ಫ್ರಂಟ್

Contributed byJaya shree|Vijaya Karnataka
india to establish its own spaceport by 2035 isro president v narayanan reveals
2035ರೊಳಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ

- ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಘೋಷಣೆ
- ಮೊದಲ ಮಾಡ್ಯೂಲ್ ಗೆ ಅನುಮೋದನೆ

- ತಂತ್ರಜ್ಞಾನದ ಸಾಮರ್ಥ್ಯ ಹೆಚ್ಚಳ

- ಪ್ರಗತಿಯಲ್ಲಿಹಲವು ಯೋಜನೆಗಳು

ಭಾರತವು 2035ರೊಳಗೆ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದು, ಪ್ರಸ್ತಾವಿತ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾಡ್ಯೂಲ್ ಗೆ ಈಗಾಗಲೇ ಅನುಮೋದನೆ ದೊರೆತಿದೆ ಎಂದು ಇಸ್ರೊ ಅಧ್ಯಕ್ಷ ಡಾ.ವಿ.ನಾರಾಯಣನ್ ಭಾನುವಾರ ತಿಳಿಸಿದ್ದಾರೆ.

ಅಹಮದಾಬಾದ್ ನಲ್ಲಿನಡೆದ ಮೂರನೇ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿಮಾತನಾಡಿದ ಅವರು, ‘‘ಬಾಹ್ಯಾಕಾಶ ತಂತ್ರಜ್ಞಾನದಲ್ಲಿಭಾರತದ ಸಾಮರ್ಥ್ಯವು ನಿರಂತರವಾಗಿ ಹೆಚ್ಚುತ್ತಿದ್ದು, ಪ್ರಸ್ತುತ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿನೇರವಾಗಿ ನಾಗರಿಕರಿಗೆ ನೆರವಾಗುವ ಅಪ್ಲಿಕೇಶನ್ ಗಳನ್ನು ಬಳಸಲಾಗುತ್ತಿದೆ’’ ಎಂದರು.

‘‘64 ವರ್ಷಗಳ ಹಿಂದೆ ಆರಂಭವಾದ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಇಂದು ಭೂ ವೀಕ್ಷಣೆ, ದೂರಸಂವೇದಿ, ದೂರಸಂಚಾರ, ಟೆಲಿ-ಎಜುಕೇಷನ್ , ವಿಪತ್ತು ನಿರ್ವಹಣೆ, ನ್ಯಾವಿಗೇಷನ್ ಮತ್ತು ರಕ್ಷಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿಸಾಮಾನ್ಯ ಜನರಿಗೆ ಸೇವೆ ಸಲ್ಲಿಸುತ್ತಿದೆ ಎಂದು ವಿ.ನಾರಾಯಣನ್ ವಿವರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನೇತೃತ್ವದಲ್ಲಿಗಗನಯಾನ ಮಾನವ ಸಹಿತ ಬಾಹ್ಯಾಕಾಶ ಯಾನ ಮತ್ತು ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದಂತಹ ಪ್ರಮುಖ ಯೋಜನೆಗಳು ಪ್ರಗತಿಯಲ್ಲಿವೆ’’ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ , ಚಂದ್ರಯಾನ-3 ಯಶಸ್ಸಿನ ನೆನಪಿಗಾಗಿ ಮತ್ತು ಚಂದ್ರನ ದಕ್ಷಿಣ ಧ್ರುವದ ‘ಶಿವ ಶಕ್ತಿ ಪಾಯಿಂಟ್ ’ ತಲುಪಿದ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸುತ್ತಿದ್ದೇವೆ, ಬಾಹ್ಯಾಕಾಶ ಕ್ಷೇತ್ರದಲ್ಲಿಖಾಸಗೀಕರಣಕ್ಕೆ ಅವಕಾಶ ಕಲ್ಪಿಸಿರುವುದರಿಂದ ದೇಶದ ಉದ್ಯಮಗಳಿಗೆ ಹೊಸ ಸಾಧ್ಯತೆಗಳು ತೆರೆದುಕೊಂಡಿದ್ದು, ಇಸ್ರೊದ ಜೊತೆಗೆ ಖಾಸಗಿ ಸ್ಟಾರ್ಟ್ ಅಪ್ ಗಳು ಕೈಜೋಡಿಸುತ್ತಿರುವುದರಿಂದ ಉಪಗ್ರಹ ತಯಾರಿಕೆ ಹಾಗೂ ಉಡಾವಣೆಯ ಪ್ರಕ್ರಿಯೆಗಳು ಮತ್ತಷ್ಟು ಚುರುಕುಗೊಂಡಿವೆ’’ ಎಂದು ಅವರು ತಿಳಿಸಿದರು.