ಲಕ್ಷ್ಮೇ ಸಹಕಾರಿ ಸಂಘಕ್ಕೆ 51.18 ಲಕ್ಷ ರೂ.ಲಾಭ

Contributed bykotekarp@gmail.com|Vijaya Karnataka
lakshmee cooperative society records profit of 5118 lakhs important announcements at 30th annual meeting
ವಿಕ ಸುದ್ದಿಲೋಕ ಯಮಕನಮರಡಿ

ಸಾಲ ನೀಡಿಕೆಯಲ್ಲಿರಾಷ್ಟ್ರೀಕೃತ ಬ್ಯಾಂಕ್ ಗಳ ಕಠಿಣ ನಿಯಮಾವಳಿಗಳ ಮಧ್ಯೆ ಸಹಕಾರಿ ಬ್ಯಾಂಕ್ ಗಳು ಬಡವರ ಆರ್ಥಿಕ ಸುಧಾರಣೆಗೆ ಸಂಜೀವಿನಿಯಾಗಿವೆ ಎಂದು ಇಲ್ಲಿನ ಲಕ್ಷಿತ್ರ್ಮೕ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ರವೀಂದ್ರ ಜಿಂಡ್ರಾಳಿ ಹೇಳಿದರು.
ಅವರು ಗ್ರಾಮದಲ್ಲಿಭಾನುವಾರ ನಡೆದ ಲಕ್ಷಿತ್ರ್ಮೕ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 30ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿಮಾತನಾಡಿದರು. ‘‘ಸಹಕಾರ ಸಂಘಗಳು ಇಂದಿನ ನಾನಾ ಸವಾಲುಗಳ ಮಧ್ಯೆಯೂ ಬೆಳೆದು ನಿಲ್ಲಲು ಸಾಲ ಮರುಪಾವತಿಯಲ್ಲಿಪ್ರಾಮಾಣಿಕತೆ ಬೇಕು,’’ ಎಂದರು.

‘‘ಸಂಘವು 3,625 ಸದಸ್ಯರು, 38.74ಕೋಟಿ ರೂ. ಠೇವು, 42.69 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 29.33 ಕೋಟಿ ರೂ. ಸಾಲವನ್ನು ನೀಡಲಾಗಿದ್ದು, 2025-26 ಸಾಲಿನಲ್ಲಿ51.18 ಲಕ್ಷ ರೂ.ಲಾಭ ಗಳಿಸಿದೆ. ಸಂಘದ ಶೇರುದಾರರಿಗೆ ಶೇ. 20 ರಷ್ಟು ಲಾಭಾಂಶ ನೀಡಲಾಗುವುದು,’’ ಎಂದರು.

ಸಂಘದ ಅಧ್ಯಕ್ಷ ಅಡಿವೆಪ್ಪಾ ಜಿಂಡ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಪ್ರಾಮಾಣಿಕ ಸಾಲಗಾರರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎ.ಬಿ.ನಾಯಿಕ, ಸಮರ್ಥ ಜಿಂಡ್ರಾಳಿ, ವಕೀಲರಾದ ಆರ್ .ಬಿ.ಶಿರಗಾಂವಕರ, ನಿಂಗಣ್ಣಾ ಪಾಟೀಲ ಮಾತನಾಡಿದರು.

ಉಪಾಧ್ಯಕ್ಷ ಬಾಳಪ್ಪಾ ಮಲಾಜಿ, ಮಾರುತಿ ಕಮತಿ, ಎ.ಬಿ.ಚಂದರಗಿ, ಸುರೇಶ ಬೆಣ್ಣಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ರಾಜು ಸೂಜಿ ವಾರ್ಷಿಕ ವರದಿ ಓದಿ ಒಪ್ಪಿಗೆ ಪಡೆದರು. ಎಸ್ .ಐ.ಅಮ್ಮಿಬಾವಿ, ಎಂ.ಬಿ.ರೇವಣ್ಣವರ ನಿರೂಪಿಸಿದರು. ನಿಂಗಗೌಡಾ ಪಾಟೀಲ ವಂದಿಸಿದರು.

-23ವೈಎಂಂಡಿ1

ಯಮಕನಮರಡಿಯಲ್ಲಿಶ್ರೀ ಲಕ್ಷಿತ್ರ್ಮೕ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 30ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಅಧ್ಯಕ್ಷ ಅಡಿವೆಪ್ಪಾ ಜಿಂಡ್ರಾಳಿ ಉದ್ಘಾಟಿಸಿದರು.