುವುದು, ಸಂದೇಹಾಸ್ಪದ ಲಿಂಕ್ ಗಳನ್ನು ತೆರೆಯದಿರುವುದು ಮತ್ತು ಇಂಟರ್ ನೆಟ್ ಅನ್ನು ಜ್ಞಾನಾರ್ಜನೆಗೆ ಮಾತ್ರ ಸದುಪಯೋಗಪಡಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಜಾಗೃತಿ ಮೂಡಿಸಿದರು.

ಮಕ್ಕಳಲ್ಲಿಸಂವಹನ, ನಾಯಕತ್ವ ಹಾಗೂ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸುವಲ್ಲಿಮಾರ್ಗದರ್ಶನ ನೀಡುತ್ತಾ ವಿದ್ಯಾರ್ಥಿಗಳು ಕಂಪ್ಯೂಟರ್ ಆಧಾರಿತ ಚಟುವಟಿಕೆಗಳು, ಗುಂಪು ಆಟಗಳು ಮತ್ತು ಸಂವಾದಗಳಲ್ಲಿಉತ್ಸಾಹದಿಂದ ಭಾಗವಹಿಸಿದರು. ಶಿಕ್ಷಕರು ವಿದ್ಯಾರ್ಥಿಗಳ ಸಂಶಯಗಳಿಗೆ ಉತ್ತರಿಸಿ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಬಗ್ಗೆ ತಿಳಿವಳಿಕೆ ನೀಡಿದರು.

ಪೊಟೊ:ಎಂಡಿಕೆ22ವಿಪಿಟಿ04ಎ: ಕಂಡಂಗಾಲ ಶಾಲೆಯಲ್ಲಿನಡೆದ ಸಂಭ್ರಮ ಶನಿವಾರ ಕಾರ್ಯಕ್ರಮ