ಮೊಳಕಾಲ್ಮುರು: ನ್ಯಾಯಾಲಯಗಳಲ್ಲಿಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಸೆಪ್ಟಂಬರ್ ತಿಂಗಳು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀಶರಾದ ಡಿ.ಜೆ.ಸುಧೀನ್ ಕುಮಾರ್ ತಿಳಿಸಿದರು. ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಜಿಲ್ಲೆಯ ಎಲ್ಲತಾಲೂಕುಗಳಲ್ಲಿಲೋಕ ಅದಲಾತ್ ನಡೆಯಲಿದೆ. ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದ್ದು, ಎರಡೂ ಕಡೆಯವರ ಸಮ್ಮತಿಯೊಂದಿಗೆ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಪ್ರಕರಣ ದಾಖಲಿಸಲು ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ. ಚೆಕ್ ಬೌನ್ಸ್ , ಬ್ಯಾಂಕ್ ಸಾಲ, ಮೋಟಾರು ವಾಹನ ಅಪಘಾತ ಪರಿಹಾರ, ಕುಟುಂಬ ಕಲಹ, ಕಾರ್ಮಿಕ ವಿವಾದ, ವಿದ್ಯುತ್ ಹಾಗೂ ನೀರಿನ ಬಿಲ್ ಇನ್ನಿತರ ಪ್ರಕರಣಗಳನ್ನು ಪರಿಗಣಿಸಲಾಗುವುದು ಎಂದರು. ನ್ಯಾಯಾಧೀಶರಾದ ಬಿ.ಆರ್ .ಪುನಿತ್ , ವಕೀಲರ ಸಂಘದ ತಾಲೂಕು ಅಧ್ಯಕ್ಷ ಪಿ.ಜಿ.ವಸಂತ ಕುಮಾರ್ , ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಎ.ಕೆ.ತಿಮ್ಮಪ್ಪ, ಸಹಾಯಕ ಸರಕಾರಿ ವಕೀಲ ಕೆ.ಮೊಹಮ್ಮದ್ ಶಂಶೀರ್ ಆಲಿ ಇದ್ದರು.