ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

Contributed byraja.bandihal@gmail.com|Vijaya Karnataka
observance of national service scheme day
ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

ವಿಕ ಸುದ್ದಿಲೋಕ ಹನುಮಸಾಗರ
‘‘ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಜಯಂತಿ ನಿಮಿತ್ತ ಸದ್ಭಾವನ ದಿನಾಚರಣೆ ಆಚರಿಸಲಾಗುತ್ತದೆ,’’ ಎಂದು ಪ್ರಾಂಶುಲರಾದ ಲಲಿತಮ್ಮ. ಟಿ. ಹೇಳಿದರು.

ಸಮೀಪದ ಹನುಮನಾಳ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಗುರುವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸದ್ಭಾವನ ದಿನಾಚರಣೆಯಲ್ಲಿಮಾತನಾಡಿದರು.

ದೇಶದಲ್ಲಿಶಾಂತಿ, ಕೋಮು ಸೌರ್ಹಾದತೆ, ರಾಷ್ಟ್ರೀಯ ಏಕತೆ ಮತ್ತು ಸಹೋದರತ್ವವನ್ನು ಉತ್ತೇಜಿಸಲು ಹಮ್ಮಿಕೊಳ್ಳಲಾಗಿದೆ ಎಂದರು.

ಉಪನ್ಯಾಸಕರಾದ ಸಂಜಯ ಬಡಿಗೇರ, ಡಾ.ಉಮಾದೇವಿ, ಶರಣಪ್ಪ ಪೂಜಾರ, ರಮೇಶ ವಜ್ರಬಂಡಿ, ಯಮುನಪ್ಪ ಚಳಗೇರಿ, ಶರಣಪ್ಪ ಮೇಟಿ, ಸಿಬ್ಬಂದಿ ಸರೋಜಮ್ಮ ಇದ್ದರು.

ಕೆಪಿಎಲ್ 20ಎಚ್ ಎಸ್ ಆರ್ ಫೋಟೊ3:ಹನುಮಸಾಗರ ಸಮೀಪದ ಹನುಮನಾಳ ಸರಕಾರಿ ಪಿಯು ಕಾಲೇಜಿನಲ್ಲಿರಾಜೀವ್ ಗಾಂಧಿ ಸದ್ಭಾವನಾ ದಿನ ಆಚರಿಸಲಾಯಿತು.