ಕೇಂದ್ರ ಗ್ರಂಥಾಲಯಕ್ಕೆ ಕಾಯಕಲ್ಪ - ಸ್ಟೋರಿ

Contributed bypeerasab995@gmail.com|Vijaya Karnataka
revitalization of bellary central library model building construction plan
*ಕೆಎಂಇಆರ್ ಸಿನಿಂದ ಮಾದರಿ ಕಟ್ಟಡ ನಿರ್ಮಾಣ

*ಡಿಸಿ, ಜಿಪಂ ಸಿಇಒ ಅವರಿಂದ ಸ್ಥಳ ಪರಿಶೀಲನೆ
*ಗ್ರಂಥಾಲಯದಲ್ಲಿಮೂಲಸೌಕರ್ಯ ಕೊರತೆ

ಕೇಂದ್ರ ಗ್ರಂಥಾಲಯಕ್ಕೆ ಕಾಯಕಲ್ಪ

ಬೂದುಗುಪ್ಪ ಪೀರಾಸಾಬ್ ಬಳ್ಳಾರಿ

ಜ್ಞಾನಾರ್ಜನೆಗೆ ಪ್ರತಿದಿನ ನಗರದ ಕೇಂದ್ರ ಗ್ರಂಥಾಲಯಕ್ಕೆ ಬರುವ ಸಾರ್ವಜನಿಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದಲ್ಲೇ ಮಾದರಿ, ಅತ್ಯಾಧುನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಕಳೆದ ಹದಿನೈದು ದಿನಗಳ ಹಿಂದೆ ನಗರದ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಸೇರಿ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಂಥಾಲಯ ಆವರಣದಲ್ಲಿರುವ 80*100 ಅಳತೆಯ ಖಾಲಿ ಜಾಗದಲ್ಲಿಕೆಎಂಇಆರ್ ಸಿ ಅನುದಾನದಡಿ ಮೂರು ಮಹಡಿಯ ಹೈಟೆಕ್ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಮಾದರಿ ನಕ್ಷೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂಬುವುದು ಗೊತ್ತಾಗಿದೆ.

* ಪುಸ್ತಕ ಎರವಲು ವ್ಯವಸ್ಥೆ

ನಗರ ಕೇಂದ್ರ ಗ್ರಂಥಾಲಯದಲ್ಲಿಸದ್ಯ 80 ದಿಂದ 90 ಸಾವಿರದಷ್ಟು ವೈವಿಧ್ಯಮಯ ಪುಸ್ತಕಗಳ ಸಂಗ್ರಹವಿದೆ. ನಿತ್ಯ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಗ್ರಂಥಾಲಯ ತೆರೆದಿರಲಿದ್ದು, ನಿತ್ಯ 1 ಸಾವಿರ ದಿಂದ 1,200 ರಷ್ಟು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಅಭ್ಯಾಸಕ್ಕಾಗಿ ಭೇಟಿ ನೀಡುತ್ತಿದ್ದಾರೆ. ಇಲ್ಲಿಪತ್ರಿಕೆ, ನಿಯತಕಾಲಿಕೆ, ಸ್ಪರ್ಧಾತ್ಮಕ ಪರೀಕ್ಷಾ ವಿಭಾಗ ಹಾಗೂ ಪುಸ್ತಕ ಎರವಲು ಪಡೆಯುವ ವ್ಯವಸ್ಥೆಯಿದೆ. ಕೇಂದ್ರ ಗ್ರಂಥಾಲಯದ ಮೊದಲನೇ ಮಹಡಿಯಲ್ಲಿಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇಲ್ಲಿಆನ್ ಲೈನ್ ಅಧ್ಯಯನಕ್ಕಾಗಿ 5 ರಿಂದ 6 ಕಂಪ್ಯೂಟರ್ ಹಾಗೂ ಹೈಸ್ಪೀಡ್ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಐಎಎಸ್ , ಕೆಎಎಸ್ ಸೇರಿದಂತೆ ನಾನಾ ಪರೀಕ್ಷೆಗಳ ರೆಫರೆನ್ಸ್ ಪುಸ್ತಕಗಳ ಬೃಹತ್ ಸಂಗ್ರಹವಿದೆ. ಒಂದೇ ಬಾರಿಗೆ 120 ರಿಂದ 150 ವಿದ್ಯಾರ್ಥಿಗಳು ಪ್ರಶಾಂತ ವಾತಾವರಣದಲ್ಲಿಕುಳಿತು ಅಧ್ಯಯನ ಮಾಡಲು ಅವಕಾಶವಿದೆ.

ಗ್ರಂಥಾಲಯಕ್ಕೆ ಬರುವ ಓದುಗರಿಗೆ ಸಮಯ ಉಳಿತಾಯ ಮಾಡಲು ಲೈಬ್ರರಿ ಇನ್ಫರ್ಮೇಷನ್ ಕಿಯಾಸ್ಕ್ ಎಂಬ ಡಿಜಿಟಲ್ ಸೌಲಭ್ಯ ಒದಗಿಸಲಾಗಿದೆ. ಈ ತಂತ್ರಜ್ಞಾನದ ಮೂಲಕ ಓದುಗರು ತಮ್ಮ ನೆಚ್ಚಿನ ಪುಸ್ತಕದ ಶೀರ್ಷಿಕೆ, ಲೇಖಕರ ಹೆಸರು ಅಥವಾ ವಿಷಯದ ಆಧಾರದ ಮೇಲೆ ಲೈಬ್ರರಿಯಲ್ಲಿಪುಸ್ತಕ ಇದೆಯೋ ಇಲ್ಲವೋ ಮತ್ತು ಅದು ಯಾವ ರಾರ ಯಕ್ ನಲ್ಲಿದೆ ಎಂಬುದನ್ನು ಕ್ಷಣಾರ್ಧದಲ್ಲಿಶೋಧಿಸಬಹುದಾಗಿದೆ.

*ಬಾಕ್ಸ್

ಗ್ರಂಥಾಲಯದಲ್ಲಿಮೂಲಸೌಕರ್ಯ ಕೊರತೆ

ಕೇಂದ್ರ ಗ್ರಂಥಾಲಯದ ಆವರಣದಲ್ಲಿಮೂಲಸೌಕರ್ಯ ಕೊರತೆ ಹಾಗೂ ಶೌಚಾಲಯ ನಿರ್ವಹಣೆ ಸಮಸ್ಯೆಯಿಂದ ಬಳಲುತ್ತಿದೆ. ಶೌಚಾಲಯವು ಹಿಂದೆ ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿತ್ತು. ಬೆಳಗಿನ ಜಾವ ವಾಕಿಂಗ್ ಬರುವ ಸಾರ್ವಜನಿಕರಿಗಾಗಿ ನಿರ್ಮಿಸಲಾಗಿತ್ತು. ಆದರೆ, ಗ್ರಂಥಾಲಯದ ಸಮಯಕ್ಕಿಂತ ಮುಂಚೆಯೇ ಸಾರ್ವಜನಿಕರು ನೀರು ಹಾಗೂ ಶೌಚಾಲಯ ಸೌಲಭ್ಯ ಕೇಳುತ್ತಿದ್ದ ಹಿನ್ನೆಲೆ ನಿರ್ವಹಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಗ್ರಂಥಾಲಯ ಆವರಣದಲ್ಲಿಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ತಲಾ 3 ಶೌಚಾಲಯಗಳಿವೆ. ಸರಿಯಾದ ರೀತಿಯಲ್ಲಿನಿರ್ವಹಣೆಯಿಲ್ಲದೇ ಗಬ್ಬು ನಾರುತ್ತಿದೆ. ಅಭ್ಯಾಸಕ್ಕಾಗಿ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಹೆಚ್ಚುವರಿ ಶೌಚಾಲಯ ಕಟ್ಟಣಗಳನ್ನು ನಿರ್ಮಾಣ ಮಾಡಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

*ಕೋಟ್ *

ಈಗಾಗಲೇ ಕೇಂದ್ರ ಗ್ರಂಥಾಲಯ ಉನ್ನತೀಕರಿಸುವ ಪ್ರಕ್ರಿಯೆ ನಡೆದಿದ್ದು, ಕೆಎಂಇಆರ್ ಸಿ ಅನುದಾನದಲ್ಲಿರಾಜ್ಯದಲ್ಲೇ ಮಾದರಿ ಗ್ರಂಥಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರು ಸ್ಥಳ ಪರಿಶೀಲಿಸಿದ್ದಾರೆ.

-ನರಸಣ್ಣ, ಮುಖ್ಯ ಗ್ರಂಥಾಲಯ ಅಧಿಕಾರಿ, ಕೇಂದ್ರ ಗ್ರಂಥಾಲಯ, ಬಳ್ಳಾರಿ.

23 ಬಿಎಲ್ ವೈ ಪೀರಾಸಾಬ್ 01

ಬಳ್ಳಾರಿಯ ಕೇಂದ್ರ ಗ್ರಂಥಾಲಯ ಹೊರನೋಟ.

23 ಬಿಎಲ್ ವೈ ಪೀರಾಸಾಬ್ 02

ನರಸಣ್ಣ