ಕ್ಲಬ್ ಕಾರ್ಯಕ್ರಮ ಯಶಸ್ವಿಗೊಳಿಸಿ

Contributed bysidramappasn@gmail.com|Vijaya Karnataka
lions club tarikere inspiration for members to work together harmoniously
ಲಯನ್ಸ್ ಜಿಲ್ಲಾರಾಜ್ಯಪಾಲ ಎಚ್ .ಎಂ.ತಾರಾನಾಥ್ ಮನವಿ

ಕ್ಲಬ್ ಕಾರ್ಯಕ್ರಮ ಯಶಸ್ವಿಗೊಳಿಸಿ
ವಿಕ ಸುದ್ದಿಲೋಕ ತರೀಕೆರೆ

ಕ್ಲಬ್ ನ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಎಲ್ಲರೂ ಸಹಕರಿಸಬೇಕು ಎಂದು ಲಯನ್ಸ್ ಕ್ಲಬ್ ಜಿಲ್ಲಾರಾಜ್ಯಪಾಲ ಎಚ್ .ಎಂ.ತಾರಾನಾಥ್ ಹೇಳಿದರು.

ಅವರು ಪಟ್ಟಣದಲ್ಲಿಇತ್ತೀಚೆಗೆ ಆಯೋಜಿಸಿದ್ದ ಲಯನ್ಸ್ ಇಂಟರ್ ನ್ಯಾಷನಲ್ ನ ಲಯನ್ಸ್ ಕ್ಲಬ್ ತರೀಕೆರೆ ಅಮರಾವತಿ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲಾಸದಸ್ಯರು ಒಳ್ಳೆಯ ಮನಸ್ಸಿನಿಂದ ಕ್ಲಬ್ ನಡೆಸಿಕೊಂಡು ಹೋಗಬೇಕು. ಸಮಾಜಮುಖಿ ಕೆಲಸ, ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಎಚ್ .ಸಿ.ಗೋಪಾಲಕೃಷ್ಣ ಮಾತಾಡಿ, ಕ್ಲಬ್ ನ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ. ಲಯನ್ಸ್ ಕ್ಲಬ್ ಶಿಸ್ತಿಗೆ ಹೆಸರಾಗಿದೆ. ಜನಪರ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದರು.

ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಎಚ್ .ಆರ್ .ಹರೀಶ್ ಪ್ರಮಾಣ ವಚನ ಬೋಧಿಸಿದರು.

ಲಯನ್ಸ್ ಕ್ಲಬ್ ಮೊದಲನೇ ಜಿಲ್ಲಾಉಪರಾಜ್ಯಪಾಲ ಗೋವರ್ಧನ್ ಶೆಣೈ, ಲತಾ ಗೋಪಾಲಕೃಷ್ಣ, ವೆಂಕಟೇಶ್ ಹೆಬ್ಬಾರ್ , ಜಗದೀಶ್ ಎಡಪಾಡಿತಾಯ, ಲಕ್ಷತ್ರ್ಮಣ್ ಗೌಡ, ಜಿ.ಎಂ.ಪ್ರಕಾಶ್ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ರವಿ ದಳವಾಯಿ, ಅಜ್ಜಂಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎಂ.ಯೋಗೀಶ್ , ಕಾರ್ಯದರ್ಶಿ ಎಚ್ .ಡಿ.ಮಾಲತಿ, ಸತೀಶ್ , ಟಿ.ಆರ್ .ಮುರಳಿ, ಖಜಾಂಚಿ ಬಿ.ಶಶಿಧರ್ , ಬಿ.ಎಸ್ .ಭಗವಾನ್ ಹಾಗೂ ಇತರರಿದ್ದರು.

22ತರೀಕೆರೆ2 :

ತರೀಕೆರೆ ಪಟ್ಟಣದಲ್ಲಿಇತ್ತೀಚೆಗೆ ಆಯೋಜಿಸಿದ್ದ ಲಯನ್ಸ್ ಇಂಟರ್ ನ್ಯಾಷನಲ್ ನ ಲಯನ್ಸ್ ಕ್ಲಬ್ ತರೀಕೆರೆ ಅಮರಾವತಿ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾರಾಜ್ಯಪಾಲ ಎಚ್ .ಎಂ.ತಾರಾನಾಥ್ ಉದ್ಘಾಟಿಸಿದರು.