ಸರಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿ, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಉಚಿತವಾಗಿ ಅಗತ್ಯ ಪುಸ್ತಕ ಮತ್ತು ಬರವಣಿಗೆ ಸಾಮಗ್ರಿ ನೀಡುತ್ತಿರುವ ನಿವೃತ್ತ ಉಪನ್ಯಾಸಕ ಬಿ.ಎಸ್ . ಪಾಟೀಲ ಅವರ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಅಭಿಪ್ರಾಯಪಟ್ಟರು.ತಾಲೂಕಿನ ಯಾದಗೂಡ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ , ಪೆನ್ , ಅಂಕಲಿಪಿ, ನಿಘಂಟು ಸೇರಿದಂತೆ ನಾನಾ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು. ‘‘ಯಾವುದೇ ಪ್ರಚಾರದ ಹಂಬಲವಿಲ್ಲದೆ ಸ್ವಂತ ಖರ್ಚಿನಲ್ಲಿನಿರಂತರ 11 ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಬದುಕಿಗೆ ಆಸರೆಯಾಗುತ್ತಿರುವ ಪಾಟೀಲರ ಸಾಮಾಜಿಕ ಕಾಳಜಿ ಅಪಾರವಾದದ್ದು. ಇಂತಹ ಮಹನೀಯರ ಸಹಕಾರದಿಂದ ಸರಕಾರಿ ಶಾಲೆಗಳ ಸಬಲೀಕರಣ ಸಾಧ್ಯ,’’ ಎಂದರು.
ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎ. ಕೊಂಕಣಿ, ನಿವೃತ್ತ ಉಪನ್ಯಾಸಕ ಬಿ.ಎಸ್ . ಪಾಟೀಲ ಮಾತನಾಡಿದರು. ಕೆಎಸ್ ಪಿಎಸ್ ಟಿಎ ಜಿಲ್ಲಾಪ್ರಧಾನ ಕಾರ್ಯದರ್ಶಿ ವಿ.ಎಂ. ನಾಯಕ್ , ಡಿ.ಎಲ್ . ಖೋತ್ ಪಿಯು ಕಾಲೇಜು ಪ್ರಾಚಾರ್ಯ ಬಿ.ಡಿ. ನಿಂಗನೂರಿ, ಮುಖ್ಯಶಿಕ್ಷಕ ಆರ್ .ಕೆ. ಕುಡಬಾಳೆ, ನಿವೃತ್ತ ಯೋಧ ಎ.ಐ. ಕುರಣಿ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಸಹ ಶಿಕ್ಷಕ ಎಂ.ಎ. ಸೈಯದ ನಿರೂಪಿಸಿ, ವಂದಿಸಿದರು.
- 22ಹುಕ್ಕೇರಿ3
ಕಾರ್ಯಕ್ರಮದಲ್ಲಿನಿವೃತ್ತ ಉಪನ್ಯಾಸಕ ಬಿ.ಎಸ್ . ಪಾಟೀಲ ಅವನ್ನು ಸನ್ಮಾನಿಸಲಾಯಿತು.