ವಿಕ ಸುದ್ದಿಲೋಕ ಹನುಮಸಾಗರ‘‘ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವಾಗ ಕಡ್ಡಾಯವಾಗಿ ಪ್ರಮಾಣಿತ ಅಳತೆ ಅನುಸರಿಸಬೇಕು,’’ ಎಂದು ಕೃಷಿ ಅಧಿಕಾರಿ ಆಕಾಶ ದಾನಿ ಹೇಳಿದರು.
ಸಮೀಪದ ಹಿರೇಬನ್ನಿಗೋಳ ಹಾಗೂ ಯಲಬುರ್ತಿ ಗ್ರಾಮಗಳಲ್ಲಿಶುಕ್ರವಾರ ಕಳೆನಾಶಕ ಸುರಕ್ಷಿತ ಬಳಕೆ ಪ್ರಾತ್ಯಕ್ಷಿತ ಜಾಗೃತಿ ಅಭಿಯಾನದಲ್ಲಿಮಾತನಾಡಿದರು. ಕಳೆನಾಶಕ ಸಿಂಪಡಣೆ ಮಾಡುವ ವೇಳೆ ರೈತರು
ಮುಖವಾಡ, ಕೈಗವಸು ಹಾಗೂ ರಕ್ಷಣಾತ್ಮಕ ಉಡುಪು ಧರಿಸಬೇಕು. ಗಾಳಿಯ ದಿಕ್ಕಿಗೆ ಅಭಿಮುಖವಾಗಿ ಔಷಧ ಸಿಂಪಡಿಸಬಾರದರು. ಕೆಲಸ ಮುಗಿದ ನಂತರ ಕೈ, ಕಾಲುಗಳನ್ನು ತೊಳೆದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂದೀಪ್ , ಶಿವರಾಜ, ಪ್ರಗತಿಪರ ರೈತರಾದ ಶರಣಪ್ಪ ಭಟ್ಟದ್ , ಶರಣಪ್ಪ, ಜಾಕೀರ ಹುಸೇನ, ಭೀಮೇಶ, ಬಸವರಾಜ ಭಟ್ಟದ್ , ಕನಕಪ್ಪ, ಪಶು ಸಖಿ ಇದ್ದರು.
ಕೆಪಿಎಲ್ 22ಎಚ್ ಎಸ್ ಆರ್ ಫೋಟೊ1:ಹನುಮಸಾಗರ ಸಮೀಪದ ಯಲಬುರ್ತಿ ಗ್ರಾಮದಲ್ಲಿಕೃಷಿ ಇಲಾಖೆಯಿಂದ ಕಳೆನಾಶಕ ಸುರಕ್ಷಿತ ಬಳಕೆ ಪ್ರಾತ್ಯಕ್ಷಿತ ಜಾಗೃತಿ ಮೂಡಿಸಲಾಯಿತು.