25 ರಂದು ಚಿಂತನ ಸಭೆ (ಮಹತ್ವದ್ದು

Contributed byraviraj.galagali@timesgroup.com|Vijaya Karnataka
meeting of hindu communities on the 25th
25 ರಂದು ಚಿಂತನ ಸಭೆ

ಬಾಗಲಕೋಟೆ : ‘‘ರಾಷ್ಟ್ರೀಯ ಕೋಲಿ, ಬೆಸ್ ್ತ, ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭೆಯಿಂದ ಆ.25 ರಂದು ಹುಬ್ಬಳ್ಳಿಯಲ್ಲಿಚಿಂತನ-ಮಂಥನ ಸಭೆ ಆಯೋಜಿಸಲಾಗಿದೆ’’ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಹಳೇಗೌಡರ ತಿಳಿಸಿದರು.
ನಗರದಲ್ಲಿಶನಿವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು ‘‘ಸವಾಯಿ ಗಂಧರ್ವ ಹಾಲ್ ನಲ್ಲಿಅಂದು ಬೆಳಗ್ಗೆ 10ಕ್ಕೆ ಸಭೆ ನಡೆಯಲಿದೆ. ಹಿಂದುಳಿದ ವರ್ಗಗಳ ನಾಯಕರು ಹಾಗೂ ನಾಯಕತ್ವ ಉಳಿವಿಗಾಗಿ ಸಭೆ ಹಮ್ಮಿಕೊಳ್ಳಲಾಗಿದೆ. ರಾಜಕೀಯ ಕ್ಷೇತ್ರದಲ್ಲಿಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಜಾತಿ, ಹಣದ ಪ್ರಭಾವ ಹೆಚ್ಚಾಗಿದೆ. ಎಲ್ಲರಿಗೂ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಚಿಂತನೆ ನಡೆಸಲಾಗುತ್ತದೆ. ಸಣ್ಣ ಸಮುದಾಯಗಳ ಕಡೆಗಣನೆ ತಡೆಯಲು ಸಮಾಜದ ಎಲ್ಲರೂ ಒಗ್ಗೂಡಬೇಕಿದೆ. ಈ ನಿಟ್ಟಿನಲ್ಲಿಸಭೆಯಲ್ಲಿನಿರ್ಧಾರ ಕೈಗೊಳ್ಳಲಾಗುತ್ತದೆ’’ ಎಂದು ಹೇಳಿದರು.

‘‘ಸಚಿವರಾದ ಸಂತೋಷ ಲಾಡ್ , ಮಂಕಾಳ ವೈದ್ಯ, ಸಂಸದರಾದ ಯದುವೀರ್ ಒಡೆಯರ್ , ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ .ಈಶ್ವರಪ್ಪ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಗೂಳಿಹಟ್ಟಿ ಶೇಖರ, ಪಿಜಿಆರ್ ಸಿಂಧ್ಯಾ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ದುರ್ಗಮ್ಮ ಬಿಜವಾಡ, ರಾಜಗುರು ಸ್ವಾಮೀಜಿ ಸೇರಿದಂತೆ ನಾನಾ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಭವಿಷ್ಯದಲ್ಲಿಬಾಗಲಕೋಟೆಯಲ್ಲೂಚಿಂತನ ಮಂಥನ ಸಭೆ ಆಯೋಜಿಸುವ ಉದ್ದೇಶವಿದೆ’’ ಎಂದರು. ಅನಗವಾಡಿಯ ನಬಿ ನದಾಫ್ , ವಿನಯಕುಮಾರ ಭರಮಗೌಡರ, ಸುರೇಶ ಹಡಪದ, ಹಣಮಂತ ಮಡಿವಾಳರ, ಸಂಗಮೇಶ ಹೂಗಾರ ಇದ್ದರು.

----