ವಿಕ ಸುದ್ದಿಲೋಕ ಚಿತ್ರದುರ್ಗದೇಹ ಮತ್ತು ಮನಸ್ಸನ್ನು ಆರೋಗ್ಯ ವಾಗಿ ಇರಿಸಿಕೊಳ್ಳಲು ಕೆಲವೊಂದು ಆರೋಗ್ಯ ಸೂತ್ರಗಳನ್ನು ಪಾಲಿಸಬೇಕು, ದ್ವೇಷ, ಅಸೂಯೆ ಬಿಟ್ಟರೆ ನೆಮ್ಮದಿಯಿಂದ ಇರಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಸುದರ್ಶನ್ ಕುಮಾರ್ ತಿಳಿಸಿದರು.
ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಬಳಿಯ ಕೆಂಗುಂಟೆಯಲ್ಲಿಶುಕ್ರವಾರ ಮಾರುತಿ ನಿವೃತ್ತ ನೌಕರರ ಸಂಘ ಮತ್ತು ಗ್ರಾಮಸ್ಥರು ಹಾಗೂ ರೋಟರಿ ಕ್ಲಬ್ ಹೊಳಲ್ಕೆರೆ ಸಹಯೋಗದಲ್ಲಿವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ 80 ವರ್ಷ ಮತ್ತು ಮೇಲ್ಪಟ್ಟವರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿಶತಾಯುಷಿಗಳು ಸಿಗುವುದೇ ಅಪರೂಪ. 60 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರಿಕರೆಂದು ವಿಶ್ವಸಂಸ್ಥೆ ಪರಿಗಣಿಸಿದೆ. ವಯಸ್ಸು ಮತ್ತು ಅನಾರೋಗ್ಯದ ಕಾರಣ ಹಿರಿಯರು ಜೀವನದಲ್ಲಿಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೈಹಿಕ ದುರ್ಬಲತೆ ಸಹಜ. ಇದರಿಂದ ಮನಸ್ಸಿನ ಸ್ಫೂರ್ತಿ ಕಳೆದುಕೊಳ್ಳಬಾರದು. ನಿವೃತ್ತಿ ನಂತರ ಜೀವನ ಮುಗಿಯಿತು ಎಂದು ಕೊರಗುವುದು ಬೇಡ ಎಂದು ಹಿರಿಯರಲ್ಲಿಮನವಿ ಮಾಡಿದರು.
ನಟರಾಜ್ ಮಾತನಾಡಿ, ಐಷಾರಾಮಿ ಜೀವನಕ್ಕಾಗಿ ಹಣದ ಹಿಂದೆ ಬಿದ್ದವರು ನೆಮ್ಮದಿ ಕಳೆದುಕೊಂಡು ಹತಾಶರಾಗುತ್ತಾರೆ. ಯಾವುದೇ ಕಾರಣಕ್ಕೂ ಒತ್ತಡ ಮಾಡಿಕೊಳ್ಳಬೇಡಿ. ಇದ್ದುದರಲ್ಲಿಯೇ ಸಮಾಧಾನವಾಗಿ ಜೀವಿಸಿ ಎಂದು ಹಿರಿಯ ನಾಗರಿಕರಿಗೆ ಸಲಹೆ ನೀಡಿದರು.
ಹಾಲಪ್ಪ, ಎಲ್ .ರಂಗಪ್ಪ, ಶಿವಲಿಂಗಣ್ಣ, ರಾಜು, ತಿಪ್ಪೇಸ್ವಾಮಿ, ಬಸವಂತಪ್ಪ, ಶಿವಕುಮಾರ್ , ಷಡಕ್ಷರಪ್ಪ, ರೇವಣ್ಣ, ಸೋಮಶೇಖರಪ್ಪ, ಕುಬೇರಣ್ಣ, ರುದ್ರಪ್ಪ, ಲೋಕಣ್ಣ, ಮಹದೇವಪ್ಪ, ಓಂಕಾರಪ್ಪ, ನಂದೀಶಪ್ಪ, ರೇವಣ್ಣ, ಈಶ್ವರಪ್ಪ, ಹನುಮಂತಪ್ಪ, ಶಾಂತಪ್ಪ, ನಾಗಪ್ಪ, ಗೌರಮ್ಮ, ಸುಶೀಲಮ್ಮ, ಶಾಂತಮ್ಮ, ಓಂಕಾರಮ್ಮ, ಗಿರಿಜಮ್ಮ, ಸಾಕಮ್ಮ, ರುದ್ರಮ್ಮ ಇವರನ್ನು ಸನ್ಮಾನಿಸಲಾಯಿತು. ಶತಾಯುಷಿ ಡಿ.ಎಚ್ .ಪರಮೇಶ್ವರಪ್ಪ, ಮಾರುತಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್ .ಬಿ.ರಾಜಪ್ಪ, ಗೌರವಾಧ್ಯಕ್ಷ ಎನ್ .ಸಿ.ಎನ್ .ರಾಜಪ್ಪ, ಕಾರ್ಯದರ್ಶಿ ಡಾ.ಎಸ್ .ಪಿ.ರವಿ ಇದ್ದರು.
--
ಫೋಟೊ ಕ್ಯಾಪ್ಷನ್ /23ಸಿಟಿಡಿ31
ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಬಳಿಯ ಕೆಂಗುಂಟೆಯಲ್ಲಿಶುಕ್ರವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ80 ವರ್ಷ ಮೇಲ್ಪಟ್ಟ ಹಿರಿಯರನ್ನು ಸನ್ಮಾನಿಸಲಾಯಿತು.